For Quick Alerts
ALLOW NOTIFICATIONS  
For Daily Alerts
 

IND vs NZ: 'ನಾವು ಯಾರಿಗೂ ಹೆದರೋದಿಲ್ಲ'; ಕಿವೀಸ್ ಪಡೆಗೆ ಕೋಚ್ ಗೌತಮ್ ಗಂಭೀರ್ ಖಡಕ್ ವಾರ್ನಿಂಗ್!

ಅಕ್ಟೋಬರ್ 16 ರಿಂದ ನ್ಯೂಜಿಲೆಂಡ್ ಮತ್ತು ಭಾರತ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಅವರು ನ್ಯೂಜಿಲೆಂಡ್ ತಂಡಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮೊದಲು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಗ್ಗೆ ಗೌತಮ್ ಗಂಭೀರ್ ಪ್ರಸ್ತಾಪಿಸಿದರು. 'ಟಿ20 ಕ್ರಿಕೆಟ್‌ನಲ್ಲಿ ಹೀಗೆಯೇ ಆಡಬೇಕು ಎಂದು ನಾನು ಯಾವಾಗಲೂ ಹೇಳುತ್ತಿದ್ದೆ, ಮುಂದೆಯೂ ನಾವು ಹೀಗೆಯೇ ಆಡುತ್ತೇವೆ. ನಾವು 100 ರನ್‌ಗಳಿಗೆ ಔಟಾಗುವ ದಿನಗಳು ಬರುತ್ತವೆ. ಆದರೆ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ನಮ್ಮ ಆಟಗಾರರನ್ನು ಅಲ್ಲಿಗೆ ಹೋಗಲು ಮತ್ತು ಹೆಚ್ಚಿನ ಅಪಾಯದ ಕ್ರಿಕೆಟ್ ಆಡಲು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇವೆ.

Gautam Gambhir serious warning for New Zealand team

ದೇಶದ ಜನರನ್ನು ರಂಜಿಸುವುದರ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ನಾವು ಆಟವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇವೆ. ನಾವು ಯಾವುದೇ ಪರಿಸ್ಥಿತಿಯಲ್ಲಿದ್ದರೂ ಫಲಿತಾಂಶಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ ಎಂದು ತಂಡದ ಬಗ್ಗೆ ಹೇಳಿದ್ದಾರೆ.

ಲಘುವಾಗಿ ಪರಿಗಣಿಸುವುದಿಲ್ಲ

1988 ರಿಂದ ಭಾರತದಲ್ಲಿ ನ್ಯೂಜಿಲೆಂಡ್ ಟೆಸ್ಟ್ ಸರಣಿ ಗೆದ್ದಿಲ್ಲ. ಆದರೆ ಪ್ರವಾಸಿ ತಂಡಅತ್ಯುತ್ತಮ ಆಟಗಾರರನ್ನು ಹೊಂದಿದೆ. ಅಲ್ಲದೆ, ಯಾವುದೇ ಪಂದ್ಯವನ್ನು ಆಡಲು ಸಿದ್ಧರಾಗಿರುವ ಕಾರಣ ನ್ಯೂಜಿಲೆಂಡ್ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ. ನ್ಯೂಜಿಲೆಂಡ್ ಸಂಪೂರ್ಣ ವಿಭಿನ್ನ ಸವಾಲು. ವೃತ್ತಿಪರ ಕ್ರಿಕೆಟ್ ತಂಡವೆಂದು ನಮಗೆ ತಿಳಿದಿದೆ. ಆದ್ದರಿಂದ, ನಾವು ಅವರನ್ನು ಗೌರವಿಸುತ್ತೇವೆ, ಆದರೆ ನಾವು ಯಾರಿಗೂ ಹೆದರುವುದಿಲ್ಲ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

'ಆಟಗಾರರು ಆಕ್ರಮಣಕಾರಿಯಾಗಬೇಕು. ಮೈದಾನಕ್ಕೆ ಬಂದು ನೈಸರ್ಗಿಕ ಆಟವನ್ನು ಆಡಬೇಕು. ನಾವು ಆಟಗಾರರನ್ನು ಏಕೆ ತಡೆಹಿಡಿಯಬೇಕು? ಒಂದು ದಿನದಲ್ಲಿ 400 ಅಥವಾ 500 ರನ್ ಗಳಿಸಲು ಸಹಜ ಆಟವಾಡಲು ಸಾಧ್ಯವಾದರೆ, ಏಕೆ? ಎಂದು ಭಾರತ ತಂಡದ ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆಕ್ರಮಣಕಾರಿ ಟೆಸ್ಟ್ ಕ್ರಿಕೆಟ್‌ ಆಡುತ್ತಾರೆ ಎಂದು ಪರೋಕ್ಷವಾಗಿ ಗಂಭೀರ್ ಹೇಳಿದ್ದಾರೆ.

ಕೊಹ್ಲಿ ಗುಣಗಾನ

ವಿರಾಟ್ ಬಗ್ಗೆ ನನ್ನ ಅಭಿಪ್ರಾಯಗಳು ಯಾವಾಗಲೂ ಸ್ಪಷ್ಟವಾಗಿವೆ. ಅವರು ವಿಶ್ವ ದರ್ಜೆಯ ಕ್ರಿಕೆಟಿಗ. ಇಷ್ಟು ದಿನ ಪ್ರದರ್ಶನ ನೀಡಿದ ಅವರು ಪಾದಾರ್ಪಣೆ ಮಾಡಿದಾಗಲೂ ಅಷ್ಟೇ ಹಸಿನಿಂದ ಆಡಿದ್ದರು. ಅವರು ಶ್ರೀಲಂಕಾದಲ್ಲಿ ಪಾದಾರ್ಪಣೆ ಮಾಡಿದಾಗ ನಾನು ಅವರೊಂದಿಗೆ ಬ್ಯಾಟಿಂಗ್ ಮಾಡಿದ್ದು ನನಗೆ ನೆನಪಿದೆ. ಅವರ ಹಸಿವು ಯಾವಾಗಲೂ ಇರುತ್ತದೆ. ಇದು ಅವರನ್ನು ವಿಶ್ವ ದರ್ಜೆಯ ಕ್ರಿಕೆಟಿಗನನ್ನಾಗಿ ಮಾಡಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿ ಮತ್ತು ಆಸ್ಟ್ರೇಲಿಯಾದಲ್ಲಿಯೂ ರನ್ ಗಳಿಸಲು ಅವರು ಹಸಿವಿನಿಂದ ಇರುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರು ಸ್ಕೋರ್ ಮಾಡಲು ಪ್ರಾರಂಭಿಸಿದರೆ ಎಷ್ಟು ಸ್ಥಿರವಾಗಿ ಕ್ರೀಸ್‌ನಲ್ಲಿರುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ಕೊಹ್ಲಿ ಬಗ್ಗೆ ಗಂಭೀರ್ ಗುಣಗಾನ ಮಾಡಿದ್ದಾರೆ.

Story first published: Monday, October 14, 2024, 21:07 [IST]
Other articles published on Oct 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+