For Quick Alerts
ALLOW NOTIFICATIONS  
For Daily Alerts
 

Gautam Gambhir: ಟೀಮ್‌ ಇಂಡಿಯಾಗೆ ಹೆಡ್‌ ಕೋಚ್‌ ಆಗಿ ಬರ್ತಾರ ಗೌತಮ್‌ ಗಂಭೀರ್‌?

ಮೇ 18 ಶನಿವಾರ, ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾದ ನೆಲದಲ್ಲಿ ನಡೆಯಲಿರುವ ಬಹುನಿರೀಕ್ಷಿತ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿ ಮುಗಿಯುತ್ತಿದ್ದಂತೆ ರಾಹುಲ್‌ ದ್ರಾವಿಡ್‌ ಅವರ ಭಾರತ ತಂಡದ ಹೆಡ್‌ ಕೋಚ್‌ ಅವಧಿ ಅಂತ್ಯವಾಗಲಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಹುದ್ದೆಗೆ ಅರ್ಜಿಗಳನ್ನು ಅಹ್ವಾನಿಸಿದೆ. ಹೀಗಾಗಿ ಭಾರತೀಯ ಹಾಗೂ ವಿದೇಶಿ ಆಟಗಾರರ ಹೆಸರುಗಳು ಈ ಹುದ್ದೆಗೆ ಬರುತ್ತಿವೆ.

Gautam Gambhir will be the Team India head coach

ಇಷ್ಟು ದಿನದವರೆಗೆ ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಹುದ್ದೆಗೆ ಸ್ಟಿಫನ್‌ ಫ್ಲೆಮಿಂಗ್‌, ವಿವಿಎಸ್‌ ಲಕ್ಷ್ಮಣ್‌ ಮತ್ತು ಜಸ್ಟಿನ್‌ ಲ್ಯಾಂಗರ್ ಹೆಸರು ಫೈನಲ್‌ ಲಿಸ್ಟ್‌ ನಲ್ಲಿದೆ ಎನ್ನಲಾಗಿತ್ತು. ಆದರೆ ಇದೀಗ ಈ ಮೂವರು ದಿಗ್ಗಜರ ಜೊತೆಗೆ ಟೀಮ್ ಇಂಡಿಯಾಗೆ ಎರಡು ವಿಶ್ವಕಪ್‌ ಗೆದ್ದುಕೊಟ್ಟ ಆಟಗಾರ ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಹಾಲಿ ಮೆಂಟರ್‌ ಗೌತಮ್‌ ಗಂಭೀರ್‌ ಹೆಸರು ಸದ್ದು ಮಾಡುತ್ತಿದೆ.

ಗೌತಮ್‌ ಗಂಭೀರ್‌ ಅವರನ್ನು ಟೀಮ್‌ ಇಂಡಿಯಾದ ನೂತನ ಹೆಡ್‌ ಕೋಚ್‌ ಆಗಿ ಆಯ್ಕೆ ಮಾಡಲು ಬಿಸಿಸಿಐ ಸಂಪರ್ಕಿಸಿದೆ ಎಂದು ಕ್ರಿಕೆಟ್‌ ಮೂಲಗಳು ತಿಳಿಸಿವೆ. ಪ್ರಸ್ತುತ ನಡೆಯುತ್ತಿರುವ 17ನೇ ಆವೃತ್ತಿಯ ಐಪಿಎಲ್ ಮುಗಿದ ಬಳಿಕ ಈ ಬಗ್ಗೆ ಬಿಸಿಸಿಐ ಅಧಿಕಾರಿಗಳೊಂದಿಗೆ ಗಂಭೀರ್‌ ಅವರು ಹೆಚ್ಚಿನ ಚರ್ಚೆಗಳನ್ನು ನಡೆಸುವ ನಿರೀಕ್ಷೆಯಿದೆ.

Gautam Gambhir will be the Team India head coach

ಆಸಕ್ತ ಅಭ್ಯರ್ಥಿಗಳು ಹುದ್ದೆಗೆ 2024ರ ಮೇ 27ರ ಸಂಜೆ 6 ಗಂಟೆವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ ಐಪಿಎಲ್‌ ಫೈನಲ್‌ ಮುಗಿದ ನಂತರ ಒಂದು ದಿನದ ವರೆಗೂ ಸಮಯ ನೀಡಲಾಗಿದೆ. ಹಾಲಿ ಕೋಚ್ ರಾಹುಲ್ ದ್ರಾವಿಡ್ ಮತ್ತೆ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಐಪಿಎಲ್ ಫ್ರಾಂಚೈಸಿ ತಂಡಗಳು ಅದ್ಭುತ ಪ್ರದರ್ಶನ ನೀಡಿವೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು
ತೊರೆದ ನಂತರ, ಗಂಭೀರ್ ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್‌ಜೈಂಟ್ಸ್‌ನ ಮಾರ್ಗದರ್ಶಕರಾಗಿದ್ದರು.

ಈ ಋತುವಿನಲ್ಲಿ ಲಕ್ನೋ ಪ್ಲೇ ಆಫ್‌ಗೆ ಅರ್ಹತೆ ಪಡೆದರು, ಒಮ್ಮೆಯೂ ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ವರ್ಷ ಗಂಭೀರ ಅವರು ಕೆಕೆಆರ್‌ಗೆ ಮರಳಿದ್ದು, ತಮ್ಮ ಮಾರ್ಗದರ್ಶನದ ಮೂಲಕ ಕೋಲ್ಕತ್ತಾ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೆಕೆಆರ್‌ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿರಲಿಲ್ಲ. ಹಾಗೆಯೇ ಈ ವರ್ಷ ಲಕ್ನೋಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.

ಗೌತಮ್ ಗಂಭೀರ್ ಅವರು 2007 ರಲ್ಲಿ ಟೀಮ್‌ ಇಂಡಿಯಾ ಟಿ20 ವಿಶ್ವಕಪ್ ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಗೆಲುವಿನ ಭಾಗವಾಗಿದ್ದರು. ಗಂಭೀರ್ 2011 ರಿಂದ 2017 ರವರೆಗೆ ಒಟ್ಟು 7 ಐಪಿಎಲ್ ಆವೃತ್ತಿಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವ ವಹಿಸಿ ಮುನ್ನೆಡೆಸಿದ್ದಾರೆ.

ಈ ಅವಧಿಯಲ್ಲಿ ಕೆಕೆಆರ್‌ 5 ಬಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಇದರೊಂದಿಗೆ 2012 ಮತ್ತು 2014ರಲ್ಲಿ ಎರಡು ಐಪಿಎಲ್‌ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

Story first published: Saturday, May 18, 2024, 13:03 [IST]
Other articles published on May 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+