Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಗ್ಲೇನ್ ಫಿಲಿಪ್ಸ್‌ ಸೂಪರ್‌ ಮ್ಯಾನ್‌ ಕ್ಯಾಚ್‌ಗೆ ವಿರಾಟ್‌ ಸ್ಟನ್‌: ಇಲ್ಲಿದೆ ವಿಡಿಯೋ

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ದುಬೈನಲ್ಲಿ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಪಂದ್ಯ ಎಲ್ಲರ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಬಲಿಷ್ಠ ತಂಡಗಳು ಕಾದಾಟ ನಡೆಸಿವೆ. ನ್ಯೂಜಿಲೆಂಡ್ ಈ ವೇಳೆ ಟಾಸ್‌ ಗೆದ್ದು ಫೀಲ್ಡಿಂಗ್ ಮಾಡಲು ಮುಂದಾಯಿತು. ಈ ವೇಳೆ ಟೀಮ್ ಇಂಡಿಯಾ ಸ್ಟಾರ್‌ ಬ್ಯಾಟರ್‌ಗಳು ನೆಲಕಚ್ಚಿ ನಿಮತು ಬ್ಯಾಟ್‌ ಮಾಡುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ರನ್‌ ಕಲೆ ಹಾಕಲು ಪರದಾಟ ನಡೆಸಿದರು.

ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಿದ ಟೀಮ್ ಇಂಡಿಯಾ, ಆರಂಭದಲ್ಲೇ ರನ್‌ ಕಲೆ ಹಾಕುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ರೋಹಿತ್ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಆದರೆ ರೋಹಿತ್ ಸಂಪೂರ್ಣ ಫಿಟ್ ಆಗಿದ್ದು, ತಂಡಕ್ಕೆ ಲಭ್ಯಾರಗಿದ್ದಾರೆ. ಈ ವೇಳೆ ರೋಹಿತ್‌ ತಮ್ಮ ನೈಜ್ಯ ಆಟವನ್ನು ಆಡುವ ಸೂಚನೆ ನೀಡಿದರು. ಆದರೆ ಫಲಿಸಲಿಲ್ಲ. ರೋಹಿತ್‌ 17, ಶುಭಮನ್‌ ಗಿಲ್‌ 2 ರನ್‌ಗಳಿಗೆ ಆಟ ಮುಗಿಸಿದರು.

Glenn Phillips Stunning Catch Sends Virat Kohli Packing in His 300th ODI

ಭಾನುವಾರ ಸೂಪರ್ ಟಚ್‌ನಲ್ಲಿ ಕಾಣಿಸಿಕೊಂಡಿದ್ದ ವಿರಾಟ್‌, ದೊಡ್ಡ ಇನಿಂಗ್ಸ್‌ ಕಟ್ಟುವ ಸೂಚನೆಯನ್ನು ನೀಡಿದ್ದರು. ಈ ವೇಳೆ ಕೊಹ್ಲಿ 2 ಬೌಂಡರಿ ಬಾರಿಸಿ ಭರವಸೆಯ ಮೂಡಿಸಿದ್ದರು. ಆದರೆ ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಎಸೆತದಲ್ಲಿ ಔಟ್ ಆದರು. ಅಬ್ಬಾ ಈ ಕ್ಯಾಚ್‌ ಪಡೆದ ಗ್ಲೇನ್‌ ಫಿಲಿಪ್ಸ್‌ ಮತ್ತೊಮ್ಮೆ ಹಿರೋ ರೀತಿ ಮಿಂಚಿದರು.

ಆಗಿದ್ದೇನು?

7ನೇ ಓವರ್ ಬೌಲ್‌ ಮಾಡುವ ಅವಕಾಶ ಮ್ಯಾಟ್ ಹೆನ್ರಿ ಅವರದ್ದಾಗಿತ್ತು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಪಾಯಿಂಟ್‌ ಬಳಿಯಿಂದ ಬೌಂಡರಿ ಬಾರಿಸುವ ಇರಾದೆಯನ್ನು ಹೊಂದಿದ್ದರು. ಆದರೆ ಈ ಸ್ಥಳದಲ್ಲಿ ಫಿಲ್ಡ್ ಮಾಡುತ್ತಾ ಇದ್ದ ಗ್ಲೇನ್‌ ಫಿಲಿಪ್ಸ್‌ ಅಮೋಘ ಕ್ಯಾಚ್‌ ಪಡೆದರು. ತಮ್ಮ ಬಲಗಡೆಗೆ ನೆಗೆದು ಹಿಡಿದ ಕ್ಯಾಚ್‌ ಕಂಡು ವಿರಾಟ್ ಕೊಹ್ಲಿ ಸ್ಟನ್‌ ಆದರು. ಕಿವೀಸ್‌ ತಂಡದ ಮತ್ತೊಬ್ಬ ಫೀಲ್ಡರ್‌ ಬೌಂಡರಿಗಳತ್ತ ಓಡುತ್ತಲೇ ಹೋದರು. ಆದರೆ ಈ ವೇಳೆಗಾಗಲೇ ಸಂಭ್ರಮಾಚರಣೆ ಆರಂಭವಾಗಿತ್ತು.

300ನೇ ಪಂದ್ಯ

ವಿರಾಟ್ ಕೊಹ್ಲಿ ಅವರಿಗೆ ಈ ಪಂದ್ಯ ಮಹತ್ವದಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕಣಕ್ಕೆ ಇಳಿಯುತ್ತಿದ್ದಂತೆ ಇತಿಹಾಸ ಬರೆದರು. ಇವರು ಏಕದಿನ ಅಂತಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಪಂದ್ಯಗಳನ್ನು ಆಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಆದರೆ ಈ ಪಂದ್ಯದಲ್ಲಿ ಸ್ಮರಣೀಯ ಇನಿಂಗ್ಸ್ ಕಟ್ಟುವ ಇರಾದೆ ಕೈ ಹಿಡಿಯಲಿಲ್ಲ.

Take a Poll

ಭಾರತದ ಪರ ಈ ಸಾಧನೆಯನ್ನು ಮಾಡಿದ ಏಳನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇವರು 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇವರ ನಂತರ ಮಹೇಂದ್ರ ಸಿಂಗ್ ಧೋನಿ, ರಾಹುಲ್‌ ದ್ರಾವಿಡ್, ಮೊಹಮ್ಮದ್ ಅಜರುದ್ಧಿನ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಈ ಸಾಧನೆ ಮಾಡಿದ್ದಾರೆ.

Story first published: Sunday, March 2, 2025, 16:10 [IST]
Other articles published on Mar 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+