WPL 2026: ಗೌತಮಿ ಅರ್ಧಶತಕದ ಬಲ: ಗುಜರಾತ್‌ಗೆ 179 ರನ್ ಗುರಿ ನೀಡಿದ ಆರ್‌ಸಿಬಿ
ವಡೋದರಾ: ಭರವಸೆಯ ಆಟಗಾರ್ತಿ ಗೌತಮಿ ನಾಯಕ್ ಅವರು ಬಾರಿಸಿದ ಅರ್ಧಶತಕದ ಬಲದಿಂದ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ 179 ರನ್‌ಗಳ ಗುರಿಯನ್ನು ಗುಜರಾತ್ ಜೈಂಟ್ಸ್ ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಗ್ರೇಸ್ ಹ್ಯಾರಿಸ್ (1), ಜಾರ್ಜಿಯಾ ವೋಲ್ (1) ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. 9 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಸ್ಮೃತಿ ಮಂಧಾನ ಹಾಗೂ ಗೌತಮಿ ನಾಯಕ್ ಜೋಡಿ ಉತ್ತಮ ಜೊತೆಯಾಟವನ್ನು ನೀಡಿತು. ಈ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಅಲ್ಲದೆ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿದ ಜೋಡಿ ಆರ್ಭಟಿಸಿತು.

3ನೇ ವಿಕೆಟ್‌ಗೆ ಗೌತಮಿ ಹಾಗೂ ಆರಂಭಿಕ ಜೊತೆಗೂಡಿ 45 ಎಸೆತಗಳಲ್ಲಿ 60 ರನ್ ಸೇರಿಸಿತು. ಈ ವೇಳೆ 4 ಬೌಂಡರಿ ನೆರವಿನಿಂದ 26 ರನ್ ಬಾರಿಸಿದ್ದ ಸ್ಮೃತಿ ಮಂಧಾನ ಔಟ್ ಆದರು.
ಗೌತಮಿ ಅರ್ಧಶತಕದ ಆಟ
4ನೇ ವಿಕೆಟ್‌ಗೆ ಮಧ್ಯಮ ಕ್ರಮಾಂಕದ ಗೌತಮಿ ಜೊತೆಗೂಡಿದ ಭರವಸೆಯ ಬ್ಯಾಟರ್ ರಿಚಾ ಘೋಷ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಸಹ ಮಧ್ಯದ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಅಲ್ಲದೆ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಈ ಜೋಡಿ ನೆರವಾಯಿತು. ಈ ಜೋಡಿ 45 ಎಸೆತಗಳಲ್ಲಿ 69 ರನ್ ಸೇರಿಸಿತು. ರಿಚಾ ಘೋಷ್ 3 ಸಿಕ್ಸರ್ ಸಹಾಯದಿಂದ 27 ರನ್ ಬಾರಿಸಿದ್ದಾಗ ಸೋಫಿ ಡಿವೈಸ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟ್ ಆದರು.
27 ವರ್ಷದ ಗೌತಮಿ ನಾಯಕ್ ಕ್ಲಾಸ್ ಬ್ಯಾಟಿಂಗ್ ನಡೆಸಿದರು. ಇವರು 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿ ಔಟ್ ಆದರು. ರಾಧಾ ಯಾದವ್ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 17 ರನ್ ಸಿಡಿಸಿದರು. ಕನ್ನಡತಿ ಶ್ರೇಯಾಂಕ ಪಾಟೀಲ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಸೇರಿಸಿತು. ಗುಜರಾತ್ ಜೈಂಟ್ಸ್ ಪರ ಕಾಶವಿ ಗೌತಮ್ ಹಾಗೂ ಆಶ್ಲೀ ಗಾರ್ಡ್ನರ್ ತಲಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications