Gautam Gambhir: ನಿಯಮಗಳನ್ನು ಪಾಲಿಸುವಂತೆ ಆಟಗಾರರಿಗೆ ಗಂಭೀರ್ ಎಚ್ಚರಿಕೆ!
ಆಸ್ಟ್ರೇಲಿಯಾ ವಿರುದ್ಧದ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಸೋಲಿನ ನಂತರ ಭಾರತ ತಂಡವು ಒತ್ತಡದಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದ ನಂತರ ಭಾರತ ತಂಡದ ಪ್ರದರ್ಶನ ನಿರಂತರವಾಗಿ ಕುಸಿಯುತ್ತಿದೆ. ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತು ಭಾರತ ಅಚ್ಚರಿ ಮೂಡಿಸಿತು. ಈ ಸೋಲು ಯಾರೂ ನಿರೀಕ್ಷಿಸದ ಫಲಿತಾಂಶವಾಗಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪರ್ತ್‌ನಲ್ಲಿ ಜಯ ಸಾಧಿಸಿತ್ತು. ಇದು ಭಾರತ ತಂಡದ ಸ್ಥೈರ್ಯ ಹೆಚ್ಚಿಸಿತು. ಆದರೆ, ಅಡಿಲೇಡ್ ಮತ್ತು ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಸೋಲು ಮತ್ತೆ ಟೀಮ್ ಇಂಡಿಯಾ ಆಟಗಾರರ ಹೆಗಲು ಬಾಗುವಂತೆ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಸತತ ಎರಡು ಸೋಲುಗಳು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಹಾಳು ಮಾಡಿವೆ. ಕೆಲವು ಕಿರಿಯ ಆಟಗಾರರ ಬೇಜವಾಬ್ದಾರಿ ವರ್ತನೆಯು ತಂಡವನ್ನು ಚಿಂತೆಗೀಡು ಮಾಡಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಸೋಲಿನ ನಂತರ ಹೆಡ್ ಕೋಚ್ ಗೌತಮ್ ಗಂಭೀರ್ ಕೋಪಗೊಂಡಿದ್ದಾರೆ. ಡ್ರೆಸ್ಸಿಂಗ್ ರೂಮಿನಲ್ಲಿ ಇಡೀ ತಂಡಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.

ವರದಿಗಳ ಪ್ರಕಾರ, ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಸೋಲಿನ ನಂತರ ಗಂಭೀರ್ ಅವರ ತಾಳ್ಮೆಯ ಕಟ್ಟೆ ಹೊಡೆದಿದೆ. 'ಸಾಕು, ಸಾಕು' ಎಂದು ಸಭೆಯಲ್ಲಿ ಆಟಗಾರರಿಗೆ ಹೇಳಿದ್ದಾರೆ. ಗಂಭೀರ್ ಯಾರ ಹೆಸರನ್ನೂ ತೆಗೆದುಕೊಳ್ಳದಿದ್ದರೂ, ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಆಡುವ ಬದಲು ಸಹಜ ಆಟದ ಹೆಸರಿನಲ್ಲಿ ತಮ್ಮ ಇಚ್ಛೆಗೆ ತಕ್ಕಂತೆ ಆಡತ್ತಿದ್ದಾರೆ ಎಂಬುದು ಅವರ ಮಾತಿನ ಸಾರವಾಗಿದೆ. 2024 ಜುಲೈ 9 ರಂದು ಹೆಡ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್, ಕಳೆದ ಆರು ತಿಂಗಳಲ್ಲಿ ತಮ್ಮ ಇಚ್ಛೆಯಂತೆ ತಂಡಕ್ಕೆ ಹೇಗೆ ಆಡಲು ಅವಕಾಶ ನೀಡಿದ್ದೆ ಎಂದು ಹೇಳಿದ್ದರು. ಆದರೆ ಈಗ ತಂಡವು ಹೇಗೆ ಆಡುತ್ತದೆ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಕೋಪಗೊಂಡಿದ್ದಾರೆ.
ತಂತ್ರ ಅನುಸರಿಸುತ್ತಿಲ್ಲ
ನಿಯಮಗಳನ್ನು ಪಾಲಿಸುವಂತೆ ಆಟಗಾರರಿಗೆ ಎಚ್ಚರಿಕೆ ನೀಡಿರುವ ಗೌತಮ್ ಗಂಭೀರ್, ಭವಿಷ್ಯದಲ್ಲಿ ತನ್ನ ಪೂರ್ವ ನಿರ್ಧಾರಿತ ತಂಡದ ತಂತ್ರವನ್ನು ಅನುಸರಿಸದವರಿಗೆ 'ಧನ್ಯವಾದ' ಎಂದು ಹೇಳಲಾಗುವುದು ಎಂದು ಹೇಳಿದ್ದಾರೆ. ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ತಂಡವು 1-2 ಹಿನ್ನಡೆಯಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಕಷ್ಟಕರವಾಗಿದೆ.
ತಂಡದ ಪೂರ್ವ ನಿರ್ಧಾರಿತ ಯೋಜನೆಗಳ ಬದಲಾಗಿ ಆಟಗಾರರು ತಮ್ಮ ಇಚ್ಛೆಯಂತೆ ಆಡುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ನಡೆದ ಸರಣಿಯಿಂದಲೂ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದ್ದರು ಎಂದು ಗಂಭೀರ್ ಸಭೆಯಲ್ಲಿ ತಿಳಿಸಿದ್ದಾರೆ.
ಗಂಭೀರ್ ಅಧಿಕಾರವಧಿಯಲ್ಲಿ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 0-3 ಅಂತರದ ಸೋಲನ್ನು ಎದುರಿಸಬೇಕಾಯಿತು. ಇದೀಗ ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಹಿಂದುಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications