ಸಾರಾ- ಶುಬ್ಮನ್ ಗಿಲ್ ಮದುವೆ ಆಗೇ ಬಿಟ್ರಾ? ತೆಂಡೂಲ್ಕರ್ ಪುತ್ರಿಯ ವಿಚಾರದಲ್ಲೂ ಗೂಗಲ್ ಪ್ರಮಾದ

ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಅವಲಂಬಿಸಿರುವುದು 'ಗೂಗಲ್' ಎಂಬ ಮಾಯಾ ಲೋಕಕ್ಕೆ. ಪ್ರತಿಯೊಂದು ವಿಚಾರಕ್ಕೂ ಇಲ್ಲಿ ಅಂಗೈಯೊಳಗೇ ಉತ್ತರವಿದೆ. ಆದರೆ ಈ ಗೂಗಲ್ ಮೂಲಕ ನಾವು ಪಡೆದುಕೊಳ್ಳುತ್ತಿರುವ ಮಾಹಿತಿ ಎಲ್ಲವೂ ನಿಜವೇ ಎಂಬುದಕ್ಕೆ ಉತ್ತರ ಖಂಡಿತಾ ಅಲ್ಲ. ಯಾಕೆಂದರೆ ಗೂಗಲ್ ಸಾಕಷ್ಟು ಬಾರಿ ಯಡವಟ್ಟುಗಳನ್ನು ಮಾಡಿಕೊಂಡಿದೆ ಮತ್ತು ಅದು ಈಗಲೂ ಮುಂದುವರಿದಿದೆ.
ಕಳೆದೆರಡು ದಿನಗಳ ಹಿಂದೆಯಷ್ಟೇ ಗೂಗಲ್ ಅಸಂಬದ್ಧ ಉತ್ತರವೊಂದನ್ನು ನೀಡಿ ಸಾಕಷ್ಟು ಟ್ರೋಲ್ ಆಗಿತ್ತು. ಈಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಯುವ ಕ್ರಿಕೆಟಿಗ ಸಾರಾ ತೆಂಡೂಲ್ಕರ್ ವಿಚಾರದಲ್ಲೂ ಇದೇ ಆಗಿದೆ. ಹೀಗಾಗಿ ಮತ್ತೆ ಗೂಗಲ್ ಚರ್ಚೆಯ ಕೇಂದ್ರ ಸ್ಥಾನದಲ್ಲಿದೆ.

ಕೆಕೆಆರ್‌ನಲ್ಲಿ ಮಿಂಚುತ್ತಿರುವ ಗಿಲ್
ಕೊಲ್ಕತ್ತಾ ನೈಟ್‌ರೈಡರ್ಸ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಮಿಂಚುತ್ತಿರುವ ಶುಬ್ಮನ್ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ನಡುವೆ ಪ್ರೀತಿ ಪ್ರೇಮ ವಿಚಾರವಾಗಿ ಸಾಕಷ್ಟು ಚರ್ಚಗಳು ನಡೆದಿದೆ. ಅದಕ್ಕೆ ಪೂರಕವಾಗಿಯೇ ಈ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಿಕೊಂಡಿದ್ದಾರೆ. ಆದರೆ ಗೂಗಲ್ ಒಂದೆ ಹೆಜ್ಜೆ ಮುಂದೆ ಇಟ್ಟು ಶುಬ್ಮನ್ ಗಿಲ್ ಪತ್ನಿ ಸಾರಾ ತೆಂಡೂಲ್ಕರ್ ಎಂದು ತೋರಿಸುತ್ತಿದೆ.

ಗೂಗಲ್‌ನಿಂದ ಮತ್ತೊಂದು ಪ್ರಮಾದ
ಇದು ಗೂಗಲ್‌ನಿಂದ ಆಗಿರುವ ಮತ್ತೊಂದು ಪ್ರಮಾದವಾಗಿದೆ. ಗೂಗಲ್‌ನ ಕಾರ್ಯಾಚರಣೆಯಲ್ಲಿನ ಲೋಪದಿಂದಾಗಿ ಈ ರೀತಿಯ ಎಡವಟ್ಟುಗಳು ನಡೆಯುತ್ತದೆ. ಬಳಕೆದಾರರು ಹೆಚ್ಚಾಗಿ ಹುಡುಕುವ ಪದಗಳು ಹಾಗೂ ಶಬ್ಧಗಳ ಆಧಾರದಲ್ಲಿ ಗೂಗಲ್ ಉತ್ತರವನ್ನು ನೀಡುತ್ತದೆ. ಹೀಗಾಗಿ ಗೂಗಲ್‌ನಲ್ಲಿ ಈ ರೀತಿಯ ಪ್ರಮಾದಗಳು ನಡೆಯುತ್ತಲೇ ಇರುತ್ತದೆ. ಆದರೆ ಈ ಲೋಪವನ್ನು ಸರಿಪಡಿಸಲು ಗೂಗಲ್‌ಗೆ ಸಾಧ್ಯವಾಗಿಲ್ಲ.

ಶುಬ್ಮನ್-ಸಾರಾ ಬಗ್ಗೆ ವ್ಯಾಪಕ ಲೇಖನಗಳೇ ಕಾರಣ
ಶುಬ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಪ್ರೀತಿ ಹಾಗೂ ಒಡನಾಟದ ಬಗ್ಗೆ ಸಾಕಷ್ಟು ಲೇಖನಗಳು ಅಂತಾರ್ಜಾಲದಲ್ಲಿ ಪ್ರಕಟವಾಗಿದೆ. ಇಬ್ಬರೂ ಪ್ರೀತಿಸುವ ವಿಚಾರವಾಗಿ ಹಾಗೂ ಮದುವೆಯಾಗುವ ಬಗ್ಗೆ ಗಾಸಿಪ್ ಸುದ್ದಿಗಳು ಬಹಳಷ್ಟು ಪ್ರಕಟವಾಗಿದೆ. ಅಭಿಮಾನಿಗಳು ಕೂಡ ಈ ವಿಚಾರದಲ್ಲಿ ಹೆಚ್ಚು ಕುತೂಹಲಿಗಳಾಗಿ ಕೆಲ ಪ್ರಮುಖ ಶಬ್ಧಗಳನ್ನು ಪದೇ ಪದೆ ಬಳಸಿದ್ದಾರೆ. ಈ ಕಾರಣದಿಂದಾಗಿ ಗೂಗಲ್ ತಪ್ಪಾಗಿ ಉತ್ತರವನ್ನು ನೀಡುತ್ತಿದೆ.

ರಶೀದ್ ಖಾನ್ ಪತ್ನಿ ಅನುಷ್ಕಾ ಎಂದಿತ್ತು ಗೂಗಲ್
ಈಗಾಗಲೇ ಹೇಳಿದಂತೆ ಗೂಗಲ್ ಈ ತಪ್ಪು ಮಾಡುತ್ತಿರುವುದು ಇದು ಮೊದಲೂ ಅಲ್ಲ. ಕೊನೆಯೂ ಅಲ್ಲ. ಕಳೆಎರಡು ದಿನಗಳ ಹಿಂದೆ ರಶೀದ್ ಖಾನ್ ಪತ್ನಿ ಯಾರು ಎಂಬ ಪ್ರಶ್ನೆ ಕೇಳಿದಾಗ ಅನುಷ್ಕಾ ಶರ್ಮಾ ಎಂದು ಉತ್ತರವನ್ನು ನೀಡಿ ಟ್ರೋಲ್‌ಗೆ ಒಳಗಾಗಿತ್ತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿದ್ದರೂ ಈ ತಪ್ಪು ಮಾಹಿತಿಯನ್ನು ಗೂಗಲ್ ನೀಡುತ್ತಿದೆ. ಇದೀಗ ಮತ್ತೊಂದು ಎಡವಟ್ಟು ಮಾಡಿಕೊಳ್ಳುವ ಮೂಲಕ ಟ್ರೋಲಿಗರಿಗೆ ಆಹಾರವಾಗಿದೆ ಗೂಗಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications