Shubman Gill: 5ನೇ ಟೆಸ್ಟ್‌ನಲ್ಲಿ ಗಿಲ್ 89 ಬಾರಿಸುತ್ತಿದ್ದಂತೆ ವಿಶ್ವ ದಾಖಲೆ
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಪ್ರಸಕ್ತ ಸರಣಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಪ್ರತಿ ಪಂದ್ಯದಲ್ಲೂ ರನ್ ಕಲೆ ಹಾಕಿ ಅಬ್ಬರಿಸುತ್ತಿರುವ ಶುಭಮನ್ ಗಿಲ್, ಹಲವು ದಾಖಲೆಗಳನ್ನು ಬರೆದಿದ್ದಾರೆ. ಈಗ ಶುಭಮನ್ ಅವರ ಕಣ್ಣು ಆಸ್ಟ್ರೇಲಿಯಾದ ಡಿಗ್ಗಜ ಬ್ಯಾಟರ್ ಡಾನ್ ಬ್ರಾಡ್ಮನ್ ಅವರ ದಾಖಲೆಯ ಮೇಲೆ ನೆಟ್ಟಿದೆ. ಆಂಡರ್ಸನ್, ತೆಂಡುಲ್ಕರ್ ಸರಣಿಯ ಐದನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಈ ಸಾಧನೆ ಮಾಡುತ್ತಾರಾ ಎಂಬ ಚರ್ಚೆಗಳು ಆರಂಭವಾಗಿವೆ.
ಶುಭಮನ್ ಗಿಲ್ ಅವರು ಟೀಮ್ ಇಂಡಿಯಾದ ನಾಯಕರಾಗಿ ಮುನ್ನಡೆಸುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಈ ಮೂಲಕ ಹಲವು ನಿರೀಕ್ಷೆಗಳನ್ನು ಹುಟ್ಟಿ ಹಾಕಿತ್ತು. ಶುಭಮನ್ ಗಿಲ್ ಸೇನಾ ರಾಷ್ಟ್ರಗಳಲ್ಲಿ ರನ್ ಕಲೆ ಹಾಕುವಲ್ಲಿ ಈ ಹಿಂದೆ ವಿಫಲರಾಗಿದ್ದರು. ಆದರೆ ಈ ಬಾರಿಯಂತೂ ಗಿಲ್ ಆಕರ್ಷಕ ಬ್ಯಾಟಿಂಗ್ ನಡೆಸುತ್ತಿದ್ದು ಅಬ್ಬರಿಸಿದ್ದಾರೆ. ಈ ಮೂಲಕ ತಂಡದ ಮ್ಯಾನೇಜ್ಮೆಂಟ್ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಿದ್ದಾರೆ. ಆದರೆ ನಾಯಕರಾಗಿ ಇವರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವಲ್ಲಿ ಕೊಂಚ ಹಿಂದೆ ಬಿದ್ದಿದ್ದಾರೆ. ಆದರೆ ಬ್ಯಾಟರ್ ಆಗಿ ಇವರು ಆರ್ಭಟಿಸಿದ್ದಾರೆ.

ಶುಭಮನ್ ಗಿಲ್ ಪ್ರಸಕ್ತ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಹಾಗೂ ಬರ್ಮಿಂಗ್ ಹ್ಯಾಮ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಇವರು, ಲಾರ್ಡ್ಸ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಮತ್ತೆ ಪುಟಿದೆದಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ನಾಯಕರಾಗಿ ಗಿಲ್ ಫಾರ್ಮ್ ಕಂಡು ಮಾಜಿ ಆಟಗಾರರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ದಾಖಲೆಯ ಸನಿಹ
ಶುಭಮನ್ ಗಿಲ್ ನಾಯಕನಾಗಿ ಪ್ರಸಕ್ತ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಬಹುದಾಗಿದೆ. ಇದಕ್ಕಾಗಿ ಇವರು ಐದನೇ ಟೆಸ್ಟ್ ಪಂದ್ಯದಲ್ಲಿ 89 ರನ್‌ಗಳನ್ನು ಗಳಿಸಿದ್ದೇ ಆದಲಿ, ಈ ದಾಖಲೆಗೆ ಇವರು ತಮ್ಮ ಹೆಸರನ್ನು ನಮೂದಿಸಬಹುದು. ಇದಕ್ಕಾಗಿ ಗಿಲ್‌ಗೆ ಇನ್ನು 2 ಇನಿಂಗ್ಸ್‌ಗಳು ಸಿಗುತ್ತಿವೆ. ಈ ಮೂಲಕ ಶುಭಮನ್ ಗಿಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಬಾರಿಸಿದ ನಾಯಕ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಡಾನ್ ಬ್ರಾಡ್ಮನ್ ದಾಖಲೆಯನ್ನು ಅಳಿಸಿ ಹಾಕಬಹುದಾಗಿದೆ.
ಒಂದು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ನಾಯಕರು
ಡಾನ್ ಬ್ರಾಡ್ಮನ್ - 810
ಗ್ರಹಾಂ ಗೂಚ್ - 752
ಸುನಿಲ್ ಗವಾಸ್ಕರ್ - 732
ಡೇವಿಡ್ ಗೋವರ್ - 732
ಗ್ಯಾರಿ ಸೋಬರ್ಸ್ - 722
ಶುಭಮನ್ ಗಿಲ್ - 722
ಭಾರತೀಯ ನಾಯಕನಾಗಿ ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ನಿರ್ಮಿಸಲು ಗಿಲ್‌ಗೆ ಇನ್ನು 11 ರನ್ ಅವಶ್ಯಕತೆ ಇದೆ. ಪ್ರಸ್ತುತ ಈ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ದಾಖಲಾಗಿದೆ.
ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಯಕರು
ಸುನಿಲ್ ಗವಾಸ್ಕರ್ - 732
ಶುಬ್ಮನ್ ಗಿಲ್ - 722
ವಿರಾಟ್ ಕೊಹ್ಲಿ - 655
ವಿರಾಟ್ ಕೊಹ್ಲಿ - 610
ವಿರಾಟ್ ಕೊಹ್ಲಿ - 593
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications