Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025 UP vs RCB: ಜಾರ್ಜಿಯಾ ವಾಲ್‌ ಅಬ್ಬರದ ಬ್ಯಾಟಿಂಗ್‌: ಮಹಿಳಾ ದಿನಾಚರಣೆಯಂದೇ ಸ್ಟಾರ್‌ ಪ್ಲೇಯರ್‌ ಇತಿಹಾಸ

ಯುಪಿ ತಂಡದ ಆರಂಭಿಕ ಜಾರ್ಜಿಯಾ ವಾಲ್‌ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ನೆರವಾದ್ರು. ಈ ಮೂಲಕ ಮಹಿಳೆಯರ ಪವರ್‌ನ್ನು ಮಹಿಳಾ ದಿನಾಚರಣೆಯಂದು ಜಾರ್ಜಿಯಾ ತೋರಿಸಿದರು. ಲಕ್ನೋ ಅಂಗಳದಲ್ಲಿ ನಡೆದ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆತಿಥೇಯ ಜಾರ್ಜಿಯಾ ವಾಲ್‌ ಅವರು ಅಭಿಮಾನಿಗಳನ್ನು ರಂಜಿಸಿದರು. ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಜಾರ್ಜಿಯಾ ವಾಲ್ ಹಾಗೂ ಗ್ರೇಸ್ ಹ್ಯಾರೀಸ್‌ ಅವರು ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಇವರನ್ನು ಕಟ್ಟಿ ಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಆರಂಭದಲ್ಲಿ ವಿಫಲರಾದರು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್‌ ಫುಲ್‌ ಬ್ಯಾಟಿಂಗ್ ಪ್ರದರ್ಶನ ನೀಡಿತು.

ಗ್ರೇಸ್‌ ಹ್ಯಾರಿಸ್‌ ಹಾಗೂ ಜಾರ್ಜಿಯಾ ಜೋಡಿ 7.1 ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟವನ್ನು ನೀಡಿತು. ಗ್ರೇಸ್‌ ಹ್ಯಾರಿಸ್‌ 39 ರನ್‌ಗಳಿಸಿ ಮುನ್ನಗುತ್ತಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು. ಕಿರಣ್ ನವಗಿರೆ ಹಾಗೂ ಜಾರ್ಜಿಯಾ ವಾಲ್‌ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಮೊದಲ ವಿಕೆಟ್‌ಗೆ ಹಾಕಿಕೊಟ್ಟ ಅಡಿಪಾಯದ ಮೇಲೆ ಈ ಜೋಡಿ ಅಬ್ಬರದ ಮಹಲ್‌ ಕಟ್ಟಿತು. ಎರಡನೇ ವಿಕೆಟ್‌ಗೆ ಕಿರಣ್ ನವಗಿರೆ ಹಾಗೂ ವಾಲ್‌ ಜೋಡಗೂಡಿ 31 ಎಸೆತಗಳಲ್ಲಿ 71 ರನ್‌ ಸೇರಿಸಿತು. ಕಿರಣ್ ನವಗಿರೆ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 46 ರನ್‌ ಸಿಡಿಸಿ ಔಟ್ ಆದರು.

Georgia Wall s Explosive 99 Sets New WPL Record as UP Warriorz Dominate RCB

ಮೂರನೇ ವಿಕೆಟ್‌ಗೂ ಯುಪಿ ಜೋಡಿ ಅಮೋಘ ಜೊತೆಯಾಟವನ್ನು ಸೇರಿಸಿತು. ಜಾರ್ಜಿಯಾ ಹಾಗೂ ಚೆಲ್ಲಿ ಹೆನ್ರಿ (19 ರನ್) ಜೋಡಿ 25 ಎಸೆತಗಳಲ್ಲಿ 43 ರನ್‌ ಸೇರಿಸಿತು.

ಆರಂಭಿಕ ಆಟಗಾರ್ತಿ ಜಾರ್ಜಿಯಾ ವಾಲ್‌ ಅವರು ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು ಮೈದಾನದ ದಶ ದಿಕ್ಕುಗಳಿಗೆ ಚೆಂಡಿನ ದರ್ಶನವನ್ನು ಮಾಡಿಸಿದರು. ಇವರ ಆಟಕ್ಕೆ ಬ್ರೇಕ್‌ ಹಾಕುವಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ವಿಫಲರಾದರು. ಇವರು 56 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 99 ರನ್‌ ಬಾರಿಸಿ ಮಿಂಚಿದರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆರ್‌ಸಿಬಿ ಪರ ಜಾರ್ಜಿಯಾ ವೇರ್‌ಹ್ಯಾಮ್ 2 ವಿಕೆಟ್‌ ಹಾಗೂ ಚಾರ್ಲಿ ಡೀನ್ 1 ವಿಕೆಟ್‌ ಪಡೆದರು.

WPL ಇನಿಂಗ್ಸ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ್ತಿಯರು

ಸೋಫಿಯಾ ಡಿವೈನ್ (ಆರ್‌ಸಿಬಿ), ಗುಜರಾತ್‌ ವಿರುದ್ಧ, 99 ರನ್‌
ಜಾರ್ಜಿಯಾ ವಾಲ್‌ (ಯುಪಿ), ಆರ್‌ಸಿಬಿ ವಿರುದ್ಧ, 99 ರನ್‌
ಅಲಿಸಾ ಹೀಲಿ (ಯುಪಿ), ಆರ್‌ಸಿಬಿ ವಿರುದ್ಧ, 96* ರನ್‌
ಬೆತ್‌ ಮೋನಿ (ಗುಜರಾತ್‌), ಯುಪಿ ವಿರುದ್ಧ 96* ರನ್‌
ಹರ್ಮನ್‌ ಪ್ರೀತ್ ಕೌರ್‌ (ಮುಂಬೈ), ಗುಜರಾತ್‌, 95* ರನ್‌

Story first published: Saturday, March 8, 2025, 21:15 [IST]
Other articles published on Mar 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+