Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2025: ಡಬ್ಲ್ಯೂಪಿಎಲ್ ಹಬ್ಬ ಶುರು; ಆರ್‌ಸಿಬಿ vs ಜಿಟಿ ಮುಖಾಮುಖಿ

ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯೂಪಿಎಲ್) ಮೂರನೇ ಸೀಸನ್ ಫೆಬ್ರವರಿ 14, ಶುಕ್ರವಾರದಿಂದ ಪ್ರಾರಂಭವಾಗಿದೆ. ಡಬ್ಲ್ಯೂಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಜೈಂಟ್ಸ್ (ಜಿಜಿ) ತಂಡಗಳು ಮುಖಾಮುಖಿಯಾಗಿವೆ. ಆಶ್ಲೀಗ್ ಗಾರ್ಡ್ನರ್ ನೇತೃತ್ವದ ಗುಜರಾತ್ ತಂಡವು ಹಾಲಿ ಚಾಂಪಿಯನ್ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿಗೆ ಕಠಿಣ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಗುಜರಾತ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ. ಆರ್‌ಸಿಬಿ ತನ್ನ ಇಬ್ಬರು ಪ್ರಮುಖ ಆಟಗಾರ್ತಿಯರಾದ ಸೋಫಿ ಡಿವೈನ್ ಮತ್ತು ಕೇಟ್ ಕ್ರಾಸ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದೆ.

GGTW vs RCBW opening match toss playing 11 Report

ಟಾಸ್ ಗೆದ್ದು ಮಾತನಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ, ಬರೋಡಾಗೆ ಮರಳಿರುವುದು ಒಳ್ಳೆಯದು. ನಾವು ಒಂದು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದೆವು. ಇದು ನಮ್ಮ ತವರು ಮೈದಾನದಂತೆ ಕಾಣುತ್ತಿದೆ. ತಂಡದಲ್ಲಿ ಕೆಲ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮಾನಸಿಕವಾಗಿ ನಾವು ಸಮರ್ಥ ರಾಗಿದ್ದೇವೆ. ಚೆನ್ನಾಗಿ ಆಡುತ್ತೇವೆ ಎಂಬ ಭರವಸೆ ಇದೆ ಎಂದಿದ್ದಾರೆ.

ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮತ್ತು ಗುಜರಾತ್​ ಜೈಂಟ್ಸ್​ ನಡುವೆ ಒಟ್ಟು 4 ಪಂದ್ಯಗಳು ನಡೆದಿವೆ. ಇದರಲ್ಲಿ ಉಭಯ ತಂಡಗಳು ತಲಾ 2 ಗೆಲುವು ಸಾಧಿಸಿ ಸಮಬಲದಲ್ಲಿವೆ.

ಉಭಯ ತಂಡಗಳ ಪ್ಲೇಯಿಂಗ್-11

ಗುಜರಾತ್ ಜೈಂಟ್ಸ್ ಮಹಿಳಾ ತಂಡ: ಲಾರಾ ವೋಲ್ವಾರ್ಡ್ಟ್ , ಬೆತ್ ಮೂನಿ (ವಿಕೆಟ್‌ಕೀಪರ್) , ದಯಾಲನ್ ಹೇಮಲತಾ , ಆಶ್ಲೀಗ್ ಗಾರ್ಡ್ನರ್ (ನಾಯಕಿ) , ಡಿಯಾಂಡ್ರಾ ಡಾಟಿನ್ , ಹರ್ಲೀನ್ ಡಿಯೋಲ್ , ಸಿಮ್ರಾನ್ ಶೇಖ್ , ತನುಜಾ ಕನ್ವರ್ , ಸಯಾಲಿ ಸತ್ಘರೆ , ಪ್ರಿಯಾ ಮಿಶ್ರಾ , ಕಾಶ್ವೀ ಗೌತಮ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ: ಸ್ಮೃತಿ ಮಂಧಾನ (ನಾಯಕಿ) , ಡೇನಿಯಲ್ ವ್ಯಾಟ್-ಹಾಡ್ಜ್ , ಎಲ್ಲಿಸ್ ಪೆರ್ರಿ , ರಾಘ್ವಿ ಬಿಸ್ಟ್ , ರಿಚಾ ಘೋಷ್ (ವಿಕೆಟ್‌ಕೀಪರ್) , ಕನಿಕಾ ಅಹುಜಾ , ಜಾರ್ಜಿಯಾ ವೇರ್ಹಮ್ , ಕಿಮ್ ಗಾರ್ತ್ , ಪ್ರೇಮಾ ರಾವತ್ , ಜೋಶಿತಾ ವಿಜೆ , ರೇಣುಕಾ ಠಾಕೂರ್ ಸಿಂಗ್.

Story first published: Friday, February 14, 2025, 19:09 [IST]
Other articles published on Feb 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+