For Quick Alerts
ALLOW NOTIFICATIONS  
For Daily Alerts
 

Shubman Gill: 95 ವರ್ಷಗಳ ಹಳೆಯ ದಾಖಲೆಯ ಮೇಲೆ ಶುಭಮನ್‌ ಕಣ್ಣು

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್‌ ಗಿಲ್‌ ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇವರು ಈಗಾಗಲೇ ಇಂಗ್ಲೆಂಡ್‌ನಲ್ಲಿ ಆಡಲಾದ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶತಕ ಹಾಗೂ ಬರ್ಮಿಂಗ್‌ಹ್ಯಾಮ್‌ನ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈಗ ಶುಭಮನ್‌ ಗಿಲ್‌ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಈ ಸರಣಿಗೂ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಹೀಗಾಗಿ ಈ ಯುವ ತಂಡವನ್ನು ಶುಭಮನ್‌ ಗಿಲ್ ಪಡೆ ಮುನ್ನಡೆಸಿದರು. ಈ ತಂಡದ ಮೇಲೆ ಹಲವು ಪ್ರಶ್ನೆಗಳು ಇದ್ದವು. ಈ ಪ್ರಶ್ನೆಗಳಿಗೆ ಗಿಲ್‌ ಪಡೆ ಮೈದಾನದಲ್ಲಿ ಭರ್ಜರಿಯಾಗಿ ಉತ್ತರ ನೀಡಿದ್ದಾರೆ.

Gill Eyes Bradman s Record After Sensational Start to England Tour

ಈಗಾಗಲೇ ಶುಭಮನ್‌ ಗಿಲ್‌ ಇಂಗ್ಲೆಂಡ್ ಪ್ರವಾಸದಲ್ಲಿ ಅಬ್ಬರ ನಡೆಸಿದ್ದಾರೆ. ಆಂಡರ್ಸನ್‌, ತೆಂಡೂಲ್ಕರ್ ಸರಣಿಯ ಐದು ಪಂದ್ಯಗಳ ಸರಣಿಯಲ್ಲಿ ಗಿಲ್‌ ಪಡೆ ಅಬ್ಬರಿಸಿದೆ. ಆಡಿದ ಮೊದಲೆರೆಡು ಪಂದ್ಯಗಳಲ್ಲಿ ಶುಭಮನ್‌ ಗಿಲ್ ತಮ್ಮ ಮೇಲೆ ಆಯ್ಕೆ ಸಮಿತಿ ಇಟ್ಟಿದ್ದ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಇವರು ನಾಯಕತ್ವ ಸಿಗುತ್ತಿದ್ದಂತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಇಂಗ್ಲೆಂಡ್ ಪ್ರವಾಸದಲ್ಲಿ ಆಡಲಾದ 2 ಟೆಸ್ಟ್‌ ಪಂದ್ಯಗಳ 4 ಇನಿಂಗ್ಸ್‌ಗಳಲ್ಲಿ 146ರ ಸರಾಸರಿಯಲ್ಲಿ 585 ರನ್‌ ಸಿಡಿಸಿದ್ದಾರೆ.

ಬ್ರಾಡ್ಮನ್ ದಾಖಲೆಯ ಮೇಲೆ ಕಣ್ಣು

ಈಗ ಶುಭಮನ್‌ ಗಿಲ್‌ ಅವರ ಶಿತ್ತ 95 ವರ್ಷಗಳ ಹಳೆಯ ದಾಖಲೆಯ ಮೇಲೆ ನೆಟ್ಟಿದೆ. ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡಾನ್ ಬ್ರಾಡ್ಮನ್‌ ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆ ಹೊಂದಿದ್ದಾರೆ. ಇವರು 1930ರಲ್ಲಿ ಇಂಗ್ಲೆಂಡ್ ವಿರುದ್ಧ 974 ರನ್‌ ಸಿಡಿಸಿದ್ದರು. ಈ ದಾಖಲೆಯ ಮೇಲೆ ಶುಭಮನ್‌ ಗಿಲ್‌ ಚಿತ್ತ ನೆಟ್ಟಿದ್ದಾರೆ. ಈ ಸರಣಿಯಲ್ಲಿ ಗಿಲ್‌ ಈ ದಾಖಲೆಯನ್ನು ಮುರಿಯುತ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಶುಭಮನ್‌ ಗಿಲ್‌ ಈ ಟೆಸ್ಟ್‌ ಸರಣಿಯಲ್ಲಿ ಇನ್ನು ಕನಿಷ್ಠ ಆರು ಇನಿಂಗ್ಸ್‌ಗಳನ್ನು ಆಡಬೇಕಿದೆ. ಈ ವೇಳೆ ಗಿಲ್ 389 ರನ್‌ಗಿಂತಲೂ ಹೆಚ್ಚಿನ ರನ್‌ ಬಾರಿಸುವಲ್ಲಿ ಸಫಲರಾದರೆ, ಡಾನ್‌ ಬ್ರಾಡ್ಮನ್‌ ಅವರ ಹಳೆಯ ದಾಖಲೆಯನ್ನು ಶುಭಮನ್‌ ಗಿಲ್‌ ಅಳಿಸಿ ಹಾಕಬಹುದಾಗಿದೆ.

Gill Eyes Bradman s Record After Sensational Start to England Tour

ಶುಭಮನ್‌ ಗಿಲ್‌ ಒಂದೇ ಟೆಸ್ಟ್‌ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ತಮ್ಮಲ್ಲೂ ಸೇನಾ ರಾಷ್ಟ್ರಗಳಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆ ಇದೆ ಎಂಬುದನ್ನು ಸಾಬೀತು ಪಡಿಸಿದರು. ಶುಭಮನ್‌ ಗಿಲ್ ಏಷ್ಯಾ ಖಂಡದ ಹೊರಗೆ ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಟೀಕೆಗೆ ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಗಿಲ್‌ ಭರ್ಜರಿಯಾಗಿ ಉತ್ತರ ನೀಡಿದ್ದಾರೆ.

Story first published: Sunday, July 6, 2025, 19:29 [IST]
Other articles published on Jul 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+