Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ಲೋಬಲ್‌ ಟಿ20ಯಲ್ಲಿ ಪಾಕ್‌ ಕ್ರಿಕೆಟಿಗನಿಂದ ಮ್ಯಾಚ್‌ ಫಿಕ್ಸಿಂಗ್‌ ಯತ್ನ!

Umar Akmal 2019

ಕರಾಚಿ, ಆಗಸ್ಟ್‌ 07: ಪಾಕಿಸ್ತಾನದ ಮಾಜಿ ಟೆಸ್ಟ್‌ ಆಟಗಾರ ಮನ್ಸೂರ್‌ ಅಖ್ತರ್‌ ತಮ್ಮನ್ನು ಗ್ಲೋಬಲ್‌ ಟಿ20 ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳುವಂತೆ ಕೇಳಿದ್ದರೆಂದು ಪಾಕಿಸ್ತಾನ ತಂಡದಿಂದ ಅವಕಾಶ ವಂಚಿತ ಬ್ಯಾಟ್ಸ್‌ಮನ್‌ ಉಮರ್‌ ಅಕ್ಮಲ್‌ ಆರೋಪಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಹತ್ತಿರದ ಮೂಲಗಳು ತಿಳಿಸಿರುವ ಪ್ರಕಾರ ಮ್ಯಾಚ್‌ ಫಿಕ್ಸಿಂಗ್‌ ಪ್ರಯತ್ನ ಕುರಿತಾಗಿ ಉಮರ್‌ ಅಕ್ಮಲ್‌ ಗ್ಲೋಬಲ್‌ ಟಿ20 ಟೂರ್ನಿಯ ಸಂಘಟಕರು ಮತ್ತು ಪಿಸಿಬಿಯ ಭ್ರಷ್ಟಾಚಾರ ತಡೆ ಅಧಿಕಾರಿಗಳ ಬಳಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಕ್ಮಲ್‌, ಜಿಟಿ20ಯಲ್ಲಿ ವಿನ್ನಿಪೆಗ್‌ ಹಾಕ್ಸ್‌ ಪರ ಆಡುತ್ತಿದ್ದಾರೆ.

ಮಾಜಿ ಟೆಸ್ಟ್‌ ಆಟಗಾರ ಅಖ್ತರ್‌, ವಿನ್ನಿಪೆಗ್‌ ಹಾಕ್ಸ್‌ ತಂಡದ ಮ್ಯಾನೇಜ್ಮೆಂಟ್‌ನ ಭಾಗವಾಗಿದ್ದು, ಲೀಗ್‌ನ ಕೆಲ ಪಂದ್ಯಗಳನ್ನು ಫಿಕ್ಸ್‌ ಮಾಡುವ ಉದ್ದೇಶದಿಂದ ಉಮರ್‌ ಅಕ್ಮಲ್‌ ನೆರವು ಕೇಳಿದ್ದಾರೆ ಎಂದು ವರದಿಯಾಗಿದೆ. 61 ವರ್ಷದ ಮನ್ಸೂರ್‌ ಅಖ್ತರ್‌, ಸದ್ಯ ಅಮೆರಿಕದಲ್ಲಿ ನೆಲೆಸಿದ್ದು ಪಾಕಿಸ್ತಾನ ತಂಡದ ಪರ 1980-90ರ ದಶಕದಲ್ಲಿ 19 ಟೆಸ್ಟ್‌ ಮತ್ತು 41 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದೇ ವೇಳೆ ಘಟನೆ ಬೆಳಕಿಗೆ ಬಂದ ಬಳಿಕ ಅವರು ತಲೆ ಮರೆಸಿಕೊಂಡಿದ್ದಾರೆ.

ಇನ್ನು 2015ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ವೇಳೆಯೂ ಬುಕಿಗಳು ಮ್ಯಾಚ್‌ ಫಿಕ್ಸಿಂಗ್‌ ಅಲುವಾಗಿ ತಮ್ಮನ್ನು ಸಂಪರ್ಕಿಸಿದ್ದರು ಎಂಬ ಸಂಗತಿಯನ್ನು ಉಮರ್‌ ಅಕ್ಮಲ್‌ ಕಳೆದ ವರ್ಷ ಬಹಿರಂಗ ಪಡಿಸಿ ಸಾಕಷ್ಟು ವಿವಾದ ಸೃಷ್ಠಿಸಿದ್ದರು.

ಕಳೆದ ಮಾರ್ಚ್‌ನಲ್ಲಿ ಯುಎಇನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಉಮರ್‌ ಅಕ್ಮಲ್‌ಗೆ ಪಾಕಿಸ್ತಾನ ತಂಡದಲ್ಲಿ ಮರಳಿ ಸ್ಥಾನ ನೀಡಲಾಗಿತ್ತಾದರೂ, ಬಳಿಕ ವಿಶ್ವಕಪ್‌ಗೆ ಪ್ರಕಟಿಸಲಾ ತಂಡದಿಂದ ಅವರನ್ನು ಕೈಬಿಡಲಾಗಿತ್ತು. 29 ವರ್ಷದ ಬಲಗೈ ಬ್ಯಾಟ್ಸ್‌ಮನ್‌, ಪಾಕ್‌ ತಂಡದ ಪರ 16 ಟೆಸ್ಟ್‌ ಮತ್ತು 121 ಏಕದಿನ ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 2 ಶತಕ ಮತ್ತು 20 ಅರ್ಧಶತಕಗಳನ್ನು ಒಳಗೊಂಡ 3194 ರನ್‌ಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೆ 82 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ.

Story first published: Wednesday, August 7, 2019, 22:03 [IST]
Other articles published on Aug 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+