Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಷಸ್ ಸರಣಿಯ ಭವಿಷ್ಯ ನುಡಿದ ಗ್ಲೆನ್ ಮೆಕ್‌ಗ್ರಾತ್

ಇಂಗ್ಲೆಂಡ್‌, ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಡ್ರಾ ಸಾಧಿಸಿದೆ. ಈಗ ಈ ತಂಡ ಆಷಸ್ ಟೂರ್ನಿಯನ್ನು ಎದುರು ನೋಡುತ್ತಿದೆ. ಈ ಟೂರ್ನಿಗಾಗಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಈ ಸರಣಿಗೆ ಇನ್ನು ತಿಂಗಳು ಗಟ್ಟಲ ಸಮಯ ಇರುವಾಗ ಆಸ್ಟ್ರೇಲಿಯಾ ತಂಡದ ದಿಗ್ಗಜ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಸರಣಿಯ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ.

ಬಿಸಿಸಿ ರೆಡಿಯೋ ಜೊತೆಗಿನ ಸಂದರ್ಶನದಲ್ಲಿ ಗ್ಲೆನ್ ಮೆಕ್‌ಗ್ರಾತ್ ಆಷಸ್ ಸರಣಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. "ನನಗೆ ನಮ್ಮ ತಂಡದ ಪ್ರದರ್ಶನದ ಮೇಲೆ ವಿಶ್ವಾಸವಿದೆ. ನಮ್ಮ ತಂಡ ನಿಶ್ಚಿತವಾಗಿ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧನೆ ಮಾಡುತ್ತದೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಹಾಗ ನಾಥನ್‌ ಲಿಯಾನ್‌ ತವರಿನ ಕಡೀಷನ್‌ಗಳಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಬಲ್ಲರು. ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ತಂಡದ ಅಂಕಿ ಅಂಶಗಳನ್ನು ಹಾಗೂ ಸದ್ಯದ ತಂಡವನ್ನು ನೋಡಿದಾಗ, ಒಂದು ಟೆಸ್ಟ್ ಗೆಲ್ಲುತ್ತದಾ ಎಂಬ ಸಂಶಯ ಎದುರಾಗಿದೆ" ಎಂದಿದ್ದಾರೆ.

Glenn McGrath Predicts Australia Will Clean Sweep England in Upcoming Ashes Series

ಇಂಗ್ಲೆಂಡ್ ತಂಡದ ಟಾಪ್ ಆರ್ಡರ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ಹಾಗೂ ಆಸೀಸ್‌ ತಂಡದ ವೇಗಿಗಳು ಹಾಗೂ ಲಿಯಾನ್ ಕಾದಾಟ ನೋಡಲು ಉತ್ಸುಕನಾಗಿದ್ದೇನೆ. ಈ ಸಣಿ ಜೋ ರೂಟ್‌ ಅವರಿಗೂ ಸವಾಲಿನದ್ದಾಗಿರಲಿದೆ. ಆಸ್ಟ್ರೇಲಿಯಾದಲ್ಲಿ ರೂಟ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ಪ್ರವಾಸದಲ್ಲಿ ಇವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಗ್ಲೆನ್ ಮೆಕ್‌ಗ್ರಾತ್ ತಿಳಿಸಿದ್ದಾರೆ.

ಇಂಗ್ಲೆಂಡ್ ಸಾಧನೆ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆಷಸ್ ಸರಣಿಯ ಮೊದಲ ಪಂದ್ಯ ನವೆಂಬರ್ 21 ರಂದು ಪರ್ತ್‌ನಲ್ಲಿ ನಡೆಯಲಿದೆ. ಇಂಗ್ಲೆಂಡ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. 2015ರಿಂದ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ಟೆಸ್ಟ್‌ ಸರಣಿಯನ್ನು ಗೆದ್ದಿಲ್ಲ. ಇಂಗ್ಲೆಂಡ್ 2010-11ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿಯನ್ನು ಗೆದ್ದಿತ್ತು. 2021-22 ಪ್ರವಾಸದಲ್ಲಿ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡಿ 4-0 ಯಿಂದ ಟೆಸ್ಟ್‌ ಸರಣಿಯನ್ನು ಗೆದ್ದು ಕೊಂಡಿತ್ತು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್‌ ತವರಿನಲ್ಲಿ ಆಡಿದ 15 ಟೆಸ್ಟ್ ಪಂದ್ಯಗಳಲ್ಲಿ ಕೇವ 2 ಟೆಸ್ಟ್‌ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 11 ಟೆಸ್ಟ್‌ ಜಯ ಸಾಧಿಸಿದರೆ, 2 ಪಂದ್ಯ ಡ್ರಾದಲ್ಲಿ ಅಂತ್ಯವಾಗಿವೆ.

Glenn McGrath Predicts Australia Will Clean Sweep England in Upcoming Ashes Series

ಈ ಸರಣಿ ರೂಟ್‌ ಅವರಿಗೆ ಮಹತ್ವದಾಗಿರಲಿದೆ. ಆಸ್ಟ್ರೇಲಿಯಾದಲ್ಲಿ ರೂಟ್ ಸ್ಥಿರ ಪ್ರದರ್ಶನ ನೀಡಿಲ್ಲ. ಅಲ್ಲದೆ ಇಲ್ಲಿ ಒಂದೇ ಒಂದು ಶತಕ ಬಾರಿಸಿಲ್ಲ. ಸದ್ಯ ಇವರು ಭರ್ಜರಿ ಫಾರ್ಮ್‌ನಲ್ಲಿದ್ದು ಇವರ ಮೇಲೂ ಕಣ್ಣು ನೆಟ್ಟಿರಲಿದೆ. ಬ್ರೂಕ್‌ ಅವರ ಬ್ಯಾಟಿಂಗ್ ನೋಡಲ ಖುಷಿಯಾಗುತ್ತದೆ. ಇವನ್ನು ಆಸ್ಟ್ರೇಲಿಯಾ ಬೇಗನೆ ಔಟ್ ಮಾಡಬೇಕಾದ ಅನಿವಾರ್ಯತೆ ಇದೆ ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ಬೌಲರ್ ಗ್ಲೆನ್ ಮೆಕ್‌ಗ್ರಾತ್ ತಿಳಿಸಿದ್ದಾರೆ.

Story first published: Friday, August 8, 2025, 16:32 [IST]
Other articles published on Aug 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+