ಆತ ಭವಿಷ್ಯದ ತಾರೆ: ದ. ಆಫ್ರಿಕಾ ಯುವ ಆಟಗಾರನ ಬಗ್ಗೆ ಗಂಭೀರ್ ಪ್ರಶಂಸೆ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ಭರ್ಜರಿ 87 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಭಾರತ ನೀಡಿದ 212 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. ದಕ್ಷಿಣ ಆಪ್ರಿಕಾದ ಈ ಗೆಲುವಿನಲ್ಲಿ ನಿರ್ಣಾಯಕ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಧಾನ ಕೊಡುಗೆ ನೀಡಿದ್ದು ಯುವ ಆಟಗಾರ ಕೀಗನ್ ಪೀಟರ್ಸನ್. ಪೀಟರ್ಸನ್ ಭರ್ಜರಿ 82 ರನ್‌ಗಳಿಸಿ ಭಾರತೀಯ ತಂಡಕ್ಕೆ ಸವಾಲಾದರು. ಈ ಮೂಲಕ ದಕ್ಷಿಣ ಆಫ್ರಿಕಾ ಸುಲಭವಾಗಿ ಗೆಲ್ಲಲು ಕಾರಣವಾದರು.
ಇನ್ನು ದಕ್ಷಿಣ ಆಫ್ರಿಕಾ ತಂಡದ ಯುವ ಆಟಗಾರ ಕೀಗನ್ ಪೀಟರ್ಸನ್ ಅವರ ಈ ಅದ್ಭುತ ಪ್ರದರ್ಶನದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಮಾತನಾಡಿದ್ದಾರೆ. 28ರ ಹರೆಯದ ಈ ಆಟಗಾರ ಭವಿಷ್ಯದ ತಾರೆ ಎಂದು ಗಂಭೀರ್ ಬಣ್ಣಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಪಡೆದು ಹೊರಗುಳಿದ ಬಳಿಕ ಕೀಗನ್ ಪೀಟರ್ಸನ್ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಎಂತಾ ಅದ್ಭುತ ಪ್ರದರ್ಶನ ನೀಡಿದರು ಎಂಬ ಬಗ್ಗೆ ಕೂಡ ಗಂಭೀರ್ ಈ ಸಂದರ್ಭದಲ್ಲಿ ವಿವರಿಸಿದ್ದಾರೆ.
"ಆತನ ಪ್ರದರ್ಶನವನ್ನು ನೋಡಿದರೆ ಆತ ಖಂಡಿತವಾಗಿಯೂ ದಕ್ಷೀಣ ಆಫ್ರಿಕಾದ ಭವಿಷ್ಯದ ತಾರೆ ಎನಿಸುತ್ತಾರೆ. ಹರಣಿಗಳ ತಂಡ ಡಿಕಾಕ್ ಅವರ ಸೇವೆಯಿಂದ ವಂಚಿತವಾಯಿತು. ಆದರೆ ಪಿಟರ್ಸನ್ ಅವರ ಅದ್ಭುತ ಫಾರ್ಮ್ ದಕ್ಷಿಣ ಆಪ್ರಿಕಾ ತಂಡ ಈ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿತು. ನನ್ನ ಪ್ರಕಾರ ಆತಿಥೇಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಈತನೆ. ನನ್ನ ಪ್ರಕಾರ ಆಟಗಾರನ ಖ್ಯಾತಿಗಿಂತಲೂ ಫಾರ್ಮ್ ಬಹಳ ಮುಖ್ಯವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಾರ್ಮ್ ಪ್ರಮುಖ ಪಾತ್ರವಹಿಸುತ್ತದೆ. ನಿಮ್ಮ ಫಾರ್ಮ್ ಉತ್ತಮವಾಗಿದ್ದರೆ ಯಾವುದೇ ತಂಡವನ್ನಾದರೂ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ " ಎಂದು ಗಂಭೀರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸುವ ಮೂಲಕ ಸರಣಿ ಗೆಲ್ಲುವಲ್ಲಿ ವಿಫಲವಾಗಿದೆ. ಅಂತಿಮ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 13 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರೀ ಕುಸಿತ ಕಂಡ ಪರಿಣಾಮವಾಗಿ ಉತ್ತಮ ರನ್‌ಗಳಿಸಲು ವಿಫಲವಾಗಿದೆ. ರಿಷಭ್ ಪಂತ್ ಮಾತ್ರವೇ ಏಕಾಂಗಿ ಹೋರಾಟವನ್ನು ನಡೆಸಿ ಶತಕ ಸಿಡಿಸಿದ್ದಾರೆ. ಹೀಗಾಗಿ 212 ರನ್‌ಗಳ ಸುಲಭ ಗುರಿ ಪಡೆದ ದಕ್ಷಿಣ ಆಪ್ರಿಕಾ ಈ ಮೊತ್ತವನ್ನು ಕೇವಲ 3 ವಕೆಟ್ ಕಳೆದುಕೊಂಡು ಗೆಲುವ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 2-1 ಅಂತರದ ಗೆಲುವು ಸಾಧಿಸಿದೆ.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್
ಬೆಂಚ್: ಜಯಂತ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಹನುಮ ವಿಹಾರಿ,ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ
ದಕ್ಷಿಣ ಆಪ್ರಿಕಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ (ವಾಕ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ
ಬೆಂಚ್: ಪ್ರೆನೆಲನ್ ಸುಬ್ರಾಯೆನ್, ಸಿಸಂಡಾ ಮಗಾಲಾ, ಬ್ಯೂರಾನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ವಿಯಾನ್ ಮುಲ್ಡರ್, ಸರೆಲ್ ಎರ್ವೀ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications