For Quick Alerts
ALLOW NOTIFICATIONS  
For Daily Alerts
 

Shubman Gill: ಗಿಲ್‌ ಮುಡಿಗೆ ಐಸಿಸಿ ತಿಂಗಳ ಆಟಗಾರ ಗರಿ

ಟೀಮ್ ಇಂಡಿಯಾ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್ ಅವರಿಗೆ, ಅವರ ಪ್ರದರ್ಶನಕ್ಕೆ ಫಲ ಸಿಕ್ಕಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಿಲ್‌, ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜುಲೈನಲ್ಲಿ ಐಸಿಸಿ ನೀಡುವ ತಿಂಗಳು ಆಟಗಾರ ಪ್ರಶಸ್ತಿ ಟೀಮ್ ಇಂಡಿಯಾ ನೂತನ ನಾಯಕನ ಮುಡಿಗೆ ಸಂದಿದೆ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ 2-2ರಿಂದ ಸರಣಿಯನ್ನು ಸಮಬಲ ಸಾಧಿಸಿತ್ತು.

ಐಸಿಸಿ ಜುಲೈ ತಿಂಗಳ ಆಟಗಾರ ಪ್ರಶಸ್ತಿಯನ್ನು ಶುಭಮನ್‌ ಗಿಲ್‌ ಇಬ್ಬರು ಆಟಗಾರರು ಹಿಂದಿಕ್ಕಿ ಪಡೆದಿದ್ದಾರೆ. ಇವರು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ ಹಾಗೂ ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ ಅವರಿಂದ ಕಠಿಣ ಸ್ಪರ್ಧೆಯನ್ನು ಎದುರಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದರು. ಕಳೆದ ತಿಂಗಳು ಗಿಲ್‌ ಅಮೋಘ ಫಾರ್ಮ್‌ನಲ್ಲಿದ್ದರು. ಇವರು 94.50 ರ ಸರಾಸರಿಯಲ್ಲಿ 567 ರನ್ ಕಲೆ ಹಾಕಿದ್ದರು. ಇದರಲ್ಲಿ ಒಂದು ದ್ವಿಶತಕವೂ ಸೇರಿದೆ.

Gill Shines Bright India s Test Skipper Scoops ICC Player of the Month Award

ಈ ಪ್ರಶಸ್ತಿ ಬಂದಿದಕ್ಕೆ ಶುಭಮನ್‌ ಗಿಲ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಜುಲೈ ತಿಂಗಳ ಆಟಗಾರ ಪ್ರಶಸ್ತಿ ಲಭಿಸಿರುವುದು ಸಂತೋಷ ನೀಡಿದೆ. ನಾಯಕನಾಗಿ ಆಡಿದ ಮೊದಲ ಟೆಸ್ಟ್‌ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ, ಪ್ರಶಸ್ತಿ ಪಡೆದಿದ್ದೇನೆ. ಇಂಗ್ಲೆಂಡ್ ವಿರುದ್ಧ ಬರ್ಮಿಗ್‌ಹ್ಯಾಮ್‌ನಲ್ಲಿ ಬಾರಿಸಿದ ದ್ವಿಶತಕವು ನನ್ನ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿರುತ್ತದೆ. ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ತೀರ್ಪುಗಾರರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ನಾಲ್ಕನೇ ಐಸಿಸಿ ಪ್ರಶಸ್ತಿ

25 ವರ್ಷದ ಯುವ ಆಟಗಾರ ಶುಭಮನ್‌ ಗಿಲ್ ಅವರಿಗೆ ಇದು ನಾಲ್ಕನೇ ಐಸಿಸಿ ತಿಂಗಳ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು ಇವರು ಫೆಬ್ರವರಿ 2025, ಜನವರಿ 2023, ಸೆಪ್ಟೆಂಬರ್ 2023 ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಈ ಪ್ರಶಸ್ತಿಯನ್ನು ನಾಲ್ಕು ಬಾರಿ ಪಡೆದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.

Gill Shines Bright India s Test Skipper Scoops ICC Player of the Month Award

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶುಭಮನ್‌ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಇವರು ಆಡಿದ 5 ಟೆಸ್ಟ್‌ ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 754 ರನ್‌ ಸಿಡಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕ ಸೇರಿದಂತೆ ನಾಲ್ಕು ಶತಕಗಳು ಸೇರಿವೆ. ಇವರು ಈ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದರಲ್ಲಿ ಭಾರತದ ಪರ ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Story first published: Tuesday, August 12, 2025, 19:29 [IST]
Other articles published on Aug 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+