For Quick Alerts
ALLOW NOTIFICATIONS  
For Daily Alerts
 

ಭಾರತೀಯ ಶೈಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್

Glenn Maxwell Celebrates His Engagement To Vini Raman In Traditional Indian Style

ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತೀಯ ಶೈಲಿಯಲ್ಲೇ ಈ ನಿಶ್ಚಿತಾರ್ಥ ನಡೆದಿದ್ದು ಮ್ಯಾಕ್ಸ್‌ವೆಲ್ ಭಾರತದ ಸಾಂಪ್ರದಾಯಕ ಉಡುಗೆಯಲ್ಲಿ ಮಿಂಚಿದ್ದಾರೆ.

ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಫೆಬ್ರವರಿ ತಿಂಗಳಲ್ಲಿ ತಮ್ಮ ನಿಶ್ಚಿತಾರ್ಥವನ್ನು ಸಾರಿಕೊಂಡಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ಉಂಗುರದ ಚಿತ್ರ ಹಂಚಿಕೊಂಡಿದ್ದ ಯುವ ಜೋಡಿ ಈಗ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥವನ್ನು ನೆರವೇರಿಸಿಕೊಂಡಿದೆ. ವಿನಿ ರಾಮನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಹಲವು ವರ್ಷಗಳಿಂದ ಜೊತೆಯಾಗಿ ಸುತ್ತುತ್ತಿದ್ದರು. ಆದರೆ ಮದುವೆಯ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ನೀಡಿರಲಿಲ್ಲ. ಆದರೆ ಫೆಬ್ರವರಿ 25ರಂದು ಈ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೂ ಮ್ಯಾಕ್ಸ್‌ವೆಲ್ ಜೋಡಿ ಉತ್ತರವನ್ನು ನೀಡಿತ್ತು.

ಇನ್ಸ್ಟಾಗ್ರಾಂನಲ್ಲಿ ನಿರಂತರವಾಗಿ ಡೇಟಿಂಗ್ ಫೋಟೋಗಳನ್ನು ಮ್ಯಾಕ್ಸ್‌ವೆಲ್ ಹಂಚಿಕೊಳ್ಳುತ್ತಿದ್ದಾಗಲೇ ಈ ಜೋಡಿ ಪ್ರೇಮದ ಬಲೆಯಲ್ಲಿ ಬಿದ್ದಿರುವುದು ಸ್ಪಷ್ಟವಾಗಿತ್ತು. ಆದರೆ ಇದನ್ನು ಮ್ಯಾಕ್ಸ್‌ವೆಲ್ ಆಗಲಿ ವಿನಿ ರಾಮನ್ ಆಗಲಿ ಅಧಿಕೃತಗೊಳಿಸಿರಲಿಲ್ಲ. ಆದರೆ ಫೆಬ್ರವರಿ ತಿಂಗಳಲ್ಲಿ ಉಂಗುರ ತೊಟ್ಟ ಬೆರಳನ್ನು ತೋರಿಸುತ್ತಾ ಫೋಸ್ ಕೊಟ್ಟು ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ವಿನಿ ರಾಮನ್ ಮತ್ತು ಮ್ಯಾಕ್ಸ್‌ವೆಲ್ 2017ರಲ್ಲಿ ಭೇಟಿಯಾಗಿದ್ದರು. ಬಳಿಕ ನಿರಂತರವಾಗಿ ಈ ಜೋಡಿ ಡೇಟಿಂಗ್‌ನಲ್ಲಿ ತೊಡಗಿಸಿಕೊಂಡಿತ್ತು. ಮಾನಸಿಕ ಖಿನ್ನತೆಯಿಂದ ಬಳಲಿದ್ದ ಮ್ಯಾಕ್ಸ್‌ವೆಲ್ ತಾನು ಮತ್ತೆ ಸಹಜ ಸ್ಥಿತಿಗೆ ಬರಲು ವಿನಿ ರಾಮನ್ ಕಾರಣ ಎಂದು ಹೇಳಿಕೊಂಡಿದ್ದರು.

Story first published: Tuesday, March 17, 2020, 13:29 [IST]
Other articles published on Mar 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+