Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ: ಗಾಯದಿಂದ ದ. ಆಫ್ರಿಕಾ ಸರಣಿಗೆ ಸ್ಟಾರ್ ಆಟಗಾರ ಅಲಭ್ಯ

ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಆಡಲು ಸಜ್ಜಾಗಿದೆ. ಆದರೆ ಈ ಸರಣಿಗೂ ಮುನ್ನ ತಂಡದ ಸ್ಟಾರ್ ಆಟಗಾರ ಗಾಯಗೊಂಡಿದ್ದು ಈ ಸರಣಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ ಆಸಿಸ್ ಪಡೆಗೆ ಬದಲಿ ಆಟಗಾರನನ್ನು ಹೆಸರಿಸಲಾಗಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಗಾಯಗೊಂಡಿರುವ ಆಟಗಾರನಾಗಿದ್ದಾರೆ. ಮ್ಯಾಕ್ಸ್‌ವೆಲ್ ಮೊಣಕಾಲಿಗೆ ಗಾಯವಾಗಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿಯಬೇಕಾಗಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನ ಬಳಿಕ ಕಾಲಿನ ತೀವ್ರ ಗಾಯಕ್ಕೆ ತುತ್ತಾಗಿದ್ದ ಮ್ಯಾಕ್ಸ್‌ವೆಲ್ ಸುದೀರ್ಘ ಕಾಲ ವಿಶ್ರಾಂತಿಯ ಬಳಿಕ ಮತ್ತೆ ತಂಡಕ್ಕೆ ಮರಳಿದ್ದರು. ಇದೀಗ ವಿಶ್ವಕಪ್ ಸನಿಹದಲ್ಲಿರುವಾಗ ಗಾಯಗೊಂಡಿರುವುದು ಆಸಿಸ್ ಪಡೆಗೆ ಆತಂಕ ಮೂಡಿಸಿದೆ.

Glenn Maxwell injured ahead of World cup; Matthew Wade replaced him for South Africa series

ಅಂದಹಾಗೆ ತಮ್ಮ ಮಗುವಿನ ಜನನದ ಹಿನ್ನೆಲೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ಸ್ ಆಸ್ಟ್ರೇಲಿಯಾಗೆ ವಾಪಸಾಗಬೇಕಾಗಿತ್ತು. ಆದರೆ ಅಭ್ಯಾಸದ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಕ್ಯಾನಿಂಗ್ ವರದಿಗಳನ್ನು ನೋಡಿದ ಬಳಿಕ ವಿಶ್ರಾಂತಿಯ ಅಗತ್ಯವಿದೆ ಎನ್ನುವುದನ್ನು ವ್ಯದ್ಯರು ತಿಳಿಸಿದ್ದಾರೆ.

ಆಯ್ಕೆಗಾರ ಟೋನಿ ದೊಡೆಮೈಡ್ ಮ್ಯಾಕ್ಸ್‌ವೆಲ್ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿ ಭಾರತದಲ್ಲಿ ನಡೆಯಲಿದ್ದು ಅದಕ್ಕೂ ಮುನ್ನ ಮ್ಯಾಕ್ಸ್‌ವೆಲ್ ಅವರನ್ನು ಕೂಲಂಕುಶವಾಗಿ ಪರಿಶೀಲಿಸಲಾಗುತ್ತದೆ ಎಂದಿದ್ದಾರೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ಆಡಲಿರುವ ಕೊನೆಯ ದ್ವಿಪಕ್ಷೀಯ ಏಕದಿನ ಸರಣಿ ಇದಾಗಿರಲಿದೆ.

ಇನ್ನು ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಬಿದ್ದಿರುವ ಕಾರಣ ಅವರ ಸ್ಥಾನದಲ್ಲಿ ಮ್ಯಾಥ್ಯೂ ವೇಡ್‌ಗೆ ಅವಕಾಶ ನೀಡಲಾಗಿದೆ. ಆಸ್ಟ್ರೇಲಿಯಾ ತಂಡ ಮೊದಲಿಗೆ ಟಿ20 ಸರಣಿ ಆಡಿದ ಬಳಿಕ ಐದು ಪಂದ್ಯಗಳ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

Story first published: Monday, August 28, 2023, 16:44 [IST]
Other articles published on Aug 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+