ಜಾರ್ಜ್ ವರ್ಕರ್ ಶತಕ, ನ್ಯೂಜಿಲೆಂಡ್ 'ಎ'ಗೆ ತಲೆ ಬಾಗಿದ ಭಾರತ 'ಎ'

ಕ್ರೈಸ್ಟ್‌ಚರ್ಚ್, ಜನವರಿ 24: ನ್ಯೂಜಿಲೆಂಡ್ ಓಪನರ್ ಜಾರ್ಜ್ ವರ್ಕರ್ ಅವರ ಆಕರ್ಷಕ ಶತಕದ ನೆರವಿನೊಂದಿಗೆ ಭಾರತ 'ಎ' ವಿರುದ್ಧದ ಎರಡನೇ ಅನಧಿಕೃತ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 'ಎ' 29 ರನ್‌ಗಳ ಜಯ ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ಎ ತಂಡ, ಜಾರ್ಜ್ ವರ್ಕರ್ 135, ಗ್ಲೆನ್ ಫಿಲಿಪ್ಸ್ 13, ನಾಯಕ ಟಾಮ್ ಬ್ರೂಸ್ 17, ಜೇಮ್ಸ್ ನೀಶಮ್ 33, ಕೋಲ್ ಮೆಕೊಂಚಿ 56 ರನ್‌ನೊಂದಿಗೆ 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 295 ರನ್ ಮಾಡಿತು.
ಗುರಿ ಬೆಂಬತ್ತದ ಭಾರತ 'ಎ' ತಂಡ, ನಾಯಕ ಮಯಾಂಕ್ ಅಗರ್ವಾಲ್ 37, ಸೂರ್ಯಕುಮಾರ್ ಯಾದವ್ 20, ಇಶಾನ್ ಕಿಶಾನ್ 44, ವಿಜಯ್ ಶಂಕರ್ 41, ಕೃನಾಲ್ ಪಾಂಡ್ಯ 51, ಅಕ್ಸರ್ ಪಟೇಲ್ 21 ರನ್ ಸೇರ್ಪಡೆಯೊಂದಿಗೆ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿತು.
ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಮೊಹಮ್ಮದ್ ಸಿರಾಜ್ 2, ಇಶಾನ್ ಪೊರೇಲ್ 3, ಅಕ್ಸರ್ ಪಟೇಲ್ ಮತ್ತು ಕೃನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು. ಭಾರತದ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಕೈಲ್ ಜಾಮಿಸನ್, ಜಾಕೋಬ್ ಡಫ್ಫಿ ಜೇಮ್ಸ್ ನೀಶಮ್ ತಲಾ 2, ಆಲ್ಲಿ ನ್ಯೂಟನ್ ಮತ್ತು ರಚಿನ್ ರವೀಂದ್ರ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications