Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಿಲ್‌ಗೆ ವಿಶೇಷ ಉಡುಗೊರೆ ನೀಡಿದ ಗವಾಸ್ಕರ್‌: ವಿಡಿಯೋ ವೈರಲ್

ಭಾರತ ಹಾಗೂ ಇಂಗ್ಲೆಂಡ್‌ ನಡುವಣ 5ನೇ ಟೆಸ್ಟ್‌ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಶನಿವಾರದ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕರನ್ನು ದಿಗ್ಗಜ ಕ್ರಿಕೆಟ್‌ ಆಟಗಾರ ಸುನಿಲ್ ಗವಾಸ್ಕರ್ ಭೇಟಿ ಆದರು. ಈ ವೇಳೆ ಸುನಿಲ್‌ ಗವಾಸ್ಕರ್‌ ಟೀಮ್ ಇಂಡಿಯಾದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಭಾರತ ಮೂರನೇ ದಿನದಾಟದಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಆರಂಭಿಕ ಯಶಸ್ವಿ ಜೈಸ್ವಾಲ್‌ ಶತಕ ಬಾರಿಸಿ ತಂಡಕ್ಕೆ ನೆರವಾದರು. ಇನ್ನು ಆಕಾಶ್‌ ದೀಪ್‌, ಆಲ್‌ರೌಂಡರ್‌ಗಳಾದ ವಾಷಿಂಗ್ಟನ್‌ ಸುಂದರ್ ಹಾಗೂ ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಪರಿಣಾಮ ಭಾರತ 374 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಂಡಕ್ಕೆ ನೀಡಿತು. ದಿನದಾಟದಂತ್ಯಕ್ಕೆ ಇಂಗ್ಲೆಂಡ್‌ 1 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Gavaskar Gifts Gill Special Cap Praises Team India s Dominant Oval Test Performance

ದಿನದಾಟದ ಮುಗಿದ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್‌, ಶುಭಮನ್‌ ಗಿಲ್ ಅವರನ್ನು ಭೇಟಿ ಮಾಡಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ನೀವು ನನ್ನ ದಾಖಲೆ ಅಳಿಸಬಹುದು ಎಂದು ಭಾವಿಸಿ ನಾನು ನಿನಗೆ ಉಡುಗೊರೆಯನ್ನು ಸಿದ್ಧ ಪಡಿಸಿದ್ದೆ. ಆದರೆ ಈ ಸರಣಿಯಲ್ಲಿ ಮಾಡಲು ಸಾಧ್ಯವಾಗದನ್ನು ಮುಂದಿನ ಸರಣಿಯಲ್ಲಿ ಮಾಡಿ. ನನ್ನಿಂದ ಒಂದು ಸಣ್ಣ ಉಡುಗೊರೆ ಎಂದು ಗವಾಸ್ಕರ್‌ ತಂದಿದ್ದ ಕೈಚೀಲದಲ್ಲಿ ಕೈ ಹಾಕಿದರು.

ಚೀಲದಿಂದ ಗವಾಸ್ಕರ್ ಅವರು ಕ್ಯಾಪ್‌ ತೆಗೆದುಕೊಟ್ಟರು. ಯಾರೋ ಇದನ್ನು ನನಗಾಗಿ ತಯಾರಿಸಿದ್ದರು. ಎಸ್‌ಜಿ ಅಕ್ಷರಗಳನ್ನು ಹೊಂದಿರುವ ಶರ್ಟ್ ಕೂಡ ಇದರಲ್ಲಿತ್ತು. ಇದು ನಿನಗೆ ಸರಿ ಹೊಂದುತ್ತದೋ ಇಲ್ಲವೋ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ತಿಳಿಸಿದರು. ಅಲ್ಲದೆ ಇದು ತೆಗೆದುಕೋ ನನ್ನ ಸಹಿಯನ್ನು ಹೊಂದಿರುವ ಕ್ಯಾಪ್‌. ನಾನು ಇದನ್ನು ಆಯ್ದ ಕೆಲವರಿಗೆ ಮಾತ್ರ ನೀಡಿದ್ದೇನೆ. ಅಲ್ಲದೆ ನಾಲ್ಕನೇ ದಿನದಂದು ನಾನು ನನ್ನ ಅದೃಷ್ಟದ ಜಾಕೆಟ್‌ ಹಾಕಿಕೊಳ್ಳುವೆ. ಇದೇ ಜಾಕೆಟ್‌ನ್ನು ನಾನು ಗಬ್ಬಾ ಟೆಸ್ಟ್‌ ವೇಳೆಯೂ ಹಾಕಿಕೊಂಡಿದ್ದಾಗಿ ತಿಳಿಸಿದ್ದಾರೆ.

ಸುನಿಲ್ ಅಭಿಮಾನಿ

ಇನ್ನು ಟೀಮ್ ಇಂಡಿಯಾದ ಪ್ರದರ್ಶನವನ್ನು ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ. ಇದೇ ವೇಳೆ ಸಿರಾಜ್‌ ಎಸೆದ ಎಸೆತದ ಬಗ್ಗೆ ಸಹ ಗವಾಸ್ಕರ್‌ ಮಾತನಾಡಿದರು. ಸಿರಾಜ್‌ ಜಾಕ್ ಕ್ರಾಲಿ ಅವರನ್ನು ಬೋಲ್ಡ್‌ ಮಾಡಲು ವಿಭಿನ್ನ ಸೆಟ್‌ ಅಪ್‌ ಮಾಡಿ, ಯಾರ್ಕರ್‌ ಬೌಲ್ ಮಾಡಿ ಬೋಲ್ಡ್ ಮಾಡಿದರು. ಒಟ್ಟಾರೆ ಟೀಮ್ ಇಂಡಿಯಾಕ್ಕೆ ಸುನಿಲ್‌ ಗವಾಸ್ಕರ್ ಆಲ್‌ ದಿ ಬೆಸ್ಟ್‌ ತಿಳಿಸಿದ್ದಾರೆ. ಟೀಮ್ ಇಂಡಿಯಾದ ಪರ ಶುಭಮನ್‌ ಗಿಲ್‌ ಒಂದೇ ಟೆಸ್ಟ್‌ ಸರಣಿಯಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸುನಿಲ್‌ ಗವಾಸ್ಕರ್‌ ಹೆಸರಿನಲ್ಲಿತ್ತು.

Story first published: Sunday, August 3, 2025, 17:10 [IST]
Other articles published on Aug 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+