For Quick Alerts
ALLOW NOTIFICATIONS  
For Daily Alerts
 

ಜಾರ್ಜಿಯಾ ವೋಲ್‌ ಆಸೀಸ್‌ಗೆ ಭರ್ಜರಿ ಜಯ: ಹರ್ಮನ್ ಪಡೆಗೆ ನಿರಾಸೆ

ಭರವಸೆಯ ಆಟಗಾರ್ತಿ ಜಾರ್ಜಿಯಾ ವೋಲ್‌ ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಭಾರತ ಮಹಿಳಾ ತಂಡವನ್ನು ಮಣಿಸಿ, ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನವಶಕ್ಕೆ ಪಡೆದಿದೆ.

ಟಾಸ್‌ ಗೆದ್ದರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪ್ರತಿಕಾ ರಾವಲ್‌ ಹಾಗೂ ಸ್ಮೃತಿ ಮಂಧಾನ ಜೋಡಿ ಮೊದಲ ವಿಕೆಟ್‌ಗೆ 16.3 ಓವರ್‌ಗಳಲ್ಲಿ 78 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸ್ಮೃತಿ ಮಂಧಾನ ಅವರು 37 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 31 ರನ್‌ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗಸ್‌ (11) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು.

Georgia Voll

ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್‌ 81 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 52 ರನ್‌ ಬಾರಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ರನ್‌ಔಟ್‌ಗೆ ಬಲಿಯಾದರು. ಭರವಸೆಯ ಆಟಗಾರ್ತಿ ದೀಪ್ತಿ ಶರ್ಮಾ (1), ಅಮನ್ಜೋತ್‌ ಕೌರ್‌ (13), ವಿಕೆಟ್‌ ಕೀಪರ್ ಬ್ಯಾಟರ್‌ ರಿಚಾ ಘೋಷ್ (22), ಕಾಶ್ವಿ ಗೌತಮ್ (25), ಕ್ರಾಂತಿ ಗೌಡ (19) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.

ನಾಯಕಿ ಹರ್ಮನ್ ಪ್ರೀತ್ ಕೌರ್‌ ಭರ್ಜರಿ ಪ್ರದರ್ಶನ ನೀಡಿದರು. ಇವರು 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 54 ರನ್‌ ಬಾರಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 251 ರನ್‌ ಸೇರಿಸಿತು. ಆಸೀಸ್‌ ಪರ ಆಶ್ಲೀ ಗಾರ್ಡ್ನರ್ ಹಾಗೂ ಅನ್ನಾಬೆಲ್ ಸದರ್ಲ್ಯಾಂಡ್ ತಲಾ 2 ವಿಕೆಟ್‌ ಕಬಳಿಸಿದರು.

ಜಾರ್ಜಿಯಾ ವೋಲ್‌ ಶತಕ

252 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ್ತಿ ಅಲೆಸ್ಸಾ ಹಿಲೆ (6) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಜಾರ್ಜಿಯಾ ವೋಲ್‌ ಎರಡನೇ ವಿಕೆಟ್‌ಗೆ ಸೊಗಸಾದ ಜೊತೆಯಾಟವನ್ನು ನೀಡಿದರು. ಈ ಜೋಡಿಯ ಬೇರ್ಪಡಿಸಲು ಟೀಮ್ ಇಂಡಿಯಾ ಬೌಲರ್‌ಗಳು ವಿಫಲರಾದರು. ಈ ಜೋಡಿ 94 ಎಸೆತಗಳಲ್ಲಿ 119 ರನ್‌ ಸೇರಿಸಿತು. ಫೋಬೆ ಲಿಚ್‌ಫೀಲ್ಡ್ 11 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 80 ರನ್‌ ಸಿಡಿಸಿದರು.

Georgia Voll

ಮೂರನೇ ವಿಕೆಟ್‌ಗೆ ಬೆತ್‌ ಮೂನಿ ಮತ್ತು ಜಾರ್ಜಿಯಾ ಜೋಡಿ 67 ಎಸೆತಗಳಲ್ಲಿ 82 ರನ್‌ ಬಾರಿಸಿತು. ಭರವಸೆಯ ಆಟಗಾರ್ತಿಯ ಜಾರ್ಜಿಯಾ ವೋಲ್‌ 13 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 101 ರನ್‌ ಸಿಡಿಸಿ ಔಟ್ ಆದರು. ಬೆತ್ ಮೂನಿ 31 ರನ್‌ ಬಾರಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಆಸ್ಟ್ರೇಲಿಯಾ 36.1 ಓವರ್‌ಗಳಲ್ಲಿ 5 ವಿಕೆಟ್‌ಗೆ 252 ರನ್‌ ಸೇರಿಸಿತು.

Story first published: Friday, February 27, 2026, 18:30 [IST]
Other articles published on Feb 27, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+