For Quick Alerts
ALLOW NOTIFICATIONS  
For Daily Alerts
 

'83' ಟ್ರೈಲರ್ ನೋಡಿ ಸಿನಿಮಾ ಬಿಡುಗಡೆಯಾಗುವವರೆಗೂ ಏನೂ ಹೇಳಲಾರೆ ಎಂದ ಕಪಿಲ್ ದೇವ್

Got emotional after watching 83 trailer and I cant say anything right now says Kapil Dev

83 ಎಂಬುದು ಬಾಲಿವುಡ್ ಚಿತ್ರರಂಗದಲ್ಲಿ ತಯಾರಾಗಿರುವ ಚಿತ್ರ. ಈ ಚಿತ್ರವು 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಅಂತರರಾಷ್ಟ್ರೀಯ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದರ ಮೇಲೆ ತಯಾರಾಗಿರುವಂತ ಚಿತ್ರವಾಗಿದೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಮಾಡಿದ್ದು, ನಾಯಕಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ.

ಇನ್ನು ಈ ಚಿತ್ರದ ಟ್ರೈಲರ್ ಅನ್ನು ರಿಲಯನ್ಸ್ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್‌ನಲ್ಲಿ ನವೆಂಬರ್‌ 30ರಂದು ಬಿಡುಗಡೆ ಮಾಡಲಾಗಿದ್ದು 2 ವಾರಗಳಲ್ಲಿ ಬರೋಬ್ಬರಿ 68 ಮಿಲಿಯನ್ ವೀಕ್ಷಣೆ ಮತ್ತು 1.4 ಮಿಲಿಯನ್ ಮೆಚ್ಚುಗೆಗಳನ್ನು ಪಡೆದುಕೊಂಡು ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಈ ಟ್ರೈಲರ್‌ನಲ್ಲಿ ಕಪಿಲ್ ದೇವ್ 1983ರ ವಿಶ್ವಕಪ್ ಟೂರ್ನಿಯಲ್ಲಿ ಎದುರಿಸಿದ ಸವಾಲುಗಳು ಹಾಗೂ ಇಡೀ ವಿಶ್ವಕ್ಕೆ ಭಾರತ ಕ್ರಿಕೆಟ್ ಏನು ಎಂಬುದನ್ನು ತೋರಿಸಿಕೊಟ್ಟಂತಹ ಕೆಲ ದೃಶ್ಯಗಳನ್ನು ತೋರಿಸಲಾಗಿದ್ದು 3 ನಿಮಿಷ 50 ಸೆಕೆಂಡುಗಳ ಈ ಟ್ರೈಲರ್ ಮೈ ಜುಮ್ಮೆನಿಸುತ್ತದೆ. ಅದರಲ್ಲಿಯೂ ಚಿತ್ರದ ಸಂಭಾಷಣೆ ಮಾತ್ರ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯನ್ನೂ ಸಹ ಭಾವುಕನನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ 83 ಚಿತ್ರ ಇದೇ ಡಿಸೆಂಬರ್ 24ರಂದು ಬಿಡುಗಡೆಯಾಗುತ್ತಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು ಇತ್ತೀಚೆಗಷ್ಟೇ ಉನ್ನತ ಮಟ್ಟದ ಇಂಗ್ಲಿಷ್ ಶಿಕ್ಷಣ ನೀಡುವ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಪಿಲ್ ದೇವ್ ತಮಗೆ ನಾಯಕನ ಪಟ್ಟವನ್ನು ನೀಡಿ ನಿರ್ಮಿಸಲಾಗಿರುವ 83 ಚಿತ್ರದ ಟ್ರೇಲರ್ ಕುರಿತಾಗಿ ಮಾತನಾಡಿದರು.

"ಚಿತ್ರದ ಟ್ರೈಲರ್ ವೀಕ್ಷಿಸಿದ ನಂತರ ನಾನು ತುಂಬ ಭಾವುಕನಾದೆ, ಆದರೆ ಡಿಸೆಂಬರ್ 24ರಂದು ಚಿತ್ರ ಬಿಡುಗಡೆಯಾಗಲಿದ್ದು ಅಂತಿಮವಾಗಿ ಯಾವ ರೀತಿ ಮೂಡಿಬಂದ ಇರಲಿದೆ ಎಂಬುದು ತಿಳಿಯಲಿದೆ. ಚಿತ್ರ ಬಿಡುಗಡೆಯಾಗುವವರೆಗೂ ನಾನು ಏನನ್ನೂ ಹೇಳಲು ಆಗುವುದಿಲ್ಲ" ಎಂದು ಕಪಿಲ್ ದೇವ್ ಹೇಳಿದರು.

ಹಾಗೂ ಇನ್ನೂ ಮುಂದುವರಿದು ಮಾತನಾಡಿದ ಕಪಿಲ್ ದೇವ್ "ರಣವೀರ್ ಸಿಂಗ್ ಓರ್ವ ಅತ್ಯದ್ಭುತ ನಟ. ನನ್ನ ಪ್ರಕಾರ ಆತನಿಗೆ ಯಾವುದೇ ರೀತಿಯ ಸಹಾಯ ಬೇಕಾಗಿಲ್ಲ. ನನ್ನ ಜೊತೆ ಆತ ಕೆಲ ಸಮಯ ಕಳೆದದ್ದು ಬಿಟ್ಟರೆ ಉಳಿದದ್ದನ್ನೆಲ್ಲಾ ಆತ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ" ಎಂದು ರಣವೀರ್ ಸಿಂಗ್ ಕುರಿತು ಶ್ಲಾಘಿಸಿದರು.

ಇನ್ನು ಟ್ರೈಲರ್ ಬಿಡುಗಡೆಯಾದ ನಂತರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ 83 ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು ಒಳ್ಳೆಯ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಹುಟ್ಟಿಸಿದೆ. ಡಿಸೆಂಬರ್ 24ರಂದು ಚಿತ್ರ ತೆರೆ ಮೇಲೆ ಬರಲಿದ್ದು 1983ರಲ್ಲಿ ಭಾರತ ಇಂಗ್ಲೆಂಡ್ ಮತ್ತು ವೇಲ್ಸ್ ನೆಲದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಯಾವ ರೀತಿ ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸುವುದರ ಮೂಲಕ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು ಎಂಬ ಸಂಪೂರ್ಣ ಚಿತ್ರಣ ಅನಾವರಣಗೊಳ್ಳಲಿದೆ.

Story first published: Wednesday, December 15, 2021, 9:55 [IST]
Other articles published on Dec 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+