Shubman Gill: 46 ವರ್ಷದ ಹಳೆದ ದಾಖಲೆ ಅಳಿಸಿದ ಗಿಲ್: ಇಂಗ್ಲೆಂಡ್‌ನಲ್ಲಿ ಶುಭಮನ್ ನಿರ್ಮಿಸಿದ 5 ರೆಕಾರ್ಡ್‌ಗಳ ಪಟ್ಟಿ
ಟೀಮ್ ಇಂಡಿಯಾದ ನೂತನ ನಾಯಕ ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸೇನಾ ರಾಷ್ಟ್ರಗಳಲ್ಲಿ ಇದ್ದ ತಮ್ಮ ಬ್ಯಾಟಿಂಗ್ ಕ್ಷಮತೆಯ ಮೇಲೆ ಇದ್ದ ಪ್ರಶ್ನೆಗಳಿಗೆ ಎಡ್ಜ್‌ಬಸ್ಟನ್‌ನಲ್ಲಿ ಉತ್ತರ ನೀಡಿದ್ದಾರೆ. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ 25 ವರ್ಷದ ಭರವಸೆಯ ಆಟಗಾರ, ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇವರು ಇಂಗ್ಲೆಂಡ್ ನೆಲದಲ್ಲಿ ನಿರ್ಮಿಸಿದ ದಾಖಲೆಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಶುಭಮನ್ ಗಿಲ್ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಒಂದು ಹೇಳಿಕೆಯನ್ನು ನೀಡಿದ್ದರು. ನಾನು ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸ ಬೇಕು ಎಂದು ತಿಳಿಸಿದ್ದರು. ಈ ಹೇಳಿಕೆಗೆ ಪೂರಕವಾಗಿ ಗಿಲ್ ಬ್ಯಾಟಿಂಗ್ ನಡೆಸಿದ್ದಾರೆ. ಲೀಡ್ಸ್ ಅಂಗಳದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದ ಶುಭಮನ್ ಗಿಲ್, ಎರಡನೇ ಟೆಸ್ಟ್ ಪಂದ್ಯದಲ್ಲೂ ಇದೇ ಫಾರ್ಮ್ ಮುಂದುವರೆಸಿದ್ದಾರೆ. ಈ ಮೂಲಕ ಶುಭಮನ್ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ.

ಗುರುವಾರ ಅಜೇಯ 114 ರನ್‌ಗಳಿಂದ ಆಟ ಮುಂದುವರಿಸಿದ ಶುಭಮನ್ ಗಿಲ್, ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 387 ಎಸೆತಗಳಲ್ಲಿ 30 ಬೌಂಡರಿ, 3 ಸಿಕ್ಸರ್ ಸಹಾಯದಿಂದ 269 ರನ್ ಸಿಡಿಸಿದರು. ಇವರ ಮ್ಯಾರಥಾನ್ ಇನಿಂಗ್ಸ್ ಸಹಾಯದಿಂದ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ 575ಕ್ಕೂ ಹೆಚ್ಚು ರನ್ ಕಲೆ ಹಾಕಲು ಕಾರಣವಾಯಿತು.
46 ವರ್ಷದ ಹಳೆದ ದಾಖಲೆ ಉಡೀಸ್
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 24ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಟೀಮ್ ಇಂಡಿಯಾದ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. ಇವರು 1979ರಲ್ಲಿ 221 ರನ್ ಬಾರಿಸಿದ್ದರು.
ಇಂಗ್ಲೆಂಡ್‌ನಲ್ಲಿ ದ್ವಿಶತಕ
ಇಂಗ್ಲೆಂಡ್ ನೆಲದಲ್ಲಿ ದ್ವಿಶತಕ ಬಾರಿಸಿದ ಮೊದಲ ಏಷ್ಯಾದ ಬ್ಯಾಟರ್ ಎಂಬ ಹಿರಿಮೆ ಸಹ ಇವರದ್ದಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್‌ನಲ್ಲಿ ಸಚಿನ್ ತೆಂಡೂಲ್ಕರ್ ಬಾರಿಸಿದ 193 ರನ್ ಗರಿಷ್ಠವಾಗಿತ್ತು.
ಏಷ್ಯಾದ ಹೊರಗೆ ಅತಿ ದೊಡ್ಡ ಇನಿಂಗ್ಸ್ ಕಟ್ಟಿದ ದಾಖಲೆ ಸಹ ಇವರದ್ದಾಗಿದೆ. ಇವರು ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಅಳಿಸಿದರು. ಸಚಿನ್ ಸಿಡ್ನಿಯಲ್ಲಿ 241 ರನ್ ಬಾರಿಸಿದ್ದರು.
250+ ರನ್ ಬಾರಿಸಿದ ಭಾರತದ 6ನೇ ಬ್ಯಾಟರ್
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 250ಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ಆರನೇ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಇದಕ್ಕೂ ಮೊದಲು, ವೀರೇಂದ್ರ ಸೆಹ್ವಾಗ್ ಒಟ್ಟು 4 ಬಾರಿ, ಆದರೆ ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಕರುಣ್ ನಾಯರ್ ಮತ್ತು ವಿರಾಟ್ ಕೊಹ್ಲಿ ತಲಾ ಒಮ್ಮೆ ಈ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications