For Quick Alerts
ALLOW NOTIFICATIONS  
For Daily Alerts
 

Shubman Gill: 90 ವರ್ಷದ ಹಳೆಯ ದಾಖಲೆಯ ಮೇಲೆ ಗಿಲ್ ಚಿತ್ತ

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್‌ ಗುರುವಾರ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೇ ವೇಳೆ ಭಾರತದ ನಾಯಕ ಶುಭಮನ್‌ ಗಿಲ್‌ ಮತ್ತೊಂದು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ದಾಖಲೆಯನ್ನು ಮುರಿಯಲು ಹಿಂದಿನ 90 ವರ್ಷದ ನಾಯಕರ ಕೈಯಲ್ಲಿ ಆಗಿರಲಿಲ್ಲ. ಈಗ ಈ ದಾಖಲೆಗೆ ಅಪಾಯ ಕಾದಿದೆ. ಹಾಗಿದ್ದರೆ ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮೇಲೆ, ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವ ಆಟಗಾರ ಶುಭಮನ್‌ ಗಿಲ್‌ ಅವರಿಗೆ ನೀಡಲಾಯಿತು. ಗಿಲ್‌, ತಮಗೆ ನೀಡಿದ ಜವಾಬ್ದಾರಿಯನ್ನು ವಿದೇಶದಲ್ಲಿ ಒಂದು ಹಂತಕ್ಕೆ ನಿಭಾಯಿಸಿದ್ದಾರೆ. ಇದು ಅವರ ನಾಯಕತ್ವದ ಮೊದಲ ಸರಣಿ ಆಗಿದ್ದರಿಂದ ಇವರಿಗೂ ಇನ್ನು ಸಾಕಷ್ಟು ಕಲಿಯಲು ಸಿಗಲಿದೆ. ಆದರೆ ಇವರ ಬ್ಯಾಟಿಂಗ್‌ನಲ್ಲಿ ಈ ಬಾರಿ ಬೇರೆಯದ್ದೇ ಹೊಳಪು ಕಂಡು ಬಂದಿದೆ.

Gill Eyes 90-Year-Old Bradman Record in Oval Test Most Runs by Captain in a Single Series

ಶುಭಮನ್‌ ಗಿಲ್‌ ಒಬ್ಬ ಬ್ಯಾಟರ್‌ ಆಗಿ ತಂಡದಲ್ಲಿದ್ದಾಗ ಸೇನಾ (ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ)ಗಳಲ್ಲಿ ಎಷ್ಟು ರನ್‌ ಬಾರಿಸಿದ್ದರೋ, ಅದಕ್ಕಿಂತ ಹೆಚ್ಚಿನ ರನ್‌ಗಳನ್ನು ಗಿಲ್‌ ಇದೇ ಒಂದು ಸರಣಿಯಲ್ಲಿ ಬಾರಿಸಿದ್ದಾರೆ. ನಾಯಕತ್ವ ಕೈಗೆ ಸಿಗುತ್ತಲೇ ಗಿಲ್‌ 2.0 ದರ್ಶನವಾಗಿದೆ. ಈಗಾಗಲೇ ಸರಣಿಯಲ್ಲಿ ಹಲವು ದಾಖಲೆಗಳನ್ನು ಅಳಿಸಿ ಹಾಕಿರುವ ಗಿಲ್‌, ಓವಲ್‌ನಲ್ಲಿ 90 ವರ್ಷದ ಹಳೆಯ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ದಾಖಲೆಯ ಮೇಲೆ ಗಿಲ್ ಚಿತ್ತ

ಶುಭಮನ್‌ ಗಿಲ್‌ ಈ ಸರಣಿಯಲ್ಲಿ ಆಡಿದ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ. ಹೆಡಿಂಗ್ಲಿ, ಬರ್ಮಿಂಗ್‌ಹ್ಯಾಮ್‌ನ ಎರಡೂ ಇನಿಂಗ್ಸ್‌ಗಳಲ್ಲಿ, ಮ್ಯಾಂಚೆಸ್ಟರ್‌ನಲ್ಲಿ ಶತಕ ಬಾರಿಸಿರುವ ಗಿಲ್‌ ರನ್‌ಗಳನ್ನು ಗುಡ್ಡೆ ಹಾಕಿ ಅಬ್ಬರಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಗಿಲ್ ಆಡಿದ 8 ಇನಿಂಗ್ಸ್‌ಗಳಲ್ಲಿ 90ರ ಸರಾಸರಿಯ್ಲಿ 722 ರನ್‌ ಸಿಡಿಸಿದ್ದಾರೆ. ಐದನೇ ಟೆಸ್ಟ್‌ ಪಂದ್ಯದಲ್ಲಿ ಇನ್ 11 ರನ್‌ ಬಾರಿಸಿದರೆ, ಭಾರತದ ಪರ ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Gill Eyes 90-Year-Old Bradman Record in Oval Test Most Runs by Captain in a Single Series

ಇನ್ನುಓವಲ್‌ನಲ್ಲಿ ನಡೆಯಲಿರುವ 2 ಇನಿಂಗ್ಸ್‌ಗಳಲ್ಲಿ ಗಿಲ್‌ 89 ರನ್‌ ಬಾರಿಸಿದ್ದೇ ಆದಲ್ಲಿ 90 ವರ್ಷದ ದಾಖಲೆ ಅಳಿಸಿ ಹಾಕಲಿದ್ದಾರೆ. ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ಅವರ ದಾಖಲೆ ಅಳಿಸಿ ಹಾಕಲಿದ್ದಾರೆ. ಇವರು 1937 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ 810 ರನ್ ಗಳಿಸಿದರು. ಈ ವೇಳೆ ಬ್ರಾಡ್ಮನ್‌ 3 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದರು. ಈಗ ಈ ದಾಖಲೆಗೆ ಅಪಾಯ ಕಾದಿದೆ.

Story first published: Wednesday, July 30, 2025, 13:49 [IST]
Other articles published on Jul 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+