Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shubman Gill: 21 ರನ್‌ ಬಾರಿಸಿ 59 ವರ್ಷದ ಹಳೆಯ ದಾಖಲೆ ಅಳಿಸಿದ ಶುಭಮನ್‌ ಗಿಲ್‌

ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್‌ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಟೀಮ್ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಇವರು ಆಂಡರ್ಸನ್‌ ತೆಂಡುಲ್ಕರ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಭಾರತ ತಂಡದ ನಾಯಕತ್ವ ಸಿಗುತ್ತಲೇ ಗಿಲ್‌ ಅಪ್‌ ಡೇಟ್ ವರ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಈ ಸರಣಿಯಲ್ಲಿ ರನ್‌ ಮಹಲ್‌ ಕಟ್ಟಿದ್ದಾರೆ. ಈ ಮೂಲಕ ಅನುಭವಿಗಳ ಅನುಪಸ್ಥಿತಿ ಕಾಡದಂತೆ ಮಾಡಿದ್ದಾರೆ.

ಓವಲ್‌ನಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ವಾತಾವರಣ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಇಂಗ್ಲೆಂಡ್ ನಾಯಕ ಓಲಿ ಪೋಪ್‌ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ ಕನ್ನಡಿಗ ಕೆಎಲ್ ರಾಹುಲ್‌ ಔಟ್ ಆಗುತ್ತಿದ್ದಂತೆ ಮೈದಾನಕ್ಕಿಳಿದ ಶುಭಮನ್‌ ಗಿಲ್‌ ನಿರೀಕ್ಷೆ ಹೆಚ್ಚಿಸಿದ್ದರು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ, ಗಿಲ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು.

Gill s Record-Breaking Series Surpasses Legends in Anderson-Tendulkar Test Saga

ಶುಭಮನ್‌ ಗಿಲ್‌ ಈ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಗಿಲ್ ಈ ಪಂದ್ಯದಲ್ಲಿ ಒಂದು ರನ್ ಪಡೆಯುವ ಮೂಲಕ ಸೆನಾ ದೇಶಗಳಲ್ಲಿ ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಈ ಮೊದಲು ಈ ದಾಖಲೆ ಗ್ಯಾರಿ ಸೋಬರ್ಸ್ (722) ಹೆಸರಿನಲ್ಲಿತ್ತು. ಈ ವೇಳೆ 54 ಎಸೆತಗಳನ್ನು ಎದುರಿಸಿ 3 ಬೌಂಡರಿ ನೆರವಿನಿಂದ 21 ರನ್‌ ಬಾರಿಸಿದರು. ಈ ವೇಳೆ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು. ಗಿಲ್‌ 21 ರನ್‌ಗಳ ಚಿಕ್ಕ ಇನಿಂಗ್ಸ್ ಕಟ್ಟಿದರೂ ದೊಡ್ಡ ದಾಖಲೆಯನ್ನು ಬರೆದರು. ಶುಭಮನ್‌ ಗಿಲ್ ಈ ಸರಣಿಯಲ್ಲಿ ಆಡಿದ 5 ಟೆಸ್ಟ್‌ ಪಂದ್ಯಗಳ 9 ಇನಿಂಗ್ಸ್‌ನಲ್ಲಿ 82.55ರ ಸರಾಸರಿಯಲ್ಲಿ 743 ರನ್‌ ಸಿಡಿಸಿದ್ದಾರೆ. ಈ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

ಗವಾಸ್ಕರ್ ದಾಖಲೆ ಅಳಿಸಿದ ಗಿಲ್

ಶುಭಮನ್‌ ಗಿಲ್‌ ಈ ಚಿಕ್ಕ ಇನಿಂಗ್ಸ್‌ ಮೂಲಕ 978-79ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕರಾಗಿ ಗವಾಸ್ಕರ್ ಮಾಡಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ದಿಗ್ಗಜ ಆಟಗಾರ ಗವಾಸ್ಕರ್‌ ಆಡಿದ 6 ಪಂದ್ಯಗಳಲ್ಲಿ 743 ರನ್‌ ಸಿಡಿಸಿದ್ದರು. ಈ ದಾಖಲೆಯನ್ನು ಗಿಲ್ ಅಳಿಸಿ ಹಾಕಿದರು. ಗಿಲ್‌ 5 ಪಂದ್ಯಗಳಲ್ಲಿ 743 ರನ್‌ ಕಲೆ ಹಾಕಿ ಅಬ್ಬರಿಸಿದೆ. ಈ ಮೂಲಕ ನಾಯಕರಾಗಿ ಅತಿ ಹೆಚ್ಚು ಕಲೆ ಹಾಕಿದ ವಿಶ್ವದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Gill s Record-Breaking Series Surpasses Legends in Anderson-Tendulkar Test Saga


ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ನಾಯಕರು

ಡಾನ್‌ ಬ್ರಾಡ್ಮನ್‌, ಆಸ್ಟ್ರೇಲಿಯಾ, 5 ಪಂದ್ಯ, 810 ರನ್‌
ಗ್ರಹಾಂ ಗೂಚ್, ಇಂಗ್ಲೆಂಡ್‌, 3 ಪಂದ್ಯ, 752 ರನ್‌
ಶುಭಮನ್‌ ಗಿಲ್‌, ಭಾರತ, 5 ಪಂದ್ಯ, 743 ರನ್‌
ಸುನಿಲ್ ಗವಾಸ್ಕರ್‌, 6 ಪಂದ್ಯ, 732 ರನ್‌
ಡೇವಿಡ್ ಗೋವರ್, ಇಂಗ್ಲೆಂಡ್‌, 6 ಪಂದ್ಯ, 732 ಪಂದ್ಯ

Story first published: Thursday, July 31, 2025, 23:10 [IST]
Other articles published on Jul 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+