For Quick Alerts
ALLOW NOTIFICATIONS  
For Daily Alerts
 

Shubman Gill Century: ಬ್ರಾಡ್ಮನ್, ಸುನಿಲ್ ಗವಾಸ್ಕರ್, ದಾಖಲೆಯ ಸಮಕ್ಕೆ ನಿಂತ ಗಿಲ್‌

ಟೀಮ್ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶುಭಮನ್‌ ಗಿಲ್‌ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು ಕೊನೆಯ ದಿನದಾಟದಲ್ಲಿ ಶತಕ ಬಾರಿಸಲು 22 ರನ್‌ ಅವಶ್ಯಕತೆ ಇತ್ತು. ಟೆಸ್ಟ್‌ ಕ್ರಿಕೆಟ್‌ನ 9ನೇ ಶತಕ ಬಾರಿಸಿದ ಗಿಲ್‌ ಅಬ್ಬರಿಸಿದರು.

ಭಾನುವಾರ ದಿನದಾಟ ಆರಂಭವಾದಗ ಶುಭಮನ್‌ ಗಿಲ್ ಅಜೇಯ 78 ರನ್‌ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಗಿಲ್‌ ತಮ್ಮ ತಾಳ್ಮೆಯ ಪರೀಕ್ಷೆ ಮಾಡುತ್ತಿದ್ದ ಇಂಗ್ಲೆಂಡ್ ಬೌಲರ್‌ಗಳಿಗೆ ತಕ್ಕ ತಿರುಗೇಟು ನೀಡಿದರು. ಲಾರ್ಡ್ಸ್‌ ಟೆಸ್ಟ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ಗಿಲ್‌, ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ರನ್‌ ಕಲೆ ಹಾಕಿ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಈ ಮೂಲಕ ಪ್ರಸಕ್ತ ಟೆಸ್ಟ್‌ ಸರಣಿಯಲ್ಲಿ ನಾಲ್ಕನೇ ಶತಕ ಬಾರಿಸಿದರು.

Gill Joins Bradman Gavaskar with 4 Tons in a Series Nears Gavaskar s Batting Record

ಶುಭಮನ್‌ ಗಿಲ್‌ 238 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 103 ರನ್‌ ಬಾರಿಸಿ ಔಟ್ ಆದರು. ಈ ಮೂಲಕ ಒಂದೇ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್‌ ಕಲೆ ಹಾಕಿದ ಭಾರತದ ಎರಡನೇ ನಾಯಕ ಹಾಗೂ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರಿಗಿಂತಲೂ ಮೊದಲು ಸುನಿಲ್ ಗವಾಸ್ಕರ್‌ 1978ರ ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿ ನಾಯಕರಾಗಿ 732 ರನ್‌ ಸಿಡಿಸಿದ್ದರು. ಈಗ ಗಿಲ್‌ ನಾಲ್ಕು ಪಂದ್ಯಗಳಲ್ಲಿ 722 ರನ್‌ ಕಲೆ ಹಾಕಿದ್ದಾರೆ. ಮುಂದಿನ ಟೆಸ್ಟ್‌ ಪಂದ್ಯದಲ್ಲಿ ಗಿಲ್‌ 11 ರನ್‌ ಬಾರಿಸಿದ್ದೇ ಆದಲ್ಲಿ ಗವಾಸ್ಕರ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

ಒಂದೇ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್ಸ್‌

ಸುನಿಲ್‌ ಗವಾಸ್ಕರ್‌, 4 ಪಂದ್ಯ, 774 ರನ್‌
ಸುನಿಲ್‌ ಗವಾಸ್ಕರ್‌, 6 ಪಂದ್ಯ, 732 ರನ್‌
ಶುಭಮನ್‌ ಗಿಲ್‌, 4 ಪಂದ್ಯ, 722 ರನ್‌
ಯಶಸ್ವಿ ಜೈಸ್ವಾಲ್, 5 ಪಂದ್ಯ, 712 ರನ್‌
ವಿರಾಟ್ ಕೊಹ್ಲಿ, 4 ಪಂದ್ಯ, 692 ರನ್‌

Gill Joins Bradman Gavaskar with 4 Tons in a Series Nears Gavaskar s Batting Record

ಬ್ರಾಡ್ಮನ್ ದಾಖಲೆಯ ಸಮಕ್ಕೆ ನಿಂತ ಗಿಲ್‌

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ಶುಭಮನ್‌ ಗಿಲ್‌ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಮತ್ತೊಂದು ದಾಖಲೆ ಬರೆದರು. ನಾಯಕನಾಗಿ ಒಂದೇ ಸರಣಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್‌, ಟೀಮ್ ಇಂಡಿಯಾದ ಸುನಿಲ್‌ ಗವಾಸ್ಕರ್‌ ಅವರ ಸಮಕ್ಕೆ ನಿಂತರು. ಸದ್ಯ ಈ ಮೂವರು ಆಟಗಾರರು ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕು ಶತಕ ಬಾರಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ಇನ್ನು ಒಂದು ಟೆಸ್ಟ್‌ ಪಂದ್ಯವನ್ನು ಆಡಲಿದ್ದಾರೆ. ಆ ಟೆಸ್ಟ್‌ ಪಂದ್ಯದಲ್ಲೂ ಇದೇ ಫಾರ್ಮ್‌ ಮುಂದುವರೆಸಿದ್ದೇ ಆದಲ್ಲಿ, ದಿಗ್ಗಜರ ದಾಖಲೆಯನ್ನು ಮೀರಿ ನಿಲ್ಲಬಹುದು.

Story first published: Sunday, July 27, 2025, 18:25 [IST]
Other articles published on Jul 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+