ಕೊಹ್ಲಿ ಕೆಟ್ಟ ನಾಯಕನಲ್ಲ, ಆದರೆ ರೋಹಿತ್ ಉತ್ತಮ ನಾಯಕ: ಗಂಭೀರ್

ಮುಂಬೈ: ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ ಬಹುಶಃ ಒಳ್ಳೆಯ ನಾಯಕ, ಆದರೆ ರೋಹಿತ್ ಶರ್ಮಾ ಇನ್ನೂ ಉತ್ತಮ ನಾಯಕ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸನ್ನು ಪರಿಗಣಿಸಿ ಗಂಭೀರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಶೋ 'ಕನೆಕ್ಟ್' ಜೊತೆ ಮಾತನಾಡಿದ ಗೌತಮ್ ಗಂಭೀರ್, 'ವಿರಾಟ್ ಕೊಹ್ಲಿ ಕೆಟ್ಟ ನಾಯಕ ಅಂತ ಅಲ್ಲ, ಆದರೆ ರೋಹಿತ್ ಶರ್ಮಾ ಉತ್ತಮ ನಾಯಕ. ನಾಯಕತ್ವದ ವಿಚಾರದಲ್ಲಿ ಇಬ್ಬರ ಮಧ್ಯೆ ತುಂಬಾ ವ್ಯತ್ಯಾಸವಿದೆ,' ಎಂದು ಗಂಭೀರ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆದರೆ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ಸ್ ಆಗಿ ಮಿನುಗಿದೆ. ತಂಡಗಳ ನಾಯಕತ್ವದಲ್ಲಿನ ಈ ವ್ಯತ್ಯಾಸವನ್ನು ಪರಿಗಣಿಸಿ ಗಂಭೀರ್ ಮಾತನಾಡಿದ್ದಾರೆ.
ಸದ್ಯ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಏಕದಿನ, ಟಿ20ಐ ಮತ್ತು ಟೆಸ್ಟ್ ಮೂರೂ ಮಾದರಿಗಳಲ್ಲೂ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ನವೆಂಬರ್ 27ರಿಂದ ಆರಂಭವಾಗುವ ಭಾರತ-ಆಸ್ಟ್ರೇಲಿಯಾ ಸರಣಿ ಡಿಸೆಂಬರ್ 19ರವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications