Glenn Maxwell: ರೋಹಿತ್ ಶರ್ಮಾ ಸಿಕ್ಸರ್ ದಾಖಲೆ ಮುರಿದ ಮ್ಯಾಕ್ಸ್‌ವೆಲ್
ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರ ಜೋರಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಬಿಬಿಎಲ್‌ನ 40ನೇ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಪರಿಣಾಮ ಹೋಬರ್ಟ್ ಹರಿಕೇನ್ಸ್ ತಂಡವನ್ನು ಮೆಲ್ಬೋರ್ನ್ ಸ್ಟಾರ್ಸ್ 40 ರನ್‌ಗಳಿಂದ ಸೋಲಿಸಿತು. ಮ್ಯಾಕ್ಸ್‌ವೆಲ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 76 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಅವರು ತಮ್ಮ ತಂಡವನ್ನು ನಾಕೌಟ್ ಸುತ್ತಿಗೆ ಕರೆದೊಯ್ದರು. ಸಿಡ್ನಿ ಥಂಡರ್ ಜೊತೆ ಮೆಲ್ಬೋರ್ನ್ ಸ್ಟಾರ್ಸ್ ನಾಕೌಟ್ ಪಂದ್ಯವನ್ನು ಆಡಲಿದೆ.
ಬಿಬಿಎಲ್ 40ನೇ ಪಂದ್ಯದ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ವಿಶೇಷ ದಾಖಲೆಯನ್ನು ಮುರಿದರು. ಮ್ಯಾಕ್ಸ್‌ವೆಲ್ ತಮ್ಮ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಮ್ಯಾಕ್ಸ್‌ವೆಲ್ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದರವರ ದಾಖಲೆ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು.

ಮ್ಯಾಕ್ಸ್‌ವೆಲ್ ಇದುವರೆಗೆ 458 ಪಂದ್ಯಗಳಲ್ಲಿ 528 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 448 ಪಂದ್ಯಗಳಲ್ಲಿ 435 ಇನ್ನಿಂಗ್ಸ್‌ಗಳಲ್ಲಿ 525 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಸಾದನೆಯ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್‌ಗಿದ್ದಾರೆ. ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 1056 ಸಿಕ್ಸರ್‌ಗಳು,
ಕೀರಾನ್ ಪೊಲಾರ್ಡ್ 691 ಪಂದ್ಯಗಳಲ್ಲಿ 901 ಸಿಕ್ಸರ್‌ಗಳು ಹಾಗು ಆಂಡ್ರೆ ರಸೆಲ್ 531 ಪಂದ್ಯಗಳಲ್ಲಿ 729 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಪ್ರಸ್ತಕ ಬಿಬಿಎಲ್ ಟೂನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಮ್ಯಾಕ್ಸ್‌ವೆಲ್ 8 ಪಂದ್ಯಗಳಲ್ಲಿ 59.40 ಸರಾಸರಿಯಲ್ಲಿ 297 ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮ್ಯಾಕ್ಸಿ ತಮ್ಮದಾಗಿಸಿಕೊಂಡಿದ್ದಾರೆ. ಇದು ಅವರು ಅದ್ಭುತ ಫಾರ್ಮ್‌ನಲ್ಲಿರುವುದನ್ನು ತೋರಿಸುತ್ತಿದೆ.
ಪಂಜಾಬ್ ಕಿಂಗ್ಸ್‌ಗೆ ಸಂತಸ
ಬಿಬಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಫಾರ್ಮ್ ಪಂಜಾಬ್ ಕಿಂಗ್ಸ್‌ಗೆ ಖಂಡಿತವಾಗಿಯೂ ಒಳ್ಳೆಯ ಸುದ್ದಿಯಾಗಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮ್ಯಾಕ್ಸಿ ಅವರನ್ನು 4 ಕೋಟಿ ರೂ.ಗೆ ಬಿಡ್ ಮಾಡಿದೆ. ಇದಕ್ಕೂ ಮುನ್ನ ಕಳೆದ ಮೂರು ಸೀಸನ್‌ಗಳಲ್ಲಿ ಮ್ಯಾಕ್ಸಿ ಆರ್‌ಸಿಬಿ ಪರ ಮಿಂಚಿದ್ದರು. ಹಲವು ಪ್ರಮುಖ ಪಂದ್ಯಗಳಲ್ಲಿ ಮ್ಯಾಕ್ಸಿ ಅಬ್ಬರಿಸಿದ್ದರು. ಇದೀಗ ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಮ್ಯಾಕ್ಸ್‌ವೆಲ್ ತಮ್ಮ ಹಳೆಯ ಪಂಜಾಬ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ.
ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ತಂಡಕ್ಕೆ ನೆರವಾಗಬೇಕಿದ್ದ ಸಂದರ್ಭಗಳಲ್ಲಿ ಮ್ಯಾಕ್ಸಿ ಕೈ ಕೊಟ್ಟಿದ್ದರು. ಹೀಗಾಗಿ ಐಪಿಎಲ್ 2025ರ ಟೂರ್ನಿಗೆ ಮ್ಯಾಕ್ಸಿ ಅವರನ್ನು ತಂಡದಿಂದ ಕ ಬಿಡಲಾಯಿತು. ಇದೀಗ ಮ್ಯಾಕ್ಸಿ ಸ್ಥಿರ ಪ್ರದರ್ಶನಕ್ಕೆ ಆರ್‌ಸಿಬಿ ಮಂಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications