ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ RCB ಮಾಜಿ ಆಟಗಾರ
ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಸದ್ಯ ಟಿ20 ಲೀಗ್ ನಡೆಯುತ್ತಿದೆ. ಈ ಲೀಗ್‌ನಲ್ಲಿ ವಿಶ್ವದ ಸ್ಟಾರ್ ಆಟಗಾರರು ಭಾಗವಹಿಸುತ್ತಿದ್ದಾರೆ. ಈಗ ಸದ್ಯ ಗ್ಲೋಬಲ್ ಸೂಪರ್ ಲೀಗ್ 2025 ನಡೆಯುತ್ತಿದೆ. ಈ ಲೀಗ್‌ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಹೋಬಾರ್ಟ್ ಹರಿಕೇನ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಅಮೋಘ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿದರು. ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ 125 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗಯಾನಾ 16.3 ಓವರ್‌ಗಳಲ್ಲಿ ಗುರಿ ತಲುಪಿತು. ಇದೇ ಪಂದ್ಯದಲ್ಲಿ ಶಿಮ್ರೋನ್ ಹೆಟ್ಮೆಯರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಗಯಾನಾ ತಂಡದ ಪರ ಆಡುವ ಶಿಮ್ರೋನ್ ಹೆಟ್ಮೆಯರ್ ಉತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇವರು ಹರಿಕೆನ್ಸ್ ತಂಡದ ಬೌಲರ್ ಫ್ಯಾಬಿಯನ್ ಅಲೆನ್ ಅವರ ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸಿದರು.

ಸತತ ಐದು ಸಿಕ್ಸರ್
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗಯಾನಾ ಉತ್ತಮ ಆರಂಭವನ್ನು ಕಂಡಿತ್ತು. ಹರಿಕೇನ್ಸ್ ತಂಡದ ಪರ 10 ನೇ ಓವರ್ ಬೌಲ್ ಮಾಡಲು ಫ್ಯಾಬಿಯನ್ ಅಲೆನ್ ಮುಂದಾದರು. ಈ ಓವರ್‌ನ ಮೊದಲ ನಾಲ್ಕು ಎಸೆತಗಳನ್ನು ಸಿಕ್ಸರ್ ಬಾರಿಸುವಲ್ಲಿ ಶಿಮ್ರೋನ್ ಸಫಲರಾದ್ರು. ಐದನೇ ಎಸೆತದಲ್ಲಿ ಎರಡು ರನ್‌ಗಳನ್ನು ಪಡೆದು ಸ್ಟ್ರೈಕ್ ತಮ್ಮ ಬಳಿಯೇ ಇಟ್ಟುಕೊಂಡರು. ನಂತರ ಓವರ್‌ನ ಕೊನೆಯ ಎಸೆತವನ್ನು ಸಹ ಬೌಂಡರಿ ಲೈನ್ ಆಚೆಗೆ ದಾಟಿಸಿದ ಶಿಮ್ರೋನ್ ಆರ್ಭಟಿಸಿದರು. ಈ ಮೂಲಕ ಅವರು ಒಂದೇ ಓವರ್‌ನಲ್ಲಿ 32 ರನ್ ಕಲೆ ಹಾಕಿ ತಂಡದ ಗೆಲವನ್ನು ಸುಲಭವಾಗಿಸಿದರು.
ಈ ಪಂದ್ಯದಲ್ಲಿ ಶಿಮ್ರೋನ್ ಹೆಟ್ಮೆಯರ್ ಕೇವಲ 10 ಎಸೆತಗಳಲ್ಲಿ 6 ಸಿಕ್ಸರ್ ಸೇರಿದಂತೆ ಒಟ್ಟು 39 ರನ್ ಸಿಡಿಸಿದರು. ಇವರನ್ನು ಬಟ್ಟರೆ ಮೋಯಿನ್ ಅಲಿ 30 ರನ್ ಕಾಣಿಕೆ ನೀಡಿದರು. ಗುಡಕೇಶ್ ಮೋತಿ 19 ರನ್ ಬಾರಿಸಿದರು. ಪರಿಣಾಮ ಗಯಾನ ತಂಡವು ಸುಲಭವಾಗಿ ಗುರಿಯನ್ನು ತಲುಪಿತು.
ರನ್ ಕಲೆ ಹಾಕಲು ಹರಿಕೇನ್ಸ್ ಬ್ಯಾಟರ್ ಪರದಾಟ
ಹೋಬಾರ್ಟ್ ಹರಿಕೇನ್ಸ್ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಬೆನ್ ಮೆಕ್‌ಡರ್ಮೊಟ್ (21), ನಿಖಿಲ್ ಚೌಧರಿ (21), ಮೊಹಮ್ಮದ್ ನಬಿ (21), ಫ್ಯಾಬಿಯನ್ ಅಲೆನ್ (28) ಕೊಂಚ ಗಯಾನಾ ಬೌಲರ್‌ಗಳನ್ನು ಕಾಡಿದ್ದು ಬಿಟ್ಟರೆ, ಉಳಿದ ಆಟಗಾರರು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಗಯಾನಾ ತಂಡದ ಪರ ಗುಡಕೇಶ್ ಮೋತಿ 9 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ಮೋಯಿನ್ ಅಲಿ, ಇಮ್ರಾನ್ ತಾಹೀರ್ ತಲಾ ಎರಡು ವಿಕೆಟ್ ಪಡೆದರು. ಆಲ್‌ರೌಂಡರ್ ಪ್ರದರ್ಶನ ನೀಡಿದ ಗುಡಕೇಶ್ ಮೋತಿ ಪಂಧ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications