Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ ಅಶ್ವಿನ್‌ನ ಏಕದಿನ ತಂಡಕ್ಕೆ ತನ್ನಿ: ಬ್ರಾಡ್ ಹಾಗ್ ಒತ್ತಾಯ

Get R Ashwin back in India ODI squad, says Brad Hogg

ಸಿಡ್ನಿ: ಭಾರತದ ಅನುಭವಿ ಸ್ಪಿನ್ನರ್ ಆರ್‌ ಅಶ್ವಿನ್ ಅವರನ್ನು ಟೀಮ್ ಇಂಡಿಯಾದ ಏಕದಿನ ತಂಡಕ್ಕೆ ತನ್ನಿ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ. ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡದಲ್ಲಿ ಅಶ್ವಿನ್‌ ಅವರನ್ನು ಹೆಸರಿಸಿರಲಿಲ್ಲ. ಹೀಗಾಗಿ ಹಾಗ್ ಈ ಹೇಳಿಕೆ ನೀಡಿದ್ದಾರೆ.

ಆರ್ ಅಶ್ವಿನ್ ಅವರನ್ನು ಭಾರತದ ಏಕದಿನ ತಂಡದಲ್ಲಿ ಹೆಸರಿಸಬೇಕೇ? ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿ ಟ್ವೀಟ್ ಮಾಡಿರುವ ಬ್ರಾಡ್ ಹಾಗ್, 'ಅದು ಒಳ್ಳೆಯ ಆಯ್ಕೆ ಎಂದು ನನಗನ್ನಿಸುತ್ತದೆ. ಆಗ ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಇನ್ನೂ ಹೆಚ್ಚು ಅಗ್ರೆಸಿವ್ ಆಗಿ ಆಡಬಹುದು. ಜೊತೆಗೆ ಅಶ್ವಿನ್ ಹೆಚ್ಚು ವಿಕೆಟ್ ಪಡೆಯುವ ಆಯ್ಕೆಯೂ ಇರುತ್ತದೆ. ಅವರನ್ನು ಮತ್ತೆ ತಂಡಕ್ಕೆ ತನ್ನಿ' ಎಂದು ಬರೆದುಕೊಂಡಿದ್ದಾರೆ.

ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಸದ್ಯ ಆತಿಥೇಯರ ವಿರುದ್ಧ ಟೆಸ್ಟ್‌ ಸರಣಿ ಆಡುತ್ತಿದೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3 ಪಂದ್ಯಗಳು ಮುಗಿದಿದ್ದು, ಭಾರತ 2-1ರಿಂದ ಸರಣಿ ಮುನ್ನಡೆಯಲ್ಲಿದೆ. ನಾಲ್ಕನೇ ಪಂದ್ಯ ಮಾರ್ಚ್ 4ರಿಂದ ಆರಂಭಗೊಳ್ಳಲಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ತಂಡಕ್ಕೆ ಬಲ ತುಂಬಿದ್ದರು. ಬ್ಯಾಟಿಂಗ್‌ನಲ್ಲೂ ಅಶ್ವಿನ್ ಸಾಕಷ್ಟು ಸುಧಾರಿಸಿರುವುದು ಕಾಣಿಸಿತ್ತು. ಹೀಗಾಗಿಯೇ ಅಶ್ವಿನ್ ಅವರನ್ನು ಭಾರತದ ನಿಯಮಿತ ಓವರ್‌ಗಳ ತಂಡದಲ್ಲೂ ಪರಿಗಣಿಸಬೇಕು. ಆಗ ತಂಡಕ್ಕೆ ಆಲ್ ರೌಂಡರ್‌ಗಳ ಸಂಖ್ಯೆ ಹೆಚ್ಚಿದಂತಾಗುತ್ತದೆ. ತಂಡ ಗೆಲ್ಲುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

Story first published: Monday, March 1, 2021, 19:57 [IST]
Other articles published on Mar 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+