ಭಾರತೀಯ ಯುವತಿ ಜತೆ ಮ್ಯಾಕ್ಸ್‌ವೆಲ್ ಮದುವೆ: ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ

ಕೆಲ ವಿದೇಶೀ ಕ್ರಿಕೆಟಿಗರಿಗೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಜಾಂಟಿ ರೋಡ್ಸ್ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಭಾರತದ ಮೇಲೆ ತಮಗಿರುವ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದರು. ಅದೇ ರೀತಿ ದಕ್ಷಿಣ ಆಫ್ರಿಕಾದ ಮತ್ತೋರ್ವ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಭಾರತದ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವೇ. ಎಬಿ ಡಿವಿಲಿಯರ್ಸ್ ಭಾರತದ ಮೇಲೆ ಪ್ರೀತಿಯನ್ನು ಹೊಂದಿರುವುದು ಮಾತ್ರವಲ್ಲದೆ ಭಾರತದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟಿಗನಾದ ಮ್ಯಾಥ್ಯೂ ಹೇಡನ್ ಕೂಡ ಈ ಹಿಂದೆ ಭಾರತದ ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಇಲ್ಲಿನ ಸಂಸ್ಕೃತಿಯನ್ನು ಪಾಲಿಸಿದ್ದರು. ಹಾಗೂ ಇತ್ತೀಚಿನ ದಿನಗಳಲ್ಲಿ ಡೇವಿಡ್ ವಾರ್ನರ್ ಕೂಡ ಭಾರತ ಚಿತ್ರರಂಗದ ಹಲವಾರು ಹಾಡುಗಳಿಗೆ ನಟನೆ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡುತ್ತಾ ಭಾರತದ ಕುರಿತು ತಮ್ಮ ಒಲವನ್ನು ವ್ಯಕ್ತಪಡಿಸಿದ್ದರು.
ಹೀಗೆ ಭಾರತವೆಂದರೆ ಅಪಾರವಾದ ಪ್ರೀತಿ ಮತ್ತು ಗೌರವವನ್ನು ಹಲವಾರು ವಿದೇಶಿ ಕ್ರಿಕೆಟಿಗರು ಹೊಂದಿದ್ದು ಇದೀಗ ಪ್ರಸ್ತುತ ಕ್ರಿಕೆಟ್ ಯುಗದ ಸ್ಟಾರ್ ಆಟಗಾರನಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದ ಮೂಲದ ಯುವತಿ ಜೊತೆ ಭಾರತ ಸಂಪ್ರದಾಯದ ಪ್ರಕಾರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಹೌದು, ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ಮೂಲದ ಯುವತಿ ವಿನಿ ರಾಮನ್ ಅವರನ್ನು ವಿವಾಹವಾಗಲಿದ್ದಾರೆ. ಇನ್ನೂ ವಿಶೇಷವೆಂದರೆ ಈ ಇಬ್ಬರ ನಡುವಿನ ವಿವಾಹದ ಆಮಂತ್ರಣ ಪತ್ರಿಕೆ ಸಂಪೂರ್ಣವಾಗಿ ತಮಿಳು ಭಾಷೆಯಲ್ಲಿಯೇ ಮುದ್ರಣವಾಗಿದ್ದು ಈ ಆಮಂತ್ರಣ ಪತ್ರಿಕೆಯ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಇನ್ನು ವಿನಿ ರಾಮನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, 2020ರಲ್ಲಿ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದರು. ಇನ್ನು ಭಾರತೀಯ ಸಂಸ್ಕೃತಿಯಂತೆ ಇವರಿಬ್ಬರ ಮದುವೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಮಾರ್ಚ್ ತಿಂಗಳಿನಲ್ಲಿ ಜರುಗಲಿದೆ. ಸದ್ಯದ ಪ್ರಕಾರ ಮುಂಬರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮಾರ್ಚ್ 27ರಿಂದ ಆರಂಭವಾಗುತ್ತದೆ ಎನ್ನಲಾಗುತ್ತಿದ್ದು ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ನಡುವಿನ ವಿವಾಹ ಕೂಡ ಅದೇ ದಿನದಂದು ಮೆಲ್ಬೊರ್ನ್ ನಗರದಲ್ಲಿ ನಡೆಯಲಿದೆ.
ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದ ದಿನದಂದೇ ಗ್ಲೆನ್ ಮ್ಯಾಕ್ಸ್‌ವೆಲ್ ವಿವಾಹವಾಗುತ್ತಿರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಲ ಆರಂಭದ ಪಂದ್ಯಗಳಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅಲಭ್ಯರಾಗಲಿದ್ದಾರೆ. ವಿವಾಹವನ್ನು ಮುಗಿಸಿ ತಕ್ಷಣವೇ ಭಾರತಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಆಗಮಿಸಿದರೂ ಸಹ ಕ್ವಾರಂಟೈನ್ ನಿಯಮ ಅನುಸರಿಸಬೇಕಾಗಿರುವುದರಿಂದ ವಿವಾಹ ಮುಗಿದ ಸುಮಾರು 1 ವಾರದವರೆಗೂ ಮ್ಯಾಕ್ಸ್‌ವೆಲ್ ಕಣಕ್ಕಿಳಿಯುವುದಿಲ್ಲ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications