For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್‌ vs ಇಶಾನ್ ಕಿಶನ್: ವಿಶ್ವಕಪ್ ಭಾರತ ತಂಡದಲ್ಲಿ ಗೌತಮ್ ಗಂಭೀರ್ ಮೊದಲ ಆದ್ಯತೆ ಯಾರಿಗೆ?

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ನಡೆಯಲಿರುವ 2023ರ ವಿಶ್ವಕಪ್ ಪಂದ್ಯಾವಳಿಗೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಭಾಗವಹಿಸುವ ಎಲ್ಲಾ ಹತ್ತು ತಂಡಗಳು ಅತ್ಯುತ್ತಮ ಸಂಯೋಜನೆಯನ್ನು ರೂಪಿಸುತ್ತಿವೆ.

ಈಗಾಗಲೇ ಆತಿಥೇಯ ಭಾರತ ಸೇರಿದಂತೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಪಂದ್ಯಾವಳಿಗೆ ತಮ್ಮ 15 ಸದಸ್ಯರ ತಂಡಗಳನ್ನು ಪ್ರಕಟಿಸಿವೆ.

ಇದೇ ವೇಳೆ ಭಾರತದ ಏಕದಿನ ವಿಶ್ವಕಪ್ ತಂಡದಲ್ಲಿ ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ಈ ಇಬ್ಬರು ಪರಿಣಿತ ಬ್ಯಾಟರ್-ವಿಕೆಟ್ ಕೀಪರ್‌ಗಳು ಸ್ಥಾನ ಪಡೆದಿದ್ದಾರೆ.

gautham-gambhir-choose-ishan-kishan

ಇನ್ನು ಇಶಾನ್ ಕಿಶನ್ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕುಸಿದಿದ್ದ ಭಾರತ ತಂಡವನ್ನು ಮೇಲೆತ್ತಿದರು.

ಇದೀಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಆಡುವ 11ರ ಬಳಗದಲ್ಲಿ ಆಡಲು ಕೆಎಲ್ ರಾಹುಲ್ ಅವರಿಗಿಂತ ಮೊದಲು ಇಶಾನ್ ಕಿಶನ್ ಅವರನ್ನು ಬೆಂಬಲಿಸಿದ್ದಾರೆ.

ಮಂಗಳವಾರ, ಸೆಪ್ಟೆಂಬರ್ 5ರಂದು ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಸಂಜು ಸ್ಯಾಮ್ಸನ್ ಅವರಿಗಿಂತ ಮುಂಚೆ ಆಯ್ಕೆ ಮಾಡಲಾಯಿತು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು 15 ಸದಸ್ಯರ ತಂಡವನ್ನು ಘೋಷಿಸಿದರು ಮತ್ತು ಕೆಎಲ್ ರಾಹುಲ್ ಅವರ ಫಿಟ್ನೆಸ್ ಬಗೆಗಿನ ಅನುಮಾನಗಳ ಹೊರತಾಗಿಯೂ ಆಯ್ಕೆ ಮಾಡಲಾಗಿದೆ.

"ವಿಶ್ವಕಪ್ ಚಾಂಪಿಯನ್‌ಶಿಪ್ ಗೆಲ್ಲಲು ಮುಖ್ಯವಾದದ್ದು ಹೆಸರು ಅಥವಾ ಫಾರ್ಮ್? ಯಾವುದು ಎಂದು ಹೇಳಿ. ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅವರು ಇಶಾನ್ ಕಿಶನ್ ರೀತಿಯ ಸತತ ನಾಲ್ಕು ಅರ್ಧಶತಕಗಳು ಗಳಿಸಿದ್ದರೆ, ಕೆಎಲ್ ರಾಹುಲ್ ಅವರನ್ನು ಬದಲಿಸುತ್ತಾರೆ ಎಂದು ನೀವು ಹೇಳುತ್ತೀರಾ?" ತಂಡದ ಆಯ್ಕೆಯ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಗೌತಮ್ ಗಂಭೀರ್ ಹೇಳಿದರು.

ಇಶಾನ್ ಕಿಶನ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ 4 ಸತತ ಅರ್ಧಶತಕಗಳನ್ನು ಬಾರಿಸುವ ಮೂಲಕ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರಲ್ಲಿ ಮೂರು ಆರಂಭಿಕ ಸ್ಥಾನದಲ್ಲಿ ಬಂದಿದ್ದರೆ, ಒಂದು ಅರ್ಧಶತಕ ಮಧ್ಯಮ ಕ್ರಮಾಂಕದಲ್ಲಿ ಪಾಕಿಸ್ತಾನ ವಿರುದ್ಧ ಬಂದಿದೆ.

gautham-gambhir-choose-ishan-kishan

"ವಿಶ್ವಕಪ್ ಟ್ರೋಫಿ ಗೆಲ್ಲಲು ಸಜ್ಜಾಗುತ್ತಿರುವಾಗ, ನೀವು ಹೆಸರನ್ನು ನೋಡುವುದಿಲ್ಲ, ಅವರ ಫಾರ್ಮ್ ಅನ್ನು ನಿರ್ಣಯಿಸುತ್ತೀರಿ. ನೀವು ಪ್ರದರ್ಶನ ನೀಡುವ ಮತ್ತು ವಿಶ್ವಕಪ್ ಗೆಲ್ಲುವ ಆಟಗಾರನನ್ನು ನೀವು ಆರಿಸಬೇಕು,"ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಿಳಿಸಿದರು.

"ವಿಶ್ವಕಪ್‌ನಲ್ಲಿ ಆಡುವ ತಂಡದ ಭಾಗವಾಗಿರಲು ಇಶಾನ್ ಕಿಶನ್ ಅವರು ಮಾಡಬೇಕಾದ ಎಲ್ಲವನ್ನೂ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಗೌತಮ್ ಗಂಭೀರ್ ಹೇಳಿದರು.

ಮೇ 1ರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ತೊಡೆಯ ಗಾಯಕ್ಕೆ ಒಳಗಾದ ಕೆಎಲ್ ರಾಹುಲ್ ಅಂದಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದರು. ನಂತರ, ಕೆಎಲ್ ರಾಹುಲ್ ಅವರು ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಪಡೆದು ಚೇತರಿಸಿಕೊಂಡರು.

"ವಿಶ್ವಕಪ್ ಪಂದ್ಯದಲ್ಲಿ ಇಶಾನ್ ಕಿಶನ್ ಅವರು ಕೆಎಲ್ ರಾಹುಲ್ ಅವರಿಗಿಂತ ಮೊದಲು ಆಡಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಗೌತಮ್ ಗಂಭಿರ್ ಅಭಿಪ್ರಾಯಪಟ್ಟರು.

ಪಾಕಿಸ್ತಾನ ವಿರುದ್ಧ 81 ಎಸೆತಗಳಲ್ಲಿ 82 ರನ್ ಗಳಿಸಿದ ಇಶಾನ್ ಕಿಶನ್ ಅವರನ್ನು ಏಷ್ಯಾ ಕಪ್ 2023ರ ಉಳಿದ ಪಂದ್ಯಗಳ ಮೂಲಕ ಭಾರತದ ಆಡುವ 11ರ ಬಳಗದಲ್ಲಿ ಆಯ್ಕೆ ಮಾಡಲು ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿದೆ.

ಸೆಪ್ಟೆಂಬರ್ 10ರಂದು ಪಾಕಿಸ್ತಾನ ವಿರುದ್ಧ ಭಾರತ ತಂಡದ ಸೂಪರ್ 4 ಪಂದ್ಯಕ್ಕೆ ಮುಂಚಿತವಾಗಿ ಸಂಪೂರ್ಣ ಫಿಟ್ ಆಗಿರುವ ಕೆಎಲ್ ರಾಹುಲ್, ಭಾರತದ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಕಾಯಬೇಕಾಗುತ್ತದೆ.

Story first published: Wednesday, September 6, 2023, 15:34 [IST]
Other articles published on Sep 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+