For Quick Alerts
ALLOW NOTIFICATIONS  
For Daily Alerts
 

Glenn Maxwell: ಲಯಕ್ಕೆ ಮರಳಿದ ಕಿಂಗ್ಸ್‌ ಪ್ಲೇಯರ್‌: ಆರ್‌ಸಿಬಿಗೆ ಟೆನ್ಷನ್‌

ಆಸ್ಟ್ರೇಲಿಯಾದಲ್ಲಿ ಇತ್ತೀಚಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ಮುಗಿದಿದೆ. ಈಗ ಕ್ರಿಕೆಟ್‌ ಅಭಿಮಾನಿಗಳ ಚಿತ್ತವನ್ನು ಬಿಗ್‌ ಬ್ಯಾಷ್‌ ಲೀಗ್‌ ನತ್ತ ನೆಟ್ಟಿದೆ. ಸ್ಟಾರ್ ಅಂತಾರಾಷ್ಟ್ರೀಯ ಆಟಗಾರರು ಬಿಬಿಎಲ್‌ ಟಿ20 ಲೀಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಈ ಲೀಗ್‌ನಲ್ಲಿ ಅಮೋಘ ಆಟವನ್ನು ಆಡಿದ್ದಾರೆ. ಇವರ ಆಟವನ್ನು ಕಂಡು ಪಂಜಾಬ್‌ ಕಿಂಗ್ಸ್‌ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್‌ ಲೀಗ್‌ನ 28ನೇ ಪಂದ್ಯದಲ್ಲಿ ಮೆಲ್ಬೋರ್ನ್‌ ಸ್ಟಾರ್ಸ್‌ ಹಾಗೂ ಸಿಡ್ನಿ ಸಿಕ್ಸರ್‌ ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 156 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಆಡಿದ ಸಿಡ್ನಿ ಸಿಕ್ಸರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 140 ರನ್‌ ಸೇರಿಸಿತು. ಈ ಗೆಲುವಿನ ಮೂಲಕ ಮೆಲ್ಬೋರ್ನ್‌ ತಂಡ ಟೂರ್ನಿಯಲ್ಲಿ ಮೂರನೇ ಗೆಲುವಿನ ನಗೆ ಬೀರಿದೆ.

Glenn Maxwell Shines in BBL Punjab Kings New Star Back in Form Worries Mount for RCB

ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್‌ ತಂಡದ ಆರಂಭ ಕಳಪೆಯಾಗಿತ್ತು. ಬೆನ್ ಡಕೆಟ್ (20), ಸ್ಯಾಮ್‌ ಹರ್ಪರ್‌ (4) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ 27 ರನ್ ಆಗುವಷ್ಟರಲ್ಲಿ ಇಬ್ಬರೂ ಆರಂಭಿಕರು ಪೆವಿಲಿಯನ್ ಸೇರಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಬ್ಯೂ ವೆಬ್‌ಸ್ಟಾರ್‌ ಅಮೋಘ ಪ್ರದರ್ಶನ ನೀಡಿದರು. ಇವರು ಇತ್ತೀಚಿಗೆ ಭಾರತದ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆದಿದ್ದರು. ಇವರು 41 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 48 ರನ್‌ ಸಿಡಿಸಿದರು.

ಗ್ಲೇನ್‌ ಮ್ಯಾಕ್ಸ್‌ವೆಲ್ ಅಬ್ಬರ

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 58 ರನ್‌ ಬಾರಿಸಿದರು.

ಸಿಡ್ನಿ ತಂಡದ ಪರ ಸಿನ್ ಅಬೋಟ್ ಮೂರು ವಿಕೆಟ್‌ ಪಡೆದು ಮಿಂಚಿದರು.

ಸಿಡ್ನಿ ತಂಡದ ಸ್ಟಾರ್ ಆಟಗರರು ರನ್‌ ಕಲೆ ಹಾಕುವಲ್ಲಿ ವಿಫಲರಾದರ. ಭರವಸೆಯ ಆರಂಭಿಕ ಆಟಗಾರ ಜೇಮ್ಸ್ ವಿನ್ಸ್ ಸೊಗಸಾದ ಆಟದ ಪ್ರದರ್ಶನ ನೀಡಿ 6 ಬೌಂಡರಿ ನೆರವಿನಿಂದ 53 ರನ್‌ ಗಳಿಸಿ ಮಿಂಚಿದರು. ಉಳಿದ ಆಟಗಾರರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.

Glenn Maxwell Shines in BBL Punjab Kings New Star Back in Form Worries Mount for RCB

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರನ್ನು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಇವರು ಆರ್‌ಸಿಬಿ ತಂಡದ ಪರ ಆಡಿದ್ದರು. ಅಲ್ಲದೆ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಇವರನ್ನು ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿತ್ತು. ಸೌದಿಯಲ್ಲಿ ನಡೆದ ಐಪಿಎಲ್ ಮೆಗ ಹರಾಜಿನಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್‌ ಅವರನ್ನು 2 ಕೋಟಿ ಮೂಲ ಬೆಲೆ ಹೊಂದಿದ್ದರು. ಪಂಜಾಬ್‌ ಇವರಿಗೆ 4.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು.

Story first published: Thursday, January 9, 2025, 22:56 [IST]
Other articles published on Jan 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+