For Quick Alerts
ALLOW NOTIFICATIONS  
For Daily Alerts
 

U-19 Women's T20 World Cup: ಇತಿಹಾಸ ಬರೆದ ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ

ಕ್ರಿಕೆಟ್‌ ಮೈದಾನದಲ್ಲಿ ಆಟಗಾರರು ದಿನವೂ ಒಂದೊಂದೆ ಯಶಸ್ವಿನ ಮೆಟ್ಟಿಲನ್ನು ಹತ್ತುತ್ತಲೇ ಇರುತ್ತಾರೆ. ಯಾವುದೇ ವಯೋಮಿತಿಯ ಕ್ರಿಕೆಟ್‌ ನಡೆದರೂ ಸಹ ಅಲ್ಲಿ ದಾಖಲೆ ಬರೆಯುವುದು ಕಟ್ಟಿಟ್ಟ ಬುತ್ತಿ. ಈಗ ಮಲೇಷ್ಯಾದಲ್ಲಿ ಅಂಡರ್‌ 19 ಮಹಿಳಾ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ವಿಶ್ವಕಪ್‌ನಲ್ಲಿ ಈ ಹಿಂದೆ ಯಾರೂ ಮಾಡದ ಅಪರೂಪದ ದಾಖಲೆಯನ್ನು ಭಾರತದ ಬ್ಯಾಟರ್‌ ಒಬ್ಬರು ಮಾಡಿದ್ದಾರೆ. ಹಾಗಿದ್ದರೆ ಅವರು ಮಾಡಿದ ದಾಖಲೆ ಏನು ಎಂಬ ಬಗ್ಗೆ ಕಂಪ್ಲೀಟ್‌ ವರದಿ ಇಲ್ಲಿದೆ.

ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್ 19 ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಈ ಟೂರ್ನಿ ಇದೇ 18 ರಂದು ಆರಂಭವಾಗಿದ್ದು, ರೋಚಕತೆ ಹುಟ್ಟಿಸಿದೆ. ಇನ್ನು ಆರು ತಂಡಗಳು ಮಾತ್ರ ಸೂಪರ್‌ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಭಾರತ ತನ್ನ ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಕಾದಾಟ ನಡೆಸಿತು. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ದಾಖಲೆ ಬರೆದಿದ್ದಾರೆ.

Gongadi Trisha Creates History with Century in U-19 Women s T20 World Cup

ಭಾರತದ ಆರಂಭಿಕ ಆಟಗಾರ್ತಿ ಗೊಂಗಡಿ ತ್ರಿಶಾ ಬಿರುಗಾಳಿಯ ಶತಕ ಗಳಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಯುವತಿಯರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಮೊದಲ ವಿಕೆಟ್‌ಗೆ ಜಿ ಕಮಲಾನಿ ಹಾಗೂ ತ್ರಿಷಾ ಜೋತೆಗೂಡಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 147 ರನ್‌ ಸಿಡಿಸಿತು. ಕಮಲಾನಿ 9 ಬೌಂಡರಿ ನೆರವಿನಿಂದ 51 ರನ್ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೂ ತ್ರಿಷಾ ಹಾಗೂ ಸನಿಕಾ ಜೋಡಿ ಅಜೇಯ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 61 ರನ್‌ಗಳ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು.

ತ್ರಿಷಾ ಶತಕ

ಆರಂಭಿಕ ಆಟಗಾರ್ತಿ ತ್ರಿಷಾ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಇವರು 59 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ ಅಜೇಯ 110 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಪರಿಣಾಮ ಭಾರತ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 208 ರನ್‌ ಸೇರಿಸಿತು.

ಗೊಂಗಡಿ ತ್ರಿಷಾ 18 ನೇ ಓವರ್‌ನಲ್ಲಿ ಶತಕ ಗಳಿಸುವ ಮೂಲಕ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇತಿಹಾಸ ಬರೆದರು. ಅಂಡರ್‌ 19 ವಿಶ್ವಕಪ್‌ ಇತಿಹಾಸದಲ್ಲಿ ಮೂರಂಕಿ ಮುಟ್ಟಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈ ಮೊದಲು ಈ ಸಾಧನೆಯನ್ನು ಯಾರು ಮಾಡಿಲ್ಲ.

ಬಾಂಗ್ಲಾದೇಶ ಸವಾಲಿನ ಗುರಿಯನ್ನು ಬೆನ್ನಟ್ಟಿ 14 ಓವರ್‌ಗಳಲ್ಲಿ 58 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಆಯುಷಿ ಶುಕ್ಲಾ 4, ವೈಷ್ಣವಿ ಶರ್ಮಾ, ಗೊಂಗಡಿ ತ್ರಿಷಾ ತಲಾ ಮೂರು ವಿಕೆಟ್‌ ಪಡೆದರು.

Story first published: Tuesday, January 28, 2025, 16:23 [IST]
Other articles published on Jan 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+