Gautam Gambhir: ಟೀಮ್ ಇಂಡಿಯಾ ಹೆಡ್ ಕೋಚ್ ಮೇಲೆ ಗಂಭೀರ್ ಟೀಕೆಗಳು: ತಲೆ ದಂಡ ಆಗುತ್ತಾ?
ಟೀಮ್ ಇಂಡಿಯಾ ಪ್ರಸಕ್ತ ವರ್ಷ ಅಷ್ಟೋಂದು ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿಲ್ಲ. ಆದರೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ಸರಣಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಟಿ20 ಫಾರ್ಮೆಟ್‌ಗೆ ವಿದಾಯ ಹೇಳಿದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್ ಸಹ ತಮ್ಮ ಅವಧಿಯನ್ನು ಪೂರ್ಣಗೊಳಿಸಿತು. ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹೆಡ್ ಕೋಚ್ ರಾಹುಲ್ ದ್ರಾವಿಡ್ ತಮ್ಮ ಸ್ಥಾನವನ್ನು ಬಿಟ್ಟು ಕೆಳಗಿಳಿದರು.
ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಬಳಿಕ ಈ ಸ್ಥಾನ ತುಂಬುವುದು ಯಾರು ಎಂಬ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಬಿಸಿಸಿಐ ಐಪಿಎಲ್‌ನಲ್ಲಿ ಕೆಕೆಆರ್ ತಂಡಕ್ಕೆ ಚಾಂಪಿಯನ್ ಮುಕುಟ ತೊಡಿಸಿದ ಕೋಚ್ ಗೌತಮ್ ಗಂಭೀರ್ ಅವರತ್ತ ಓರೆ ಗಣ್ಣಿನಿಂದ ನೋಡುತ್ತಲೆ ಇತ್ತು. ಟೀಮ್ ಇಂಡಿಯಾ ಹೆಡ್ ಕೋಚ್ ಆಗುವ ಅವಕಾಶವನ್ನು ಗಂಭೀರ್ ಸಹ ಬಿಟ್ಟು ಕೊಡುವ ಆಸಕ್ತಿಯನ್ನು ಹೊಂದಿರಲಿಲ್ಲ. ಆದರೆ ಈ ವೇಳೆ ಅವರು ಕೆಲವು ಷರತ್ತುಗಳನ್ನು ಬಿಸಿಸಿಐ ಮುಂದೆ ಇಟ್ಟರು. ಬಿಸಿಸಿಐ ಈ ಎಲ್ಲ ಷರತ್ತುಗಳಿಗೆ ಅಸ್ತು ಎಂದಿತು.

ಗಂಭೀರ್ ಮೊದಲ ಪ್ರವಾಸ
ಕೋಚ್ ಹುದ್ದೆಯನ್ನು ಅಲಂಕರಿಸಿದ ಬಳಿಕ ಗೌತಮ್ ಗಂಭೀರ್ ಶ್ರೀಲಂಕಾ ಪ್ರವಾಸವನ್ನು ಕೈ ಗೊಂಡರು. ಈ ವೇಳೆ ತಂಡ ಟಿ20 ಸರಣಿಯನ್ನು ಗೆದ್ದರೆ, ಏಕದಿನ ಸರಣಿಯನ್ನು ಕೈ ಚೆಲ್ಲಿತು. ಈ ಪ್ರದರ್ಶನಕ್ಕಾಗಿ ಟೀಕೆಗಳು ಸಹ ಕೇಳಿ ಬಂದವು. ಇದಾದ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಹಾಗೂ ಟಿ20 ಸರಣಿಯನ್ನು ಆಡಿತು. ಬಾಂಗ್ಲಾ ಟೈಗರ್ಸ್ ಸದ್ದಡಗಿಸಿದ ಭಾರತ, ಮತ್ತೆ ಫಾರ್ಮ್‌ಗೆ ಮರಳಿರುವ ಸೂಚನೆ ನೀಡಿತು. ಆದರೆ ಮತ್ತೆ ಅದೆ ರಾಗ ಅದೇ ಹಾಡು..
ತವರಿನಲ್ಲಿ ಭಾರೀ ಮುಖಭಂಗ
ನ್ಯೂಜಿಲೆಂಡ್ ತಂಡ ಭಾರತದಲ್ಲಿ ಒಂದೆ ಒಂದು ಪಂದ್ಯವನ್ನು ಗೆಲ್ಲಲ್ಲು ಇಷ್ಟು ದಿನ ಹೆಣಗಾಟ ನಡೆಸಿತ್ತು. ಆದರೆ ಈ ಬಾರಿ ಬಂದು ಸರಣಿಯನ್ನೇ ಕ್ಲೀನ್ ಸ್ವೀಪ್ ಮಾಡಿತು. ಈ ಸರಣಿ ಸೋಲಿನ ಬಳಿಕವೂ ಟೀಕೆಗಳು ವ್ಯಾಪಕವಾದವು. ಆದರೆ ಗಂಭಿರ್ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಪುಟಿದೇಳುವೆವು ಎಂಬ ಆತ್ಮ ವಿಶ್ವಾಸ ಹೊಂದಿದ್ದರು. ಆದರೆ ಆ ಆಸೆ ಸಹ ಈಗ ಮಣ್ಣು ಪಾಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲು ಕಂಡ ಬಳಿಕ ಇವರನ್ನು ಕೆಳಗಿಳಿಸುವ ಕೂಗು ಹೆಚ್ಚಾಯಿತು.

ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸುವ ಹಾದಿ ಕಷ್ಟ
ಟೀಮ್ ಇಂಡಿಯಾ ಸತತವಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಎರಡು ಬಾರಿ ಪ್ರವೇಶ ಮಾಡಿತ್ತು. ಈ ಬಾರಿ ಪ್ರವೇಶಿಸಿ ಹ್ಯಾಟ್ರಿಕ್ ಮಾಡುವ ಕನಸು ಕಂಡಿತ್ತು. ಆದರೆ ಈಗಿನಿ ಪ್ರದರ್ಶನವನ್ನು ನೋಡಿದರೆ, ಟೀಮ್ ಇಂಡಿಯಾ ಸ್ವಂತ ಬಲದ ಮೇಲೆ ಫೈನಲ್‌ಗೆ ಹೋಗುವ ಲಕ್ಷಣಗಳು ಇಲ್ಲ. ಬೇರೆ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಭಾರತದ ಫೈನಲ್ ಆಸೆ ನಿಂತಿದೆ. ಭಾರತ ಫೈನಲ್‌ಗೆ ಪ್ರವೇಶ ಪಡೆಯದೇ ಇರುವುದು ನಿಶ್ಚಿತವಾಗಿ ಗಂಭೀರ್ ಅವರ ಕೋಚಿಂಗ್ ಸ್ಕಿಲ್‌ಗಳ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿವೆ.
ಚಾಂಪಿಯನ್ ಆಗದೇ ಇದ್ದರೆ ತುಂಬ ಕಷ್ಟ?
ಚಾಂಪಿಯನ್ಸ್ ಟ್ರೋಫಿ ಈ ಬಾರಿ ನಡೆಯಲಿದ್ದು, ಈ ಬಾರಿ ಪಾಕಿಸ್ತಾನ ಇದರ ಆಯೋಜನೆ ಮಾಡಲಿದೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಈ ವೇಳೆ ಟೀಮ್ ಇಂಡಿಯಾ ಒಂದು ವೇಳೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೇ ಇದ್ದಲ್ಲಿ, ಗೌತಮ್ ಗಂಭೀರ್ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳು ದಟ್ಟವಾಗಿವೆ.
ಮೊದಲ ಆಯ್ಕೆಯ ಕೋಚ್ ಅಲ್ಲ
ಗೌತಮ್ ಗಂಭೀರ್ ಎಂದಿಗೂ ಬಿಸಿಸಿಐನ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಮೊದಲ ಆಯ್ಕೆ ವಿವಿಎಸ್ ಲಕ್ಷ್ಮಣ್ ಮೂರು ಫಾರ್ಮೆಟ್‌ಗಳಲ್ಲಿ ತಂಢವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದರಿಂದ ಹಿಂದೆ ಸರಿದರು. ಹೀಗಾಗಿ ಬಿಸಿಸಿಐ ಬೇರೆ ಆಯ್ಕೆಯ ಮೊರೆ ಹೋಗಾ ಬೇಕಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications