ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಟೀವ್ ಸ್ಮಿತ್ ಫಿಟ್ ಆಗಲ್ಲ: ಗೌತಮ್ ಗಂಭೀರ್

ನವದೆಹಲಿ: 2021 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಿನ್ನಡೆ ಅನುಭವಿಸಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಅವರನ್ನು ರಾಜಸ್ಥಾನ್ ಬಿಟ್ಟುಕೊಟ್ಟಿತ್ತು.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ ಐಪಿಎಲ್ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದ ಸ್ಟೀವ್ ಸ್ಮಿತ್, ನಾಯಕತ್ವ ಮತ್ತು ಬ್ಯಾಟಿಂಗ್ ವಿಚಾರದಲ್ಲಿ ಉತ್ತಮ ಪ್ರದರ್ಶನವೇ ನೀಡಿದ್ದರು. ಆದರೂ ಆರ್‌ಆರ್ ಸ್ಮಿತ್ ರಿಲೀಸ್ ಮಾಡಿದ್ದು ಅಚ್ಚರಿಗೀಡು ಮಾಡಿತ್ತು.
ಆದರೆ ಐಪಿಎಲ್ ಹರಾಜಿನ ವೇಳೆ ಸ್ಮಿತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು. 2.2 ಕೋ.ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್, ಸ್ಮಿತ್ ವರನ್ನು ಖರೀದಿಸಿತ್ತು. ಕಡಿಮೆ ವೆಚ್ಚದಲ್ಲಿ ಸ್ಮಿತ್ ಖರೀದಿಸಲು ಸಾಧ್ಯವಾಗಿದ್ದಕ್ಕೆ ಡೆಲ್ಲಿ ಫ್ರಾಂಚೈಸಿಯೇ ಖುಷಿಯಲ್ಲಿರುವಾಗ ಭಾರತದ ಮಾಜಿ ನಾಯಕ ಗೌತಮ್ ಗಂಭೀರ್, ಸ್ಮಿತ್ ಅವರು ಡಿಸಿ ಪ್ಲೇಯಿಂಗ್ XIಗೆ ಫಿಟ್ ಅಲ್ಲ ಎಂದಿದ್ದಾರೆ.
'ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇಯಿಂಗ್ XIಗೆ ಸ್ಟೀವ್ ಸ್ಮಿತ್ ಫಿಟ್ ಅಲ್ಲ. ಡೆಲ್ಲಿ ಪ್ಲೇಯಿಂಗ್ XI ಈಗಾಗಲೇ ಸ್ಟ್ರಾಂಗ್ ಆಗಿದೆ. ಈ ಮಧ್ಯೆ ಸ್ಮಿತ್ ಅವರನ್ನು ಅವರು ಎಲ್ಲಿ ಆಡಿಸುತ್ತಾರೆ?. ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶ್ರೇಯಸ್ ಐಯ್ಯರ್, ರಿಷಭ್ ಪಂತ್, ಶಿಮ್ರನ್ ಹೆಟ್ಮೈಯರ್, ಕಾಗಿಸೋ ರಬಾಡ, ಅನ್ರಿಕ್ ನಾಟ್ಜ್, ಕ್ರಿಸ್ ವೋಕ್ಸ್ ಇವರೆಲ್ಲ ಆಡುವಾಗ ಸ್ಮಿತ್ ಎಲ್ಲಿ ಆಡ್ತಾರೆ? ಎಂದು ಗಂಭೀರ್ ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications