ಸಮಾಜಕ್ಕೆ ಅಪಾಯಕಾರಿಯಾಗಬೇಡಿ ಎಂದ ಗೌತಮ್ ಗಂಭೀರ್

ದೇಶಾದ್ಯಂತ ಕೊರೊನಾ ವೈರಸ್ ಭಾರಿ ವೇಗವಾಗಿ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅದರಲ್ಲೂ ತಮ್ಮ ಮನೆಗಳಿಂದ ಆಚೆ ಬರದಂತೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಲಿ ಸಂಸದರಾಗಿರುವ ಗೌತಮ್ ಗಂಭೀರ್ ಈ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ಯಾರೂ ಮನೆಯಿಂದ ಹೊರಗೆ ಬಾರದಂತೆ ಗಂಭೀರ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಅದರಲ್ಲೂ ಕ್ವರಂಟೈನ್ ಉಲ್ಲಂಘಿಸಿ ಓಡಾಡುತ್ತಿರುವುವರಿಗೆ ಗಂಭೀರ್ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
'ತಾವಾಗಿಯೇ ದಿಗ್ಬಂಧನಕ್ಕೊಳಗಾಗಿ ಅಥವಾ ಜೈಲಿಗೆ ಹೋಗಿ' ಎಂದು ಗೌತಮ್ ಗಂಭೀರ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಕ್ವರಂಟೈನ್‌ಗೆ ಒಳಗಾಗಿರುವ ಅನೇಕರು ಹೊರಗಡೆ ಓಡಾಡುತ್ತಿರುವುದು ದೇಶಾದ್ಯಂತ ಬೆಳಕಿಗೆ ಬಂದಿದೆ. ಅತ್ಯಂತ ಅಪಾಯಕಾರಿಯಾಗಿರುವ ಈ ಬೆಳವಣಿಗೆಗೆ ಗಂಭೀರ್ ಈ ರೀತಿಯ ಎಚ್ಚರಿಕೆಯನ್ನು ನೀಡಿದ್ದಾರೆ.
'ಸಮಾಜಕ್ಕೆ ಯಾರೂ ಘಾತುಕರಾಗಬೇಡಿ. ನಮ್ಮ ಅಸ್ಥಿತ್ವಕ್ಕಾಗಿ ನಾವು ಹೋರಾಡುವ ಸಂದರ್ಭದ ಇದು, ಪ್ರತಿಯೊಬ್ಬರೂ ಸರ್ಕಾರ ನೀಡುವ ಸೂಚನೆಯನ್ನು ಪಾಲಿಸಲೇಬೇಕು ಎಂದು ಗೌತಮ್ ಗಂಭೀರ್ ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
ವಿಶ್ವಾದ್ಯಂತ ಕೊರೊನಾ ವೈರಸ್‌ಗೆ ತುತ್ತಾಗಿ 15,000ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಭಾರತದ 19 ರಾಜ್ಯಗಳು ಲಾಕ್‌ಡೌನ್ ಘೋಷಿಸಿ ಈ ವೈರಸ್ ವಿರುದ್ಧ ಹೋರಾಟವನ್ನು ನಡೆಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications