ರಶೀದ್ ಖಾನ್ ಪತ್ನಿ ಅನುಷ್ಕಾ ಶರ್ಮಾ ಅಂತಿದೆ ಗೂಗಲ್, ಯಾಕ್ ಗೊತ್ತಾ?!

ಬೆಂಗಳೂರು: ಈಚಿನ ದಿನಗಳಲ್ಲಂತೂ ನಾವು ಅನೇಕ ವಿಚಾರಗಳಿಗಾಗಿ ಇಂಟರ್ ನೆಟ್ಟನ್ನೇ ಹೆಚ್ಚು ಅವಲಂಭಿಸಿದ್ದೇವೆ. ಗೊತ್ತಿಲ್ಲದ ವಿಚಾರವನ್ನು ತಿಳಿದುಕೊಳ್ಳುವುದಾಗಲಿ, ಗೊತ್ತಿದ್ದ ಸಂಗತಿಯನ್ನೇ ಖಾತರಿಪಡಿಸಿಕೊಳ್ಳುವುದಾಗಲಿ ಹೀಗೆ ಎಲ್ಲದಕ್ಕೂ ಅಂತರ್ಜಾಲದ ನೆರವು ಪಡೆದುಕೊಳ್ಳುತ್ತಿದ್ದೇವೆ. ಇಂಟರ್‌ನೆಟ್ ಕೂಡ ನಮ್ಮ ಬದುಕಿನ ಭಾಗವಾಗೇ ನಮ್ಮ ಜೊತೆ ಚಲಿಸುತ್ತಿದೆ. ಹಾಗಂತ ಇಂಟರ್‌ನೆಟ್‌ನಲ್ಲಿ ಸಿಗುವ ಎಲ್ಲಾ ಸಂಗತಿಗಳೂ ಸರಿಯಿರುತ್ತವೆಯಾ?
ಅನೇಕ ಬಾರಿ ಗೂಗಲ್‌ನಲ್ಲಿ ಸಿಕ್ಕ ಮಾಹಿತಿ ನಮ್ಮನ್ನು ಅಚ್ಚರಿಗೀಡು ಮಾಡಿದ್ದಿದೆ. ಸರ್ಚ್ ಮಾಡಿದಾಗ ಪಿಎಂ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರ ಅಂತ ಗೂಗಲ್ ಸುಳ್ಳು ಹೇಳಿತ್ತು. ಫೇಕು ಅಂತ ಯಾರನ್ನು ಕರೀತಾರೆ ಅಂತ ಕೇಳಿದಾಗಲೂ ಗೂಗಲ್‌ನಲ್ಲಿ ಮೋದಿ ಹೆಸರು ಕಾಣಿಸಿಕೊಂಡಿತ್ತು.
ಇಂಥದ್ದೇ ಮತ್ತೊಂದು ಎಡವಟ್ಟು ಗೂಗಲ್‌ನಲ್ಲಿ ಕಾಣಿಸಿಕೊಂಡಿದೆ. ಕ್ರಿಕೆಟರ್ ರಶೀದ್ ಖಾನ್ ಪತ್ನಿ ಅನುಷ್ಕಾ ಶರ್ಮಾ ಅಂತ ಈಗ ಗೂಗಲ್ ಹೇಳ್ತಿದೆ. ಯಾಕೆ ಗೊತ್ತಾ? ಕೆಳಗೆ ವಿವರಣೆಯಿದೆ ನೋಡಿ.

ರಶೀದ್ ಖಾನ್ ಹೆಂಡತಿ ಯಾರು?
ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಆಡುವ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಅವರ ಹೆಂಡತಿ ಯಾರು ಅಂತ ನೀವು ಗೂಗಲ್‌ನಲ್ಲಿ ಸರ್ಚ್ ಮಾಡಿದ್ರೆ ಅಲ್ಲಿ ಅನುಷ್ಕಾ ಶರ್ಮಾ ಎಂಬ ಉತ್ತರ ಬರುತ್ತದೆ. ಈಗಿನ್ನು 22ರ ಹರೆಯದವರಾದ ರಶೀದ್‌ಗೆ ಇನ್ನೂ ಮದುವೇನೇ ಆಗಿಲ್ಲ. ಇನ್ನು ಅನುಷ್ಕಾ ಶರ್ಮಾ ಅವರ ಹೆಂಡತಿ ಹೇಗಾಗುತ್ತಾರೆ?

ಇನ್ನೂ ಬದಲಾಗಿಲ್ಲ
ತಪ್ಪಾಗಿ ಬರುತ್ತಿರುವ ಈ ಸರ್ಚ್ ರಿಸಲ್ಟ್ ಅನ್ನು ಬಹಳಷ್ಟು ಸಾರಿ ಸರಿಪಡಿಸಲಾಗಿದೆ. ಆದರೂ ಈಗಲೂ ಮತ್ತದೇ ಫಲಿತಾಂಶ ಗೂಗಲ್‌ನಲ್ಲಿ ಸಿಗುತ್ತಿದೆ. ಖಾನ್ ವೈವಾಹಿಕ ಜೀವನದ ಬಗ್ಗೆ ತಪ್ಪಾಗಿ ಹೇಳುವ ಗೂಗಲ್ ಕೊನೆಗೆ ಸುಳ್ಳು ವೆಬ್ ಸೈಟ್ ಒಂದನ್ನು ಉಲ್ಲೇಖಿಸುತ್ತದೆ. ಅಂದ್ಹಾಗೆ ಭಾರತದ ನಾಯಕ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಅನ್ನೋದು ಸತ್ಯ ಸಂಗತಿ.

ಯಾಕೀ ಎಡವಟ್ಟುಗಳು?
ಗೂಗಲ್‌ನಲ್ಲಿ ಇಂಥ ಯಡವಟ್ಟುಗಳು ಆಗುತ್ತಿರುತ್ತವೆ ಯಾಕೆಂದರೆ ಗೂಗಲ್ ಒಂದು ಪುಟ, ಸಂಗತಿ, ಹೆಸರು ಇಂಥದ್ದನ್ನೆಲ್ಲಾ ತಂತಾನೆ ನಿರ್ಧರಿಸುವ ಒಂದು ಯಂತ್ರಾವಸ್ಥೆ. ಈ ಬಾರಿ ಈ ಯಡವಟ್ಟಾಗಿದೆ ಯಾಕೆಂದರೆ, ಅನುಷ್ಕಾ ಶರ್ಮಾ ಅವರು ರಶೀದ್ ಖಾನ್ ಅವರ ಹೆಂಡತಿ ಎಂದು ಸುಳ್ಳು ಸುದ್ದಿ ನೀಡಿದ ವೆಬ್‌ಸೈಟ್ ಅನ್ನು ಉಲ್ಲೇಖಿಸುವ ಸಲುವಾಗಿ ಗೂಗಲ್ ಈ ಸರ್ಚ್ ರಿಸಲ್ಟ್ ನೀಡುತ್ತಿದೆ.

ಇಂಟರ್ವ್ಯೂ ಕಾರಣ!
ಸರ್ಚ್ ಇಂಜಿನ್‌ಗಳು ಈ ಹಿಂದೆ ಪ್ರಕಟವಾದ ಸುದ್ದಿಗಳನ್ನು ಆಧರಿಸಿಯೂ ಫಲಿತಾಂಶ ನೀಡೋದಿದೆ. ಒಮ್ಮೆ ಸಂದರ್ಶನದ ವೇಳೆ ರಶೀದ್ ಖಾನ್ ಅವರು ಅನುಷ್ಕಾ ಶರ್ಮಾ ಮತ್ತು ಪ್ರೀತಿ ಝಿಂಟಾ ತನ್ನ ಫೇವರಿಟ್ ಬಾಲಿವುಡ್ ನಟಿಯರು ಎಂದಿದ್ದರು. ಆಗ ಈ ಸುದ್ದಿ ಅನೇಕ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿತ್ತು. ಹೀಗಾಗಿಯೇ ಗೂಗಲ್ ಈಗ ಸರ್ಚ್ ಕೊಡುವಾಗ ಫಲಿತಾಂಶದಲ್ಲಿ ಅನುಷ್ಕಾ ಶರ್ಮಾ ಹೆಸರು ತೋರಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications