For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20ಯಲ್ಲಿ ಮುಂದುವರಿಯಬೇಕು: ಗೌತಮ್ ಗಂಭೀರ್ ಆಗ್ರಹ

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅಡುವುದನ್ನು ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಕೂಡ ಆಡಬೇಕು ಎಂದಿದ್ದಾರೆ ಗಂಭೀರ್.

ವರದಿಗಳ ಪ್ರಕಾರ ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಇನ್ನು ಮುಂದೆ ಆಡುವ ಸಾಧ್ಯತೆ ಕಡಿಮೆಯಿದೆ. ಎಲ್ಲಾ ಮಾದರಿಯಲ್ಲಿಯೂ ಒತ್ತಡದ ವೇಳಾಒಟ್ಟಿ ಹಾಗೂ ಐಪಿಎಲ್ ಟೂರ್ನಿಯ ಕಾರಣದಿಂದಾಗಿ ಸ್ವತಃ ರೋಹಿತ್ ಶರ್ಮಾ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ. ಡಿಸೆಂಬರ್ 2023ರಿಂದ ಮಾರ್ಚ್ 2024ರ ಮಧ್ಯೆ ಭಾರತ ತಂಡ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.

Gautam Gambhir said Virat Kohli and Rohit Sharma should play for India in t20I

ಈ ಕಾರಣಗಳಿಂದಾಗಿ ರೋಹಿತ್ ಶರ್ಮಾ ವೈಟ್‌ಬಾಲ್ ಮಾದರಿಯಲ್ಲಿ ಮುಂದುವರಿಯುವ ಸಾಧ್ಯತೆಗಳು ಬಹಳ ಕಡಿಮೆಯಿದೆ. ಆದರೆ ಗೌತನ್ ಗಂಭಿರ್ ಈ ಇಬ್ಬರು ಆಟಗಾರರ ಅಗತ್ಯ ಭಾರತ ತಂಡಕ್ಕಿದೆ ಎಂದು ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಅವರಿಬ್ಬರನ್ನು ಆಯ್ಕೆ ಮಾಡುವ ಅಗತ್ಯವಿದೆ. ಅವರು ಆಯ್ಕೆಯಾಗಲೇಬೇಕು. ಪ್ರಮುಖವಾಗಿ ನಾನು ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕನನ್ನಾಗಿ ನೋಡಲು ಬಯಸುತ್ತೇನೆ. ಹೌದು.. ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗಿದ್ದರೂ ರೋಹಿತ್ ಶರ್ಮಾ ಅವರನ್ನು ಟಿ20 ವಿಶ್ವಕಪ್‌ನಲ್ಲಿ ನಾಯಕನನ್ನಾಗಿ ನೋಡಲು ಬಯಸುತ್ತೇನೆ. ರೋಹಿತ್ ಶರ್ಮಾ ಅವರನ್ನು ಕೇವಲ ಬ್ಯಾಟರ್ ಆಗಿ ಆಯ್ಕೆ ಮಾಡಬಾರದು" ಎಂದಿದ್ದಾರೆ ಗೌತಮ್ ಗಂಭೀರ್.

"ರೋಹಿತ್ ಶರ್ಮಾ ಅದ್ಭುತವಾದ ನಾಯಕ. ಈ ಬಾರಿಯ ವಿಶ್ವಕಪ್‌ನಲ್ಲಿ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನೀವು ರೋಹಿತ್ ಶರ್ಮಾರನ್ನು ಆಯ್ಕೆ ಮಾಡಲೇಬೇಕು ಮತ್ತು ನಾಯಕನಾಗಿಯೇ ಆಯ್ಕೆಯಾಗಬೇಕು. ವಿರಾಟ್ ಕೊಹ್ಲಿ ಕೂಡ ಸಹಜವಾಗಿಯೇ ಆಯ್ಕೆಯಾಗಬೇಕು" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.

Story first published: Thursday, November 23, 2023, 18:11 [IST]
Other articles published on Nov 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+