ಐಪಿಎಲ್‌ಅನ್ನು ಮಿನಿ ವಿಶ್ವಕಪ್ ಎಂದ ಆಸ್ಟ್ರೇಲಿಯಾ ಆಲ್‌ರೌಂಡರ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪೋಟಕ ಆಟಗಾರ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯನ್ನು ಮಿನಿ ವಿಶ್ವಕಪ್ ಎಂದು ಕೊಂಡಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕಳೆದ ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಮ್ಯಾಕ್ಸ್‌ವೆಲ್ ಭಾರೀ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಈ ಬಾರಿಯ ವಿಶ್ವಕಪ್ ಮುಂದೂಡಿಕೆಯಾಗಿದೆ. ಹೀಗಾಗಿ 13ನೇ ಆವೃತ್ತಿಯ ಐಪಿಎಲ್ ನಡೆಸಲು ಬಿಸಿಸಿಐಗೆ ವೇದಿಕೆ ಸಿಕ್ಕಂತಾಗಿದ್ದು ಸೆಪ್ಟೆಂಬರ್-ನವಂಬರ್ ತಿಂಗಳಲ್ಲಿ ಸಿಗುವ ಅವಕಾಶದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆಯನ್ನು ನಡೆಸುತ್ತಿದೆ. ಹೀಗಾಗಿ ಎಲ್ಲ ಕ್ರಿಕೆಟ್ ಪ್ರೇಮಿಗಳ ಚಿತ್ತ ಐಪಿಎಲ್‌ನತ್ತ ನೆಟ್ಟಿದೆ.
ಕ್ರಿಕೆಟ್ ಆಡುತ್ತಿರುವ ಇತರ ದೇಶಗಳಿಗೆ ಹೋಲಿಸಿದಲ್ಲಿ ಯುಎಇನಲ್ಲಿ ಕಡಿಮೆ ಪ್ರಕಡಣಗಳು ದಾಖಲಾಗಿದ್ದು ಅಲ್ಲಿಯೇ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನವನ್ನು ಮಾಡಿಕೊಂಡಿದೆ. ಆದರೆ ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಇನ್ನಷ್ಟೇ ಅನುಮತಿಯನ್ನು ಪಡೆದುಕೊಳ್ಳಬೇಕಿದೆ. ಅನುಮತಿ ದೊರೆತ ನಂತರ ಈ ಬಾರಿಯ ಐಪಿಎಲ್ ಆಯೋಜನೆಯ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯಲಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿದ್ದು ಸದ್ಯ ಕಾದು ನೋಡುವ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಬರುವ ತೀರ್ಮಾನಗಳನ್ನು ಗಮನಿಸಿಕೊಂಡು ಕ್ವಾರಂಟೈನ್ ಅವಧಿ, ಪ್ರಯಾಣದ ಬಗೆಗಿನ ವಿಚಾರಗಳು ಏನು ಮಾಡಬಹುದು ಏನು ಮಾಡಬಾರದು ಎಂಬ ಬಗ್ಗೆ ಸಂಪೂರ್ಣ ಚಿತ್ರಣ ದೊರೆತರೆ ನಾನು ಐಪಿಎಲ್‌ನಲ್ಲಿ ಭಾಗವಹಿಸದೇ ಇರಲು ಕಾರಣವೇ ಇಲ್ಲ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಪಾಳ್ಗೊಳ್ಳಲು ಪ್ರವಾಸಕ್ಕೆ ತೆರಳಲಿರುವ ತಂಡದ ಪ್ರಾಥಮಿಕ 26 ಆಟಗಾರರ ಪಟ್ಟಿಯಲ್ಲಿ ಮ್ಯಾಕ್ಸ್‌ವೆಲ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಾನಸಿಕ ಆರೋಗ್ಯದ ಕಾರಣವನ್ನು ನೀಡಿ ಮ್ಯಾಕ್ಸ್‌ವೆಲ್ ಈ ಹಿಂದೆ ಕೆಲ ತಿಂಗಳ ಕಾಲ ಕ್ರಿಕೆಟ್‌ನಿಂದ ಸಂಪೂರ್ಣ ದೂರ ಉಳಿದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications