ತಮ್ಮ ಕೋವಿಡ್ ಪರೀಕ್ಷೆಯ ವರದಿ ಹಂಚಿಕೊಂಡ ಗೌತಮ್ ಗಂಭೀರ್

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ ಸ್ವಯಂ ಪ್ತತ್ಯೇಕವಾಗುಳಿದಿದ್ದರು. ತಮ್ಮ ಮನೆಯಲ್ಲಿನ ಸದಸ್ಯರೊಬ್ಬರು ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಹೀಗಾಗಿ ತಮಗೂ ವೈರಸ್ ಹಬ್ಬರುವ ಸಾಧ್ಯತೆಯಿರುವ ಕಾರಣ ಗಂಭೀರ್ ಮುಂಜಾಗ್ರಥೆಯನ್ನು ವಹಿಸಿಕೊಂಡಿದ್ದರು.
ಆದರೆ ಈಗ ಗಂಭೀರ್ ಈ ಆತಂಕದಿಂದ ಹೊರಬಂದಿದ್ದಾರೆ. ಸೆಲ್ಫ್ ಐಸೋಲೇಶನ್‌ನಲ್ಲಿದ್ದ ಗಂಭೀರ್ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಅದರ ವರದಿ ಬಂದಿದ್ದು ನೆಗೆಟಿವ್ ವರದಿ ಬಂದಿದೆ. ಹೀಗಾಗಿ ವೈರಸ್‌ನ ಆತಂಕದಿಂದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಪಾರಾಗಿದ್ದಾರೆ.
ಈ ಬಗ್ಗೆ ಗೌತಮ್ ಗಂಭೀರ್ ಟ್ವಿಟ್ಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಇದರ ಜೊತೆಗೆ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೊನಾ ವೈರಸ್‌ನ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕನುಗುಣವಾಗಿ ನಡೆದುಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.
"ನನ್ನ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಪ್ರತಿಬ್ಬರೂ ಹಾರೈಕೆಗೂ ಧನ್ಯವಾದಗಳು. ಮತ್ತೊಮ್ಮೆ ಎಲ್ಲರಲ್ಲಿಯೂ ಕೇಳಿಕೊಲ್ಳುವುದು ಇಷ್ಟೇ, ನಿಯಮಗಳನ್ನು ಪಾಲಿಸಿ. ಸುರಕ್ಷಿತವಾಗಿರಿ" ಎಂದು ಗೌತಮ್ ಗಂಭೀರ್ ಟ್ವಿಟ್ ಮಾಡಿ ತಿಳಿಸಿದ್ದಾರೆ.
ಶುಕ್ರವಾರ ಗೌತಮ್ ಗಂಭೀರ್ ಟ್ವೀಟ್ ಮೂಲಕವೇ ತಮ್ಮ ನಿವಾಸದಲ್ಲಿ ಸದಸ್ಯರೊಬ್ಬರಿಗೆ ಕೊರೊನಾ ವೈರಸ್ ತಗುಲಿಸುವ ವಿಚಾರ ಹಾಗೂ ತಾನು ಐಸೋಲೇಶನ್‌ನಲ್ಲಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು. ತನ್ನ ಕೊರೊನಾ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications