ಗೌತಮ್ ಗಂಭೀರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

ನವದೆಹಲಿ, ಅಕ್ಟೋಬರ್ 14: ಹಿರಿಯ ಆಟಗಾರ ಗೌತಮ್ ಗಂಭೀರ್ ಅವರಿಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ. ಎಡಗೈ ಬ್ಯಾಟ್ಸ್ ಮನ್ ಗೌತಮ್ ಅವರು ಟೀಂ ಇಂಡಿಯಾದಿಂದ ದೂರಾದರೂ, ದೇಶಿ ಕ್ರಿಕೆಟ್, ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಸಮಾಜ ಸೇವೆ ಮೂಲಕ ಇತ್ತೀಚೆಗೆ ಎಲ್ಲರ ಗಮನ ಸೆಳೆದಿದ್ದಾರೆ.
2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಗೌತಮ್ ಅವರು ಭಾರತ ಪರ್ ಅ58 ಟೆಸ್ಟ್ ಪಂದ್ಯ, 147 ಏಕದಿನ ಕ್ರಿಕೆಟ್ ಹಾಗೂ 37 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಸದ್ಯ ದೆಹಲಿ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ.
2008ರಲ್ಲಿ ಕೇಂದ್ರ ಸರ್ಕಾರದಿಂದ ಅರ್ಜುನ ಪ್ರಶಸ್ತಿ ಗಳಿಸಿರುವ ಗೌತಮ್ ಅವರು ರಾಜಕೀಯ ರಂಗ ಪ್ರವೇಶಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ ಗಂಭೀರ್ ಯಶಸ್ಸು ಕಾಣಲಿಲ್ಲ.ಅಭಿಮಾನಿಗಳು, ಮಾಜಿ ಕ್ರಿಕೆಟರ್ ಗಳು ಗಂಭೀರ್ ಗೆ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ಗೌತಮ್ ಗಂಭೀರ್ ಗೆ ಶುಭ ಹಾರೈಸಿದ ಐಸಿಸಿ
ಗೌತಮ್ ಗಂಭೀರ್ ಗೆ ಶುಭ ಹಾರೈಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ), ವಿಶ್ವ ಟಿ20ರಲ್ಲಿ 75ರನ್ ಹಾಗೂ 2007ರ ಅಂತಿಮ ಹಣಾಹಣಿಯಲ್ಲಿ 97ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾದವರು ಎಂದು ಗಂಭೀರ್ ರನ್ನು ಹೊಗಳಿದೆ.
ಶ್ರೀಲಂಕಾ ವಿರುದ್ಧ ಗಂಭೀರ್ ಆಟ
ಶ್ರೀಲಂಕಾ ವಿರುದ್ಧ ಗಂಭೀರ್ ಆಟದ ಝಲಕ್ ವುಳ್ಳ ವಿಡಿಯೋ ಹಾಕಿ, ಶುಭ ಹಾರೈಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ).
ದೆಹಲಿ ಆಟಗಾರ ಶಿಖರ್ ಧವನ್
ದೆಹಲಿ ಆಟಗಾರ ಶಿಖರ್ ಧವನ್ ಅವರು ತಮ್ಮ ರಾಜ್ಯದ ಪ್ರಮುಖ ಆಟಗಾರ ಗಂಭೀರ್ ಗೆ ವಿಶ್ ಮಾಡಿದ್ದಾರೆ.
ಕೆಕೆಆರ್ ನಿಂದ ಗಂಭೀರ್ ಗೆ ಶುಭಹಾರೈಕೆ
ಕೋಲ್ಕತ್ತಾ ನೈಟ್ ರೈಡರ್ಸ್ ನ ಮಾಜಿ ನಾಯಕ ಗೌತಮ್ ಗಂಭೀರ್ ಅವರಿಗೆ ಕೆಕೆಆರ್ ನಿಂದ ಐಪಿಎಲ್ ಕಪ್ ಹಿಡಿದುಕೊಂಡಿರುವ ಗಂಭೀರ್ ಚಿತ್ರ ಹಾಕಿ ವಿಷಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications