ಭಾರತದ ಪರ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಮೂವರ ಬ್ಯಾಟರ್‌ಗಳಿಂದ 500+ ರನ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನವನ್ನು ನೀಡಿದೆ. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ಗಳು ಸೊಗಸಾದ ಆಟವನ್ನು ಆಡಿ ಇಂಗ್ಲೆಂಡ್ ಗೆಲುವಿಗೆ 374 ರನ್ ಗುರಿ ನೀಡಿದ್ದಾರೆ. ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಅಬ್ಬರಿಸಿದ್ದಾರೆ. ಅಲ್ಲದೆ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್, ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಈ ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಈ ಮೂಲಕ ಈ ಮೂವರು ಬ್ಯಾಟರ್‌ಗಳು ಈ ಸರಣಿಯಲ್ಲಿ 500 ಕ್ಕೂ ಹೆಚ್ಚು ರನ್ ಕಲೆ ಹಾಕಿ ಬೀಗಿದ್ದಾರೆ. ಈ ಮೂಲಕ ಈ ಮೂವರು ಆಟಗಾರರು ಇತಿಹಾಸದ ಪುಟ ಸೇರಿದ್ದಾರೆ. ಭಾರತದ ಪರ ಟೆಸ್ಟ್ ಸರಣಿಯೊಂದರಲ್ಲಿ 500 ಕ್ಕೂ ಹೆಚ್ಚು ರನ್ ಗಳನ್ನು ಮೂವರು ಬ್ಯಾಟರ್‌ಗಳು ಸಿಡಿಸಿರಲಿಲ್ಲ. ಈಗ ಗಿಲ್, ರಾಹುಲ್ ಮತ್ತು ಜಡೇಜಾ ಈ ಸಾಧನೆ ಮಾಡಿ ಬೀಗಿದ್ದಾರೆ.

ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಓವಲ್ ಟೆಸ್ಟ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡದೇ ಇರಬಹುದು. ಆದರೆ ಸರಣಿಯುದಕ್ಕೂ ರನ್‌ಗಳನ್ನು ಕಲೆ ಹಾಕಿ ಬೀಗಿದ್ದಾರೆ. ಹೆಡಿಂಗ್ಲಿ, ಬರ್ಮಿಂಗ್‌ಹ್ಯಾಮ್‌ನ ಎರಡೂ ಇನಿಂಗ್ಸ್ ಹಾಗೂ ಮ್ಯಾಂಚೆಸ್ಟರ್ ಪಂದ್ಯಗಳಲ್ಲಿ ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತದ ನಾಯಕ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಗಿಲ್ 5 ಪಂದ್ಯಗಳಲ್ಲಿ ಅವರು ಒಟ್ಟು 754 ರನ್ ಸಿಡಿಸಿದ್ದಾರೆ.
ರಾಹುಲ್ ತಾಳ್ಮೆಯ ಬ್ಯಾಟಿಂಗ್
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಆರಂಭಿಕ ಸ್ಥಾನವನ್ನು ಖಚಿತ ಪಡಿಸಿಕೊಂಡಿರುವ ಕೆಎಲ್ ರಾಹುಲ್ ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಒಬ್ಬ ನುರಿತ ಟೆಸ್ಟ್ ಬ್ಯಾಟರ್ ರೀತಿ ಬ್ಯಾಟ್ ಮಾಡಿರುವ ಕನ್ನಡಿಗ ರಾಹುಲ್ ಹಲವು ಪಂದ್ಯಗಳಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಇವರು ವಿದೇಶಿ ನೆಲದಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಹುಲ್ ಈ ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಒಟ್ಟು 532 ರನ್ ಗಳಿಸಿದ್ದು, ಇದರಲ್ಲಿ 2 ಶತಕ ಸೇರಿವೆ.

ಸಿಕ್ಕ ಅವಕಾಶವನ್ನು ಬಳಸಿಕೊಂಡ ಜಡ್ಡು
ಟೀಮ್ ಇಂಡಿಯಾದಲ್ಲಿ ಸದ್ಯ ಯುವ ಆಟಗಾರರೇ ತುಂಬಿದ್ದು, ರವೀಂದ್ರ ಜಡೇಜಾ ಅವರಿಗೆ ಈ ಪ್ರವಾಸ ಕೊನೆಯದ್ದು ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಸಿಕ್ಕ ಅವಕಾಶವನ್ನು ಜಡೇಜಾ ಎರಡೂ ಕೈಗಳಿಂದ ಬಳಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಇವರು ತಂಡಕ್ಕೆ ಆಧಾರವಾದರು. ಇವರು ಒಟ್ಟು 5 ಪಂದ್ಯಗಳಲ್ಲಿ ಒಟ್ಟು 516 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿ ಅಬ್ಬರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications