ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಿಂದ ಹೊರಕ್ಕೆ!?

ಬೆಂಗಳೂರು, ಫೆಬ್ರವರಿ 12: ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮಾಕ್ಸ್ 2020ರ ಐಪಿಎಲ್ ಟೂರ್ನಿಯ ಆರಂಭದಲ್ಲಿ ಕಾಣಿಸಿಕೊಳ್ಳೋದು ಅನುಮಾನವೆನಿಸಿದೆ. ಮೊಣಕೈ ಗಾಯಕ್ಕೀಡಾಗಿರುವ ಮ್ಯಾಕ್ಸ್‌ವೆಲ್ ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಆತಿಥೇಯರ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳಿಂದ ಹೊರ ಬಿದ್ದಿದ್ದಾರೆ.
ಎಡ ಮೊಣಕೈಗೆ ಗಾಯ ಮಾಡಿಕೊಂಡಿರುವ ಮ್ಯಾಕ್ಸ್‌ವೆಲ್ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಮ್ಯಾಕ್ಸ್‌ವೆಲ್ ಬದಲಿಗೆ ಆಸೀಸ್ ತಂಡದಲ್ಲಿ ಡಿ'ಆರ್ಸಿ ಶಾರ್ಟ್ ಅವರನ್ನು ಹೆಸರಿಸಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ಪ್ರವಾಸ ಸರಣಿ ಫೆಬ್ರವರಿ 21ರಿಂದ ಆರಂಭಗೊಳ್ಳಲಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ 6-8 ವಾರಗಳು ಬೇಕಾಗಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಇದರರ್ಥ 31ರ ಹರೆಯದ ಮ್ಯಾಕ್ಸ್‌ವೆಲ್ ಐಪಿಎಲ್ ಆರಂಭದಲ್ಲಿ ಆಡೋದು ಕಷ್ಟ. ಆ ಬಳಿಕ ಚೇತರಿಸಿಕೊಂಡರೂ ತನ್ನ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಗ್ಲೆನ್ ಆಡುತ್ತಾರೋ ಇಲ್ಲವೋ ಈಗಲೇ ಹೇಳುವಂತಿಲ್ಲ.
ಐಪಿಎಲ್ 2020 ಟೂರ್ನಿ ಮಾರ್ಚ್ 29ರಿಂದ ಆರಂಭಗೊಂಡು ಮೇ 24ರಂದು ಕೊನೆಗೊಳ್ಳಲಿದೆ. ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳುವ ಕಾಂಗರೂ ಪಡೆ, ಅಲ್ಲಿ ಮೂರು ಟಿ20, ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿ ಫೆಬ್ರವರಿ 29ರಿಂದ ಶುರುವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications