Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಗುಜರಾತ್ ಟೈಟಾನ್ಸ್‌ಗೆ ಆಘಾತ; ಗ್ಲೆನ್ ಫಿಲಿಪ್ಸ್ ಔಟ್!

ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2025 ರ 19 ನೇ ಪಂದ್ಯವು ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ತಂಡಕ್ಕೆ ಹಿನ್ನಡೆಯಾಗಿದೆ. ಸನ್‌ ರೈಸರ್ಸ್ ಹೈದರಾಬಾದ್ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆಟಗಾರ ಗ್ಲೆನ್ ಫಿಲಿಪ್ಸ್ ಗಾಯಗೊಂಡಿದ್ದಾರೆ. ನೋವಿನಿಂದ ನರಳುತ್ತಾ ತಕ್ಷಣವೇ ಮೈದಾನವನ್ನು ತೊರೆದಿದ್ದಾರೆ.

ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾದ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಗಾಯಗೊಂಡಿರುವುದು ಗುಜರಾತ್ ಟೈಟಾನ್ಸ್ ತಂಡಕ್ಕೆ ಆಘಾತ ತರಿಸಿದೆ. ಈ ಘಟನೆ ನ್‌ ರೈಸರ್ಸ್ ಹೈದರಾಬಾದ್ ತಂಡದ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ನಡೆಯಿತು.

Glenn Phillips injured in Gujarat Titans vs Sunrisers Hyderabad IPL 2025 match 19

ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಗುಜರಾತ್ ಟೈಟಾನ್ಸ್‌ನ ಪ್ಲೇಯಿಂಗ್-11 ರಲ್ಲಿ ಅರ್ಷದ್ ಖಾನ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಹರ್ಷಲ್ ಪಟೇಲ್ ಅವರ ಅನಾರೋಗ್ಯದ ಕಾರಣ, ಸನ್‌ರೈಸರ್ಸ್ ಹೈದರಾಬಾದ್ ತಮ್ಮ ತವರಿನ ಪಂದ್ಯದಲ್ಲಿ ಜಯದೇವ್ ಉನದ್ಕತ್ ಅವರನ್ನು ಸೇರಿಸಿಕೊಂಡಿದೆ.

ವಿಶ್ವದ ಅತ್ಯುತ್ತಮ ಫೀಲ್ಡರ್ ಎನಿಸಿಕೊಂಡಿರುವ ಗ್ಲೆನ್ ಫಿಲಿಪ್ಸ್ ಈ ಪಂದ್ಯದ ಸಮಯದಲ್ಲಿ ಮೊಹಮ್ಮದ್ ಸಿರಾಜ್ ಬದಲಿಗೆ ಬದಲಿ ಫೀಲ್ಡರ್ ಆಗಿ ಮೈದಾನಕ್ಕೆ ಬಂದರು. 6 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಫಿಲಿಪ್ಸ್ ದುರದೃಷ್ಟಕರ ಗಾಯಗೊಂಡರು. ವೇಗಿ ಪ್ರಸಿದ್ಧ್ ಕೃಷ್ಣ ಅವರು ಲೆಗ್ ಸ್ಟಂಪ್ ಮೇಲೆ ಶಾರ್ಟ್-ಲೆಂಗ್ತ್ ಬಾಲ್ ಎಸೆದರು. ಇಶಾನ್ ಕಿಶನ್ ಅದನ್ನು ಪಾಯಿಂಟ್ ಕಡೆಗೆ ಆಡಿ ಒಂದು ರನ್ ಪಡೆದರು. ಇತ್ತ ತಮ್ಮ ಬಳಿಗೆ ಬಂದ ಚೆಂಡನ್ನು ಫಿಲಿಪ್ಸ್ ಬೇಗನೆ ಎತ್ತಿಕೊಂಡು ಕೀಪರ್‍‌ಗೆ ಎಸೆಯುವಾಗ ಗಾಯಗೊಂಡರು. ತಕ್ಷಣ ಮೈದಾನಕ್ಕೆ ವೈದ್ಯರು ಓಡಿ ಬಂದು ಪರೀಕ್ಷಿಸಿದರು. ಆದಾಗ್ಯೂ, ಫಿಲಿಪ್ಸ್ ಮೈದಾನವನ್ನು ತೊರೆಯಬೇಕಾಯಿತು. ಫಿಲಿಪ್ಸ್ ತುಂಬಾ ನೋವಿನಲ್ಲಿದ್ದಂತೆ ಕಾಣುತ್ತಿತ್ತು.

ಉಭಯ ತಂಡಗಳ ಪ್ಲೇಯಿಂಗ್-11

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್ (ನಾಯಕ), ಜೀಶನ್ ಅನ್ಸಾರಿ, ಜಯದೇವ್ ಉನಾದ್ಕತ್, ಮೊಹಮ್ಮದ್ ಶಮಿ.

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ವಾಷಿಂಗ್ಟನ್ ಸುಂದರ್, ಆರ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ.

Story first published: Sunday, April 6, 2025, 22:10 [IST]
Other articles published on Apr 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+