Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಿಟ್‌ಮ್ಯಾನ್ ರೋಹಿತ್ ಶರ್ಮಾ ಜೊತೆ 'ಗ್ಲೆನ್‌ಮಾರ್ಕ್‌ ಫಾರ್ಮಾ' ಒಪ್ಪಂದ

Glenmark Pharma signs Team India Batsman Rohit Sharma as brand ambassador

ನವದೆಹಲಿ: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಜೊತೆಗೆ ಔಷಧಿಯ ದೈತ್ಯ ಕಂಪನಿ 'ಗ್ಲೆನ್ಮಾರ್ಕ್ ಫಾರ್ಮಾ' ಒಪ್ಪಂದ ಮಾಡಿಕೊಂಡಿದೆ. ಗ್ಲೆನ್ಮಾರ್ಕ್ ಫಾರ್ಮಾದ ಉತ್ಪನ್ನ ಕ್ಯಾಂಡಿಡ್ ಪೌಡರ್‌ ಗೆ ಪ್ರಚಾರ ರಾಯಭಾರಿಯಾಗಿ ರೋಹಿತ್ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿ ಶುಕ್ರವಾರ (ಮಾರ್ಚ್ 5) ಹೇಳಿಕೊಂಡಿದೆ.

ಕಂಪನಿ ಜೊತೆ ರೋಹಿತ್ ಶರ್ಮಾ ಒಪ್ಪಂದ ಮಾಡಿಕೊಂಡಿರುವುದನ್ನು ಖಾತರಿಪಡಿಸಿರುವ ಗ್ಲೆನ್ಮಾರ್ಕ್ ಫಾರ್ಮಾ, 'ಕಂಪನಿಯ ಗ್ರಾಹಕ ಆರೈಕೆ ವಿಭಾಗದ ಪರಂಪರೆಯ ಬ್ರಾಂಡ್ ಗ್ಲೆನ್‌ಮಾರ್ಕ್‌ನ ಕ್ಯಾಂಡಿಡ್ ಪೌಡರ್ ಅನ್ನು ಪ್ರತಿನಿಧಿಸಲು ರೋಹಿತ್ ಅಧಿಕೃತವಾಗಿ ಸಹಿ ಹಾಕಿದ್ದಾರೆ,' ಎಂದಿದೆ.

ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49841

ಶರ್ಮಾ 360 ಡಿಗ್ರಿ ಸಂವಹನದ ಭಾಗವಾಗಿ ಬ್ರಾಂಡ್‌ನ ಅಧಿಕೃತ ಮುಖವಾಗಲಿದ್ದಾರೆ. ಕ್ಯಾಂಡಿಡ್ ಪೌಡರ್ ಬ್ರಾಂಡ್ ತನ್ನ ವಿಭಾಗದಲ್ಲಿ ಮಾರುಕಟ್ಟೆಯ ಮುಂಚೂಣಿಯಲ್ಲಿದೆ, ಔಷಧೀಯ ಪುಡಿ ವಿಭಾಗದಲ್ಲಿ ಶೇ 64 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದು ಗ್ಲೆನ್ಮಾರ್ಕ್ ಮಾಹಿತಿ ನೀಡಿದೆ. ಐಪಿಎಲ್‌ನಲ್ಲಿ ರೋಹಿತ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದಾರೆ.

ಸದ್ಯ ರೋಹಿತ್, ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಅಹ್ಮದಾಬಾದ್‌ನಲ್ಲಿ ಇತ್ತಂಡಗಳ ಮಧ್ಯೆ ನಾಲ್ಕನೇ ಮತ್ತು ಕೊನೆಯ ಟೆಸ್ಟ್‌ ಪಂದ್ಯ ನಡೆಯುತ್ತಿದ್ದು, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 44 ಓವರ್‌ ಮುಕ್ತಾಯದ ವೇಳೆಗೆ ರೋಹಿತ್ 38 ರನ್ ಬಾರಿಸಿ ಆಡುತ್ತಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 205 ರನ್ ಬಾರಿಸಿತ್ತು.

Story first published: Friday, March 5, 2021, 12:51 [IST]
Other articles published on Mar 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+