For Quick Alerts
ALLOW NOTIFICATIONS  
For Daily Alerts
 

Team Inndia: ಏಕದಿನ ಸರಣಿಯಲ್ಲೂ ಭಾರತ ಆಕ್ರಮಣಕಾರಿ ಆಟವಾಡಲಿದೆ; ಗೌತಮ್ ಗಂಭೀರ್

ಭಾರತ ಕ್ರಿಕೆಟ್ ತಂಡ 2024ರ ವರ್ಷ ದುಃಸ್ವಪ್ನವಾಗಿತ್ತು. ಆದರೆ ಭಾರತ ತಂಡ 2025ರ ವರ್ಷವನ್ನು ಆಕ್ರಮಣಕಾರಿ ರೀತಿಯಲ್ಲಿ ಆರಂಭಿಸಿದೆ. ಇದಕ್ಕೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸಾಕ್ಷಿಯಾಗಿದೆ. ವಾಂಖೆಡೆಯಲ್ಲಿ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ದಾಖಲೆಯ ಸೃಷ್ಠಿಸಿದ್ದಾರೆ. ಟೀಮ್ ಇಂಡಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಅವರ ಅದ್ಭುತ ಇನ್ನಿಂಗ್ಸ್ ಹೆಡ್‌ಕೋಚ್ ಗೌತಮ್ ಗಂಭೀರ್ ಅವರ ಹಿಂದಿನ ಗಾಯಗಳನ್ನು ವಾಸಿ ಮಾಡಿದಂತಿದೆ. ಈ ಪಂದ್ಯದ ನಂತರ, ಗಂಭೀರ್ ಚಾಂಪಿಯನ್ಸ್ ಟ್ರೋಫಿ 2025ರ ಬಗ್ಗೆ ಎದುರಾಳಿ ತಂಡಗಳಿಗೆ ರೆಡ್ ಅಲರ್ಟ್ ನೀಡಿದ್ದಾರೆ.

Gautam Gambhir said that India will play an aggressive game in ODI series against England as well

ಗಂಭೀರ್ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಭಾರತ ಟಿ20 ಸರಣಿ ಗೆದ್ದ ಬಳಿಕ ಮಾತನಾಡಿದ ಗೌತಮ್ ಗಂಭೀರ್, 'ಇಂಗ್ಲೆಂಡ್ ಉತ್ತಮ ಗುಣಮಟ್ಟದ ತಂಡ. ಪಂದ್ಯ ಸೋಲುವ ಭಯ ನಮಗೆ ಬೇಡ. ನಾವು 250-260 ರನ್‌ಗಳ ಗುರಿಯನ್ನು ತಲುಪಲು ಬಯಸುತ್ತೇವೆ. ಕೆಲವೊಮ್ಮೆ ನಾವು 120 ರನ್‌ಗಳಿಗೆ ಔಟಾಗುತ್ತೇವೆ. ಆದರೆ ನಾವು ಸರಿಯಾದ ಹಾದಿಯಲ್ಲಿದ್ದೇವೆ. ಭವಿಷ್ಯದಲ್ಲಿಯೂ ನಾವು ಅದೇ ರೀತಿ ಮಾಡುತ್ತೇವೆ. ನಾವು ನಿರ್ಭೀತ ಕ್ರಿಕೆಟ್ ಆಡಬೇಕಾಗುತ್ತದೆ. ನಾವು ಅಭಿಷೇಕ್ ಶರ್ಮಾ ಅವರಂತಹ ಆಟಗಾರರನ್ನು ಬೆಂಬಲಿಸಲು ಬಯಸುತ್ತೇವೆ. ಈ ಹುಡುಗರನ್ನು ನಾವು ತಾಳ್ಮೆಯಿಂದಿರಬೇಕು. ಅವರನ್ನು ಬೆಂಬಲಿಸುವುದು ಮುಖ್ಯ. ಈ ಹುಡುಗರಲ್ಲಿ ಹೆಚ್ಚಿನವರು ನಿರ್ಭೀತ ಕ್ರಿಕೆಟ್ ಆಡುವ ಸಿದ್ಧಾಂತವನ್ನು ಪಾಲಿಸುತ್ತಾರೆ' ಎಂದು ಹೇಳಿದ್ದಾರೆ.

ಆಕ್ರಮಣಕಾರಿ ಆಟ

ಇದೇ ವೇಳೆ ಟೀಮ್ ಇಂಡಿಯಾದ ಆಕ್ರಮಣಕಾರಿ ಆಟವಾಡುವ ಬಗ್ಗೆ ಗೌತಮ್ ಗಭೀರ್ ಮಾತನಾಡಿದ್ದಾರೆ. ಫಲಿತಾಂಶಗಳು ನಿಮ್ಮ ಪರವಾಗಿ ಬರಲು ಪ್ರಾರಂಭಿಸಿದಾಗ ಎಲ್ಲವೂ ಸರಿಯಾಗುತ್ತದೆ. 140-150 ಕೋಟಿ ಭಾರತೀಯರನ್ನು ಪ್ರತಿನಿಧಿಸುವುದು ಎಂದರೆ ಏನೆಂದು ನಮ್ಮ ಆಟಗಾರರಿಗೆ ಗೊತ್ತು. ಬಿಷ್ಣೋಯ್ ಮತ್ತು ವರುಣ್ ಒಟ್ಟಿಗೆ ಬೌಲಿಂಗ್ ಮಾಡುವುದು ನನಗೆ ಬಹಳ ಮುಖ್ಯವಾಗಿತ್ತು. ನಾವು ಬ್ಯಾಟಿಂಗ್‌‌ನೊಂದಿಗೆ ಸಾಧ್ಯವಾದಷ್ಟು ಪ್ರಯತ್ನಿಸಲು ಬಯಸುತ್ತೇವೆ. ಇದು ಟಾಪ್-7 ಗಾಗಿ ಶ್ರಮಿಸುತ್ತಿದೆ. ನಾವು ಏಕದಿನ ಮಾದರಿಯಲ್ಲೂ ಸಾಧ್ಯವಾದಷ್ಟು ಆಕ್ರಮಣಕಾರಿಯಾಗಿ ಆಡಲು ಮತ್ತು ಪ್ರೇಕ್ಷಕರನ್ನು ರಂಜಿಸಲು ಬಯಸುತ್ತೇವೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

ಅಭಿಷೇಕ್ ಅಬ್ಬರ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಟಿ20 ಪಂದ್ಯ ವಾಂಖೆಡೆ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಅಭಿಷೇಕ್ ಶರ್ಮಾ ಹಸಿದ ಸಿಂಹದಂತೆ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಮೇಲೆ ದಾಳಿ ಮಾಡಿದರು. ಅಭಿಷೇಕ್ 54 ಎಸೆತಗಳಲ್ಲಿ 13 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 135 ರನ್ ಗಳಿಸಿ ದಾಖಲೆ ನಿರ್ಮಿಸಿದರು. ಅಭಿಷೇಕ್ ಅವರ ಅಮೋಘ ಪ್ರದರ್ಶನದಿಂದಾಗಿ ಇಂಗ್ಲೆಂಡ್ ಸೋಲು ಕಂಡಿತ್ತು. 248 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೇವಲ 97 ರನ್‌ಗಳಿಗೆ ಆಲೌಟ್ ಆಯಿತು. ಇದೀಗ ಟೀಮ್ ಇಂಡಿಯಾದ ಗುರಿ ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿ 2025 ಆಗಿದ್ದು, ಇದಕ್ಕಾಗಿ ಗಂಭೀರ್ ರಣತಂತ್ರ ರೂಪಿಸಿದ್ದಾರೆ.

Story first published: Monday, February 3, 2025, 19:59 [IST]
Other articles published on Feb 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+