For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್ ಅಭಿಮಾನಿಗಳಿಗೆ ಕಹಿ ಸುದ್ದಿ; ಜಾರ್ಜ್ ಬೈಲಿ ಹೇಳಿದ್ದೇನು?

ಜುಲೈ 15 ಸೋಮವಾರ, ಆಸ್ಟ್ರೇಲಿಯಾ ಸ್ಪೋಟಕ ಎಡಗೈ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್ ಟಿ20 ವಿಶ್ವಕಪ್ ಬಳಿಕ ಎಲ್ಲಾ ಮಾದರಿ ಕ್ರಿಕೆಟ್‌ಗೂ ವಿದಾಯ ಹೇಳಿದ್ದರು. ಆದರೂ ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ವಾರ್ನರ್‌ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಆದರೆ, ಈಗ ಆಸ್ಟ್ರೇಲಿಯಾ ತಂಡದ ರಾಷ್ಟ್ರೀಯ ಆಯ್ಕೆಗಾರ ಜಾರ್ಜ್ ಬೈಲಿ ಅವರು ವಾರ್ನರ್‌ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ವಾರ್ನರ್ ಹೆಸರನ್ನು ಪರಿಗಣಿಸುವುದಿಲ್ಲ ಎಂದು ಜಾರ್ಜ್‌ ಬೈಲಿ ಸ್ಪಷ್ಟಪಡಿಸಿದ್ದಾರೆ.

George Bailey gave bad news to David Warner fans

ಚಾಂಪಿಯನ್ಸ್ ಟ್ರೋಫಿಗಿಲ್ಲ ವಾರ್ನರ್‌

ಈಗಾಗಲೇ ಅನುಭವಿ ಬ್ಯಾಟರ್ ವಾರ್ನರ್ ಅವರು ಆಸ್ಟ್ರೇಲಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಾರ್ಜ್ ಬೈಲಿ, 'ಡೇವಿಡ್ ನಿವೃತ್ತಿ ಹೊಂದಿದ್ದಾರೆ ಎಂಬುದು ನಮ್ಮ ತಿಳುವಳಿಕೆಯಾಗಿದೆ.

ಎಲ್ಲಾ ಮೂರು ಸ್ವರೂಪಗಳಲ್ಲಿ ವಾರ್ನರ್‌ ಅದ್ಭುತ ವೃತ್ತಿಜೀವನಕ್ಕಾಗಿ ಅವರನ್ನು ಪ್ರಶಂಸಿಸಬೇಕು. ವಾರ್ನರ್ 2025ರ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡದ ಆಯ್ಕೆಯಲ್ಲಿ ಪರಿಗಣನೆಯಲ್ಲಿಲ್ಲ ಎಂದಿದ್ದಾರೆ.

ಡೇವಿಡ್ ವಾರ್ನರ್ ಅಂತರರಾಷ್ಟ್ರೀಯ ವೃತ್ತಿಜೀವನ

ಡೇವಿಡ್ ವಾರ್ನರ್ ಅವರು ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನಲ್ಲಿ 112 ಟೆಸ್ಟ್ ಪಂದ್ಯಗಳು, 161 ಏಕದಿನ ಮತ್ತು 110 ಟಿ20I ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ. ವಾರ್ನರ್ ಟೆಸ್ಟ್ ಪಂದ್ಯಗಳಲ್ಲಿ 44.56 ಸರಾಸರಿ ಮತ್ತು 70.19 ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 8786 ರನ್ ಗಳಿಸಿದ್ದು, ಟೆಸ್ಟ್‌ನಲ್ಲಿ 26 ಶತಕಗಳನ್ನು ಹೊಂದಿದ್ದಾರೆ.

ವಾರ್ನರ್‌ ಅವರ ಏಕದಿನ ಕ್ರಿಕೆಟ್‌ ವೃತ್ತಿಜೀವನವು ತುಂಬಾ ಉತ್ತಮವಾಗಿದೆ. 97.26 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನೊಂದಿಗೆ 6932 ರನ್ ಗಳಿಸಿರುವ ವಾರ್ನರ್ 22 ಶತಕ ಮತ್ತು 33 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಆಸ್ಟ್ರೇಲಿಯಾದ ಪರ ಸ್ಪೋಟಕ ಬ್ಯಾಟರ್ ಟಿ20 ಯಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. 33.43 ರ ಸರಾಸರಿಯಲ್ಲಿ 142.47 ಸ್ಟ್ರೈಕ್ ರೇಟ್‌ನೊಂದಿಗೆ 3277 ರನ್‌ಗಳನ್ನು ಹೊಡೆದಿದ್ದಾರೆ.

ವಾರ್ನರ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಟ್ಟು 18,995 ರನ್, 49 ಶತಕ ಮತ್ತು 147 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 38 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಮತ್ತು 13 ಬಾರಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸರಿಯಾದ ವಿದಾಯ ಸಿಗಲಿಲ್ಲ

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆದ 2024ರ ಟಿ20 ವಿಶ್ವಕಪ್‌ ಬಳಿಕ ಚುಟುಕು ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವುದಾಗಿ ವಾರ್ನರ್‌ ತಿಳಿಸಿದ್ದರು. ಇನ್ನೊಂದೆಡೆ ಮಿಚೆಲ್‌ ಮಾರ್ಷ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ ಸೂಪರ್‌-8 ರಲ್ಲೇ ಟೂರ್ನಿಯಿಂದ ಹೊರಗುಳಿದಿತ್ತು. ಹೀಗಾಗಿ ವಾರ್ನರ್‌ ಅವರ ಟ್ರೋಫಿ ಗೆದ್ದು ವಿದಾಯ ಹೇಳುವ ಕನಸು ನುಚ್ಚು ನೂರಾಗಿತ್ತು.

Story first published: Monday, July 15, 2024, 18:56 [IST]
Other articles published on Jul 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+