ಭಾರತ ಹಾಗೂ ಇಂಗ್ಲೆಂಡ್ ನಡುಣವ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಅನುಭವಿಗಳ ಅನುಪಸ್ಥಿತಿ ಕಾಡುತ್ತಿದೆ. ಆದರೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವೇಳೆ ಅನುಭವಿಗಳು ತಂಡದಲ್ಲಿ ಇಲ್ಲ ಎಂಬುದನ್ನು ಮರೆಸುವಂತೆ, ಯುವ ಆಟಗಾರರು ಆಟವಾಡಿದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿಯ ಶಿಷ್ಯ ಶುಭಮನ್ ಗಿಲ್, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. ಅಲ್ಲದೆ ಅವರ ಅನುಪಸ್ಥಿತಿ ಕಾಡದಂತೆ ಆಡಿದ್ದಾರೆ.
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಮೂರನೇ ದಿನದ ಕೊನೆಯಲ್ಲಿ ವಿರಾಟ್ ಕೊಹ್ಲಿ ಅವರ ಅಗ್ರೇಷನ್ ಮೈದಾನದಲ್ಲಿ ತೋರಿಸಿದರು. ಇವರ ಈ ಆಟಿಟ್ಯೂಡ್ ಕಂಡು ಅಭಿಮಾನಿಗಳು ವಿರಾಟ್ ಕೊಹ್ಲಿ ನೆನಪು ಮಾಡಿಕೊಂಡರು. ವಿರಾಟ್ ಮೈದಾನದಲ್ಲಿ ತನ್ನ ಆಕ್ರಮಣಕಾರಿ ಮನೋಭಾವದಿಂದಲೇ ಹೆಸರುವಾಸಿಯಾದ ಆಟಗಾರ. ಈ ಪಂದ್ಯದ ಕೊನೆಯ ಸೆಷನ್‌ನಲ್ಲಿ ಗಿಲ್ ಫುಲ್ ಅಗ್ರೇಸಿವ್ ಮೂಡನಲ್ಲಿ ಕಾಣಿಸಿಕೊಂಡರು.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ಟೀಮ್ ಇಂಡಿಯಾ 387 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಎರಡೂ ತಂಡಗಳು ಸಮನಾದ ರನ್ ಗಳಿಸಿದ ದಾಖಲೆಯನ್ನು ಬರೆದವು. ಈ ವೇಳೆ ಇನ್ನು ಸಮಯ ಇದ್ದಿದ್ದರಿಂದ ಇಂಗ್ಲೆಂಡ್ ಬ್ಯಾಟಿಂಗ್ ಮಾಡಬಹುದಿತ್ತು. ಎಲ್ಲವೂ ಲೆಕ್ಕಾಚಾರದ ಪ್ರಕಾರ ನಡೆದಿದ್ದರೆ, ಇಂಗ್ಲೆಂಡ್ ಎರಡು ಓವರ್ ಬ್ಯಾಟ್ ಮಾಡಬೇಕಿತ್ತು. ಆದರೆ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಇದಕ್ಕೆ ಆಸ್ಪದವನ್ನು ನೀಡಲಿಲ್ಲ.
ಇಂಗ್ಲೆಂಡ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಮುಂದಾದರು. ಇವರ ಮಾರಕ ದಾಳಿಗೆ ಇಂಗ್ಲೆಂಡ್ ಬ್ಯಾಟರ್‌ಗಳು ಸಹ ಕಕ್ಕಾಬಿಕ್ಕಿಯಾಗಿದ್ದರು. ಆಫ್ ಸ್ಟಂಪ್ ಹೊರಗೆ ಬಿದ್ದ ಎಸೆತವನ್ನು ಜ್ಯಾಕ್ ಕ್ರೌಲಿ ಬಿಟ್ಟರು. ಇದೇ ಓವರ್‌ನ ಎರಡನೇ ಎಸೆತದಲ್ಲಿ ಕ್ರೌಲಿ ಫ್ಲಿಕ್ ಶಾಟ್ ಮಾಡಿ 2 ರನ್ ಬಾರಿಸಿದರು. ನಂತರದಲ್ಲಿ ಬುಮ್ರಾ ಅವರ ಎಸೆತವನ್ನು ಎದುರಿಸಲು ಮುಂದಾಗಿ ಕೈಗೆ ಗಾಯ ಮಾಡಿಕೊಂಡರು.
ಇದಾದ ಬಳಿಕ ಕ್ರೌಲಿ ಕೈಗವಸ ಬಿಚ್ಚಿ, ಕೈ ಅಲುಗಾಡಿಸುತ್ತಾ ಮುಂದೆ ಸಾಗಿದರು. ಕ್ರೌಲಿ ಹೀಗೆ ಮಾಡುವುದನ್ನು ಕಂಡು ಟೀಮ್ ಇಂಡಿಯಾ ಆಟಗಾರರು ಬೇಸರಗೊಂಡರು. ಅಲ್ಲದೆ ಇದು ಸಮಯ ವ್ಯರ್ಥಮಾಡುತ್ತಿರುವುದಾಗಿ ದೂರಿದರು. ಇದೇ ವೇಳೆ ಫಿಸಿಯೋ ಬಂದು ಅವರ ತಪಾಸಣೆ ನಡೆಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಶುಭಮನ್ ಗಿಲ್ ವಾಗ್ವಾದ ನಡೆಸಿದರು. ಇದನ್ನು ನೋಡಿದ ಫ್ಯಾನ್ಸ್ ಕೊಹ್ಲಿ ನೆನಪು ಮಾಡಿಕೊಂಡರು.