Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ.. ಕೊಹ್ಲಿ.. ಎಂದು ಕೂಗಿದ ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿದ ಗೌತಮ್ ಗಂಭೀರ್!

ಶ್ರೀಲಂಕಾದಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ವಿರಾಟ್ ಕೊಹ್ಲಿ ಅಭಿಮಾನಿಗಳು ಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ.

ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ಮಳೆಯಿಂದಾಗಿ ಗೌತಮ್ ಗಂಭೀರ್ ಕ್ರೀಡಾಂಗಣದೊಳಗೆ ನುಗ್ಗುತ್ತಿದ್ದಾಗ ಅಭಿಮಾನಿಗಳು ಕೊಹ್ಲಿ.. ಕೊಹ್ಲಿ.. ಎಂದು ಕೂಗಿದ ಘಟನೆ ನಡೆದಿದೆ.

ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆಯಾಗಿ ವಿಕೆಟ್ ಒಪ್ಪಿಸಿದ್ದರು. ಇದಕ್ಕಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯ ಶಾಟ್ ಆಯ್ಕೆಯನ್ನು ಟೀಕಿಸಿದ್ದರು. ಇದು ವಿರಾಟ್ ಕೊಹ್ಲಿಯ ಅಭಿಮಾನಿಗಳನ್ನು ರೊಚ್ಚಿಗೇಳಿಸಿತ್ತು.

gautham-gambhir-showed-inappropriate-gesture

ಈ ವೇಳೆ ತಾಳ್ಮೆ ಕಳೆದುಕೊಂಡ ಲೋಕಸಭೆ ಸಂಸದರೂ ಆಗಿರುವ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ತಮ್ಮ ಮಧ್ಯದ ಬೆರಳನ್ನು ತೋರಿಸುವ ಮೂಲಕ ಟ್ರೋಲರ್‌ಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ವಿರಾಟ್ ಕೊಹ್ಲಿ ಅಭಿಮಾನಿಗಳು ಗೌತಮ್ ಗಂಭೀರ್ ಅವರನ್ನು ಟ್ರೋಲ್ ಮಾಡುತ್ತಿರುವುದು ಇದೇ ಮೊದಲೇನಲ್ಲ.

2023ರ ಐಪಿಎಲ್ ಸಂದರ್ಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ತೀವ್ರ ವಾಗ್ವಾದ ನಡೆಸಿದ್ದರು. ತಳ್ಳಾಟ-ನೀಕಾಟದವರೆಗೂ ಹೋಗಿತ್ತು.

ಇತ್ತೀಚೆಗೆ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಇದು ಕೇವಲ ಒಂದು ಘಟನೆಯಾಗಿ ಉಳಿಯದೆ, ಆಯಾ ಕ್ರಿಕೆಟ್ ನಾಯಕರನ್ನು ಆರಾಧಿಸುವ ಎರಡೂ ಕಡೆಯ ಅಭಿಮಾನಿಗಳನ್ನು ಪ್ರಚೋದಿಸಿತು.

Gautham Gambhir Showed Inappropriate Gesture Towards Fans Who Were Chanting Kohli Kohli!


ಇದಾದ ನಂತರ, ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳ ಗುಂಪು, ವಿರಾಟ್ ಕೊಹ್ಲಿಯ ಬೆಂಬಲಿಗರು, ಗೌತಮ್ ಗಂಭೀರ್ ಮೆಟ್ಟಿಲುಗಳನ್ನು ಏರುತ್ತಿರುವುದನ್ನು ಕಂಡು ಕೊಹ್ಲಿ.. ಕೊಹ್ಲಿ.. ಎಂದು ಜಪಿಸಲು ಪ್ರಾರಂಭಿಸಿದರು.

ಇನ್ನು ಎಲ್‌ಎಸ್‌ಜಿಯ ನವೀನ್-ಉಲ್-ಹಕ್ ಅವರೊಂದಿಗೆ ವಿವಾದಾತ್ಮಕ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಅವರು ವಿರಾಟ್ ಕೊಹ್ಲಿ ತನ್ನನ್ನು ಮೌಖಿಕವಾಗಿ ನಿಂದಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ ತಮ್ಮ ನಡವಳಿಕೆಗಾಗಿ ದಂಡವನ್ನು ಕಟ್ಟಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಲೆವೆಲ್ 2 ಅಪರಾಧಕ್ಕಾಗಿ ಪ್ರತಿಯೊಬ್ಬರಿಗೂ ಅವರ ಪಂದ್ಯದ ಶುಲ್ಕದ 100 ಪ್ರತಿಶತದಷ್ಟು ದಂಡ ವಿಧಿಸಲಾಯಿತು. ಆದರೆ, ನವೀನ್-ಉಲ್-ಹಕ್ ಶೇ.50ರಷ್ಟು ದಂಡ ಪಾವತಿಸಬೇಕಾಯಿತು.

ಕೊಹ್ಲಿ.. ಕೊಹ್ಲಿ.. ಎಂಬ ಕೂಗು ಗೌತಮ್ ಗಂಭೀರ್‌ಗೆ ಇರಿಸು ಮುರಿಸು ತರುತ್ತಿದೆ. ಇದೀಗ ಮತ್ತೊಮ್ಮೆ ಘಟನೆ ಮರುಕಳಿಸಿದ್ದು, ಉದ್ವಿಗ್ನ ಪರಿಸ್ಥಿತಿಯ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಮೈದಾನದ ಜಗಳ ಇಷ್ಟಕ್ಕೇ ಮುಗಿದಂತೆ ಕಾಣುತ್ತಿಲ್ಲ.

Story first published: Monday, September 4, 2023, 20:43 [IST]
Other articles published on Sep 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+