Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Gautam Gambhir: ರೋಹಿತ್ ಶರ್ಮಾ ಕೆರಿಯರ್ ಬಗ್ಗೆ ಗೌತಮ್ ಗಂಭೀರ್ ಭವಿಷ್ಯ

ಟೀಮ್ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಭಾರತ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆದುಕೊಂಡಿದೆ. ಮಾರ್ಚ್ 5 ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.

ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ನಂತರ ಟೀಮ್ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಗಂಭೀರ್ ಅವರಿಗೆ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆ ಗಂಭೀರ್ ನೇರವಾಗಿ ಉತ್ತರಿಸಿದ್ದಾರೆ.

Gautam Gambhir prediction about Rohit Sharma cricket career

ಪತ್ರಿಕಾಗೋಷ್ಠಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರ ರೋಹಿತ್ ಎಷ್ಟು ಕಾಲ ಭಾರತ ತಂಡಕ್ಕಾಗಿ ಆಡುವುದನ್ನು ಮುಂದುವರಿಸಬಹುದು ಎಂದು ಗಂಭೀರ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಗಂಭೀರ್ ತಮ್ಮದೇ ಆದ ಶೈಲಿಯಲ್ಲಿ ರೋಹಿತ್ ಅವರ ಪ್ರದರ್ಶನವನ್ನು ಹೊಗಳಲು ಪ್ರಾರಂಭಿಸಿದರು. ರೋಹಿತ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಭವಿಷ್ಯದ ಬಗ್ಗೆ ಗಂಭೀರ್ ಹೆಚ್ಚಿನ ಮಾಹಿತಿಯನ್ನು ನೀಡಲಿಲ್ಲ.
ಹಿಟ್‌ಮ್ಯಾನ್‌ಗಳನ್ನು ಅವರ ಸಂಖ್ಯೆಗಳ ಆಧಾರದ ಮೇಲೆ ಅಲ್ಲ, ಅವರ ಪ್ರಭಾವದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದಿದ್ದಾರೆ.

'ರೋಹಿತ್ ಅವರ ಫಾರ್ಮ್ ನೋಡಿದರೆ, ಅವರು ಈಗ ಎಷ್ಟು ವರ್ಷ ಕ್ರಿಕೆಟ್ ಆಡುತ್ತಾರೆ ಎಂದು ನೀವು ಭಾವಿಸುತ್ತೀರಿ? ಎಂದು ಗಂಭೀರ್ ಅವರಿಗೆ ಮತ್ತೊಂದು ಕೇಳಲಾಯಿತು. 'ಚಾಂಪಿಯನ್ಸ್ ಟ್ರೋಫಿಯ ಫೈನಲ್ ಈಗ ಬರುತ್ತಿದೆ. ಅದಕ್ಕೂ ಮೊದಲು ನಾನು ಏನು ಹೇಳಲಿ? ನಿಮ್ಮ ನಾಯಕ ಅಷ್ಟು ವೇಗವಾಗಿ ಬ್ಯಾಟಿಂಗ್ ಮಾಡಿದರೆ, ನಾವು ಸಂಪೂರ್ಣವಾಗಿ ಭಯವಿಲ್ಲದೆ ಇರಲು ಬಯಸುತ್ತೇವೆ ಎಂಬ ಉತ್ತಮ ಸಂದೇಶವನ್ನು ಡ್ರೆಸ್ಸಿಂಗ್ ರೂಮ್‌ಗೆ ಕಳುಹಿಸುತ್ತದೆ. ಆಟಗಾರರ ವೃತ್ತಿಜೀವನವನ್ನು ನೀವು ರನ್‌ಗಳ ಮೂಲಕ ನಿರ್ಣಯಿಸುತ್ತೀರಿ, ನಾವು ಪ್ರಭಾವದ ಮೂಲಕ ನಿರ್ಣಯಿಸುತ್ತೇವೆ. ಇದೇ ವ್ಯತ್ಯಾಸ. ಒಬ್ಬ ಪತ್ರಕರ್ತರಾಗಿ, ತಜ್ಞರಾಗಿ, ನೀವು ಸಂಖ್ಯೆಗಳನ್ನು, ಸರಾಸರಿಗಳನ್ನು ಮಾತ್ರ ನೋಡುತ್ತೀರಿ. ಆದರೆ ಒಬ್ಬ ಕೋಚ್ ಆಗಿ, ಒಂದು ತಂಡವಾಗಿ, ನಾವು ಸಂಖ್ಯೆಗಳು ಅಥವಾ ಸರಾಸರಿಗಳನ್ನು ನೋಡುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

ರೋಹಿತ್ ದಾಖಲೆ

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದರು. ಅವರು ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಐಸಿಸಿ ಟೂರ್ನಿಗಳ ಫೈನಲ್ ತಲುಪಿದ ಮೊದಲ ನಾಯಕರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವು ಭಾರತವನ್ನು ಐದನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪುವಂತೆ ಮಾಡಿದೆ. ಇದರೊಂದಿಗೆ ಟೀಮ್ ಇಂಡಿಯಾ ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಬೇರೆ ಯಾವುದೇ ತಂಡವು ಮೂರಕ್ಕಿಂತ ಹೆಚ್ಚು ಬಾರಿ ಫೈನಲ್ ತಲುಪಿಲ್ಲ.

Story first published: Wednesday, March 5, 2025, 19:33 [IST]
Other articles published on Mar 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+