For Quick Alerts
ALLOW NOTIFICATIONS  
For Daily Alerts
 

BBL: ಮ್ಯಾಕ್ಸ್‌ವೆಲ್ 104 ಮೀಟರ್‌ ದೊಡ್ಡ ಸಿಕ್ಸರ್: ಇಲ್ಲಿದೆ ವಿಡಿಯೋ

ವಿಶ್ವದ ಸ್ಟಾರ್ ಆಲ್‌ರೌಂಡರ್‌ ಆಟಗಾರರ ಪಟ್ಟಿಯಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರಿಗೂ ಅಗ್ರ ಸ್ಥಾನ. ಇವರು ತಮ್ಮ ಬಿಗ್‌ ಹಿಟ್‌ನಿಂದ ಅಭಿಮಾನಿಗಳ ಮನ ಗೆದ್ದ ಆಟಗಾರ. ಇತ್ತೀಚಿಗೆ ಬಿಗ್ ಬ್ಯಾಷ್‌ ಲೀಗ್‌ ಟಿ20 ಕ್ರಿಕೆಟ್‌ ಲೀಗ್‌ನಲ್ಲೂ ಮ್ಯಾಕ್ಸ್‌ವೆಲ್‌ ತಮ್ಮ ಕ್ಷಮತೆಯನ್ನು ಸಾಬೀತು ಪಡೆಸಿದ್ದಾರೆ. ಇವರು ಸಿಡ್ನಿ ಥಂಡರ್‌ ವಿರುದ್ಧ ಬ್ಯಾಟ್ ಮಾಡಿ ಅಬ್ಬರಿಸಿದ್ದಾರೆ. ಡಿಸೆಂಬರ್ 28 ರಂದು, ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ದೊಡ್ಡ ಸಿಕ್ಸರ್‌ ಬಾರಿಸುವ ಮೂಲಕ ಗಮನ ಸೆಳೆದರು.

ಭಾನುವಾರ ನಡೆದ ಪಂದ್ಯದಲ್ಲಿ ಸಿಡ್ನಿ ಥಂಡರ್ಸ್‌ ಹಾಗೂ ಮೆಲ್ಬೋರ್ನ್‌ ಸ್ಟಾರ್ಸ್‌ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ 20 ಓವರ್‌ಗಳಲ್ಲಿ 128 ರನ್‌ ಸಿಡಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮೆಲ್ಬೋರ್ನ್‌ ಸ್ಟಾರ್ಸ್‌ ತಂಡ 14 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 132 ರನ್‌ ಸೇರಿಸಿ ಜಯ ಸಾಧಿಸಿತು. ಮೆಲ್ಬೋರ್ನ್‌ ತಂಡದ ಪರ ಜೋ ಕ್ಲರ್ಕ್‌ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 60 ರನ್‌ ಸಿಡಿಸಿ ತಂಡದ ಜಯದಲ್ಲಿ ಮಿಂಚಿದರು.

Glenn Maxwell Smashes a Monstrous 104m Six as Melbourne Stars Crush Sydney Thunder in BBL

ಮೆಲ್ಬೋರ್ನ್ ಸ್ಟಾರ್ಸ್ ಪರ ಬ್ಯಾಟ್ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ನೈಜ ಆಟವನ್ನು ಆಡಿದರು. ಇವರು ಡೇನಿಯಲ್ ಸ್ಯಾಮ್ಸ್ ಎಸೆದ 11ನೇ ಓವರ್‌ನ ಮೂರನೇ ಎಸೆತದಲ್ಲಿ ಡೀಪ್‌ ಮಿಡ್‌ ವಿಕೆಟ್‌ ಮೇಲಿನಿಂದ 104 ಮೀಟರ್‌ ಉದ್ದದ ಸಿಕ್ಸರ್ ಬಾರಿಸಿದರು. ಸಿಕ್ಸರ್‌ ತುಂಬ ದೊಡ್ಡದಾಗಿದ್ದು, ಚೆಂಡು ಮೈದಾನದಿಂದ ಹೊರಗೋಯಿತು. ಇನ್ನು ಪಂದ್ಯವನ್ನು ಮುಂದುವರೆಸಲು ಅಂಪೈರ್‌ ಹೊಸ ಚೆಂಡನ್ನು ತಂದು ಮ್ಯಾಚ್‌ ಮುಂದುವರೆಸಿದರು.

ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಮ್ಯಾಕ್ಸ್‌ವೆಲ್‌ 100 ಮೀಟರ್‌ಗಿಂತ ದೂರ ಸಿಕ್ಸರ್‌ ಬಾರಿಸಿದ್ದು ಇದೇ ಮೊದಲನೇಲ್ಲ. ಈ ಹಿಂದೆಯೂ ಮ್ಯಾಕ್ಸ್‌ವೆಲ್‌ ಇಂತಹ ಸಾಧನೆ ಮಾಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್‌ 122 ಮೀಟರ್‌ ಉದ್ದದ ಸಿಕ್ಸರ್‌ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ದೊಡ್ಡ ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಮೆಲ್ಬೋರ್ನ್‌ ಸ್ಟಾರ್ಸ್‌ ಪರ ಬ್ಯಾಟ್ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ 20 ಎಸೆತಗಳಲ್ಲಿ 195 ಸ್ಟ್ರೈಕ್‌ ರೇಟ್‌ನಲ್ಲಿ 39 ರನ್‌ ಬಾರಿಸಿದರು. ಇದರಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ.

Story first published: Sunday, December 28, 2025, 18:20 [IST]
Other articles published on Dec 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+